Breaking News

ಬೆಳಗಾವಿ, ವಂದೇ ಭಾರತ್ ರೈಲಿಗಾಗಿ ಹುಬ್ಬಳ್ಳಿಯಲ್ಲಿ ಮೀಟೀಂಗ್…!!

ಬೆಳಗಾವಿ:- ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕರ ಕಛೇರಿಯಲ್ಲಿ ಇಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರು ಬೆಳಗಾವಿ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತಹ ವಿಷಯಗಳ ಕುರಿತು ಪ್ರಧಾನ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಲು ಇರುವ ತೊಡಕುಗಳು ಹಾಗೂ ಅದರ ನಿವಾರಣೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಹಾಗೂ ಆದಷ್ಟು ಬೇಗ ಒಂದೇ ಭಾರತ ರೈಲು ಪ್ರಾರಂಭಿಸಬೇಕೆAದು ಸಂಸದ ಈರಣ್ಣ ಕಡಾಡಿಯವರು ಅಧಿಕಾರಿಗಳಿಗೆ ಒತ್ತಾಯಿಸಿದರು. ಹಾಗೂ ಧಾರವಾಡ-ಕಿತ್ತೂರ ಮಾರ್ಗವಾಗಿ ಬೆಳಗಾವಿವರೆಗಿನ ನೂತನ ರೈಲು ಮಾರ್ಗದ ನಿರ್ಮಾಣ ಕಾಮಗಾರಿಯು ನಿಧಾನಗತಿಯಲ್ಲಿ ನಡೆದಿದ್ದು, ತ್ವರಿತ ಗತಿಯಲ್ಲಿ ಕೈಗೊಳ್ಳಲು ನಿರ್ದೇಶಿಸಲಾಯಿತು ಮತ್ತು ಬೆಳಗಾವಿ-ಮಿರಜ ನಡುವೆ ಈ ಹಿಂದೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲುಗಳನ್ನು ಪುನ: ಪ್ರಾರಂಭಿಸುವುದಕ್ಕೆ ಅಗತ್ಯಕ್ಕೆ ಕ್ರಮ ಕೈಗೊಳ್ಳುವುದು, ಪಂಡರಪುರ ಹಾಗೂ ರಾಜಸ್ಥಾನ ಕಡೆಗೆ ತೆರಳುವ ರೈಲುಗಳನ್ನು ಖಾನಾಪುರ, ಘಟಪ್ರಭಾ, ರಾಯಬಾಗ ನಿಲ್ದಾಣಗಳಲ್ಲಿ ನಿಲುಗಡೆಗೆ ಕ್ರಮ ಕೈಕೊಳ್ಳಲು ನಿರ್ದೇಶಿಸಲಾಯಿತು.

ಬೆಳಗಾವಿ ಜಿಲ್ಲೆಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಗೆ ಹೊಂದಿಕೊAಡಿದ್ದು ಎಲ್ಲ ಸಾರ್ವಜನಿಕರ ಅನುಕೂಲಕ್ಕಾಗಿ ಮುಂಬೈ, ದೆಹಲಿ. ತಿರುಪತಿ, ಮಂಗಳೂರು, ಹೈದರಾಬಾದ, ಬೀದರ ಹಾಗೂ ಸೊಲ್ಲಾಪುರ ನಗರಗಳನ್ನು ಸಂಪರ್ಕಿಸುವ ನೂತನ ರೈಲುಗಳನ್ನು ಪ್ರಾರಂಭಿಸುದಕ್ಕಾಗಿ ಚರ್ಚಿಸಲಾಯಿತು.
ಬೆಳಗಾವಿ ರೈಲು ನಿಲ್ದಾಣದ ಪಶ್ಚಿಮದ ಬಾಜು ಏಪ್.ಒ.ಬಿ ನಿರ್ಮಾಣ ಮಾಡುವುದು, ಪ್ಲಾಟ್‌ಫಾರ್ಮ್ ನಂಬರ್ 4ರಲ್ಲಿ ಎಸ್ಕಲೇಟರ್ ಅಳವಡಿಸುವುದು, ದೇಸೂರಿನಲ್ಲಿ ಇನ್ನೊಂದು ಫಿಟ್ ಲೈನ್ ಪ್ರಾರಂಭಿಸುವುದು. ಹೀಗೆ ಹಲವು ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗಿಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವಾಸ್ತವ್, ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ, ಪ್ರಧಾನ ವ್ಯವಸ್ಥಾಪಕರ ಆಪ್ತ ಕಾರ್ಯದರ್ಶಿ ಸುನೀಲ ಸೇರಿದಂತೆ ಇಲಾಖೆಯ ಸಂಬAಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.