ಧ್ವನಿ ವರ್ದಕ. :: ಮಸೀದಿ,ಮಂದಿರ,ಚರ್ಚ್,ಗಳಿಗೆ ನೋಟೀಸ್

ನೋಟೀಸ್ ಮಾದರಿ

ಬೆಳಗಾವಿ- ಧ್ವನಿ ವರ್ದಕಗಳಲ್ಲಿ ನಿಗದಿ ಪಡಿಸಿರುವ ಶಬ್ದಕ್ಕಿಂತ ಹೆಚ್ವಿನ ಶಬ್ದ ಮಾಡದಂತೆ,ಬೆಳಗಾವಿ ಪೋಲೀಸರು ಮಹಾನಗರದ ಮಸೀದಿ,ಮಂದಿರ,ಚರ್ಚ್,ಮಾಲ್ ಸೇರಿದಂತೆ ಧ್ವನಿವರ್ದಕಗಳನ್ನು ಬಳಕೆ ಮಾಡುವ ಪ್ರಾರ್ಥನಾ ಸ್ಥಳಗಳು ಸೇರಿದಂತೆ ಎಲ್ಲರಿಗೂ ನೋಟೀಸ್ ಜಾರಿ ಮಾಡಲಾಗಿದೆ.

ಬೆಳಗಾವಿ ಮಹಾನಗರದ ಎಲ್ಲ ಪೋಲೀಸ್ ಠಾಣೆಗಳಿಂದ ಠಾಣಾ ಹದ್ದಿಯಲ್ಲಿ ಬರುವ ಎಲ್ಲ ಪ್ರಾರ್ಥನಾ ಸ್ಥಳಗಳ ನಿರ್ವಾಹಕರಿಗೆ ಈಗಾಗಲೇ ನೋಟಿಸ್ ಜಾರಿಯಾಗಿದ್ದು ಪೋಲೀಸ್ ಠಾಣೆಗಳಿಂದಲೇ ನೋಟೀಸ್ ಹಂಚಿಕೆಯಾಗಿದೆ

ನೋಟೀಸ್ ಮಾದರಿಯನ್ನು ಈ ಸುದ್ದಿಯ ಜೊತೆ ಅಪಲೋಡ್ ಮಾಡಲಾಗಿದ್ದು ಓದುಗರು ಈ ನೋಟೀಸ್ ನಲ್ಲಿರುವ ಅಂಶಗಳನ್ನು ಗಮನಿಸಿ ಧ್ವನಿವರ್ದಕ ಬಳಕೆಯ ಕುರಿತು 1986 ರಲ್ಲಿ ರಚಿಸಲಾದ ಕಾಯ್ದೆಯನ್ನು ತಪ್ಪದೇ ಪಾಲಿಸಬೇಕು,ಕಾಯ್ದೆಯ ಉಲ್ಲಂಘನೆ ಆದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ನೋಟೀಸ್ ನಲ್ಲಿ ಎಚ್ಚರಿಸಲಾಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *