ಬೆಳಗಾವಿ- ಬೈಲಹೊಂಗಲ ಪಕ್ಕದ ಹೊಸೂರ ಗ್ರಾಮದಲ್ಲಿರುವ ಗುರು ಮಡಿವಾಳೇಶ್ಠವರ ಮಠದ ಗಂಗಾಧರ ಸ್ವಾಮಿಜಿಯ ಕೊಲೆಗೆ ಯತ್ನಿಸಿದ ಘಟನೆ ತಡರಾತ್ರಿ ನಡೆದಿದೆ.
ಮದ್ಯರಾತ್ರಿ ಮಠದಲ್ಲಿ ಕಳ್ಳತನ ಮಾಡಲು ವ್ಯಕ್ತಿಯೊಬ್ಬ ಮಠಕ್ಕೆ ನುಗ್ಗಿದ್ದಾನೆ.ನಿದ್ದೆಯಿಂದ ಎಚ್ಚರಗೊಂಡ ಸ್ವಾಮೀಜಿಗಳು ತೀವ್ರ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ.ಕಳವು ಮಾಡಲು ಬಂದ ವ್ಯಕ್ತಿ ಸ್ವಾಮೀಜಿಗಳ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಬೈಲಹೊಂಗ ಪೋಲೀಸರು ದೌಡಾಯಿಸಿ ಹೊಸೂರ ಗ್ರಾಮದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಆರಂಭಿಸಿದ್ದಾರೆ.

ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ