Breaking News

ಮೂರು ಮಕ್ಕಳನ್ನು ಬಿಟ್ಟು,ಮತ್ತೊಂದು ಮದುವೆ …..!!

ಬೆಳಗಾವಿ- 10,15-19 ವರ್ಷ ವಯಸ್ಸಿನ ಮೂರು ಜನ ಗಂಡ ಮಕ್ಕಳು,ತಂದೆ ಮೃತಪಟ್ಟ ಬಳಿಕ ತಾಯಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ, ನೌಕರಿ ಸಿಕ್ಕ ಮೇಲೆ ಮೂರು ಜನ ಮಕ್ಕಳನ್ನು ಬಿಟ್ಟು ತಾಯಿ ಬೇರೊಬ್ಬನ ಜೊತೆ ಮದುವೆಯಾಗಿದ್ದು,ತಾಯಿ ಇದ್ದರೂ ಅನಾಥವಾಗಿರುವ ಮೂರು ಜನ ಮಕ್ಕಳು ಈಗ ನಮ್ಮ ತಾಯಿಯನ್ನು ನಮಗೆ ಕೊಡಿ ಎಂದು ಪೋಲೀಸ್ ಠಾಣೆಯ ಮೆಟ್ಟಲೇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಗಣೇಶ್ ಪೂರದಲ್ಲಿ ಸುಖವಾಗಿದ್ದ ಸಂಸಾರದಲ್ಲಿ ಲವ್ ಈ ಸಂಸಾರದ ನೆಮ್ಮದಿಯನ್ನೇ ಬರ್ಬಾದ್ ಮಾಡಿದೆ. ನಲವತ್ತು ವರ್ಷದ ತಾಯಿಯೊಬ್ಬಳು ಮೂರು ಜನ ಮಕ್ಕಳನ್ನು ಬಿಟ್ಟು ಬೇರೊಬ್ಬ ಯುವಕನ ಜೊತೆ ಮದುವೆಯಾಗಿದ್ದಾಳೆ. ಮಕ್ಕಳು ಅಮ್ಮಾ ನೀನು ಮರಳಿ ಮನೆಗೆ ಬಾ…ಅಂತೀದ್ದಾರೆ ತಾಯಿ ನಾ..ಒಲ್ಲೆ ಹೊಸ ಕರಿಮಣಿ ಮಾಲೀಕನ ಜೊತೆ ಇದ್ದೇನೆ ನಾನು ಬರೋಲ್ಲ ಅಂತೀದ್ದಾಳೆ, ಬೆಳಗಾವಿಯ ಕ್ಯಾಂಪ್ ಪೋಲೀಸರಿಗೂ ದಿಕ್ಕು ತೋಚದಂತಾಗಿ, ಮೂರು ಜನ ಮಕ್ಕಳು ನಮ್ಮ ತಾಯಿ ನಮಗೆ ಮರಳಿಸಿ, ನಾವು ಬೇಕಾದ್ರೆ ಶಾಲೆ ಬಿಟ್ಟು ದುಡಿದು ತಾಯಿಯನ್ನು ಸಾಕ್ತೀವಿ ಅಂತೀದ್ದಾರೆ.ತಾಯಿ ನೋಡಿದ್ರೆ ಬೇರೊಬ್ಬನ ಜೊತೆ ಸಂಸಾರ ಶುರು ಮಾಡಿದ್ದಾಳೆ ಮೂರು ಜನ ಮಕ್ಕಳು ಈಗ ಸದ್ಯಕ್ಕೆ ಅವರ ಅಜ್ಜಿಯ ಆಶ್ರಯದಲ್ಲಿದ್ದು ಈ ವಿಚಾರದಲ್ಲಿ ಪೋಲೀಸರೂ ಸಹ ಅಸಹಾಯಕ ರಾಗಿದ್ದಾರೆ.

ಮೂರು ಮಕ್ಕಳನ್ನು ಬಿಟ್ಟು ಈ ತಾಯಿ ವಿವಾದಾತ್ಮಕ ಯುವಕನ ಜೊತೆ ಮದುವೆ ಆಗಿದ್ದಾಳೆ, ಈ ಯುವಕ ಈ ಹಿಂದೆ ಮಹಿಳೆಯೊಬ್ಬಳಿಗೆ ಫೋನ್ ಮಾಡಿ ಆಯ್ ಲವ್ ಯೂ ಎಂದು ಹೇಳಿದ್ದ ಆ ಮಹಿಳೆ ಆತನನ್ನು ಹುಡುಕಿ ಚಪ್ಪಲಿಯಿಂದ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಿಳೆಯಿಂದ ಚಪ್ಪಲಿ ಏಟು ತಿಂದ ಯುವಕನ ಮೋಹದ ಬಲೆಗೆ ಮೂರು ಮಕ್ಕಳ ತಾಯಿ ಬಿದ್ದಿದ್ದಾಳೆ. ನೀನು ಮದುವೆಯಾದ ಯುವಕನ ನಡತೆ ಸರಿ ಇಲ್ಲ, ಅಮ್ಮಾ ನೀನು ಮರಳಿ ಮನೆಗೆ ಬಾ ಎಂದು ಮೂರು ಜನ ಮಕ್ಕಳು ಕರೆಯುತ್ತಿದ್ದು ಆದ್ರೆ ತಾಯಿ ಫಾಲ್ ಇನ್ ಲವ್ ತಾಯಿಗೆ ಮಕ್ಕಳ ಚಿಂತೆ ಇಲ್ಲ.ಮಾದ್ಯಮಗಳು ಈ ವಿಚಾರವಾಗಿ ತಾಯಿಯನ್ನು ಪ್ರಶ್ನೆ ಮಾಡಿದಾಗ, ಬೇರೆ ಮದುವೆ ಆಗೋದು ಬಿಡೋದು ನನ್ನ ವೈಯಕ್ತಿಕ ವಿಚಾರ ನೀಮಗೇಕೆ ಬೇಕು ನನ್ನ ಉಸಾಬರಿ ಅಂತೀದ್ದಾಳೆ.

ಒಟ್ಟಾರೆ ಲವ್ ಮೂರು ಜನ ಮಕ್ಕಳ ಬದುಕನ್ನು ಬರ್ಬಾದ್ ಮಾಡಿದೆ. ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಲವ್ ಬರ್ಬಾದ್  ಎನ್ನುವಂತಾಗಿದೆ.

Check Also

ನಾನು ಗಟ್ಟಿಯಾಗಿದ್ದೇನೆ ಎಂದು ಹೊರಗಡೆ ಇದ್ದೇನೆ- ರಮೇಶ್ ಜಾರಕಿಹೊಳಿ

ಅಥಣಿ-ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ವಿಚಾರಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು,ದಲಿತರಿಗೆ ಒಕ್ಕಲಿಗರಿಗೆ ಬೈದರಿಯುವದು ಇನ್ನೂ ಪ್ರೂವಾಗಿಲ್ಲ.ಇದನ್ನು ಸಿಡಿ ಶಿವು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.