ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಬೆಂಬಿಡದೇ ಗಡಿನಾಡು ಬೆಳಗಾವಿ ಜಿಲ್ಲೆಯನ್ನು ನಡುಗಿಸಿದೆ,ಈವರೆಗೆ ಜಿಲ್ಲೆಯಲ್ಲಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ 130 ಸೊಂಕಿತರು ಪತ್ತೆಯಾಗಿದ್ದಾರೆ ಜೆಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು ಇಂದು ಬರೊಬ್ಬರಿ 1009 ಜನರ ರಿಪೋರ್ಟ್ ಬಾಕಿ ಇದೆ .
ಬೆಳಗಾವಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಈ ವರೆಗೆ ಹತ್ತು ಸಾವಿರದ 293 ಜನರ ಮೇಲೆ ನಿಗಾ ಇಟ್ಟಿದೆ. ಇದರಲ್ಲಿ ಹಲವಾರು ಜನ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಇನ್ನು ಸಾವಿರಾರು ಜನ ಕ್ವಾರಂಟೈನ್ ಅವಧಿ ಮುಗಿಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಹೆಲ್ತ್ ಬುಲಿಟೀನ್ ಪ್ರಕಾರ ಈವರೆಗೆ ಇಟ್ಟು 130 ಸೊಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 8 ಜನ ಬಾಗಲಕೋಟೆ ಜಿಲ್ಲೆಯವರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ 122 ಸೊಂಕಿತರ ಪೈಕಿ ಈವರೆಗೆ 93 ಜನ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ,ಒಬ್ಬರು ಮೃತ ಪಟ್ಟಿದ್ದು ಜಿಲ್ಲೆಯಲ್ಲಿ ಕೇವಲ 28 ಜನರಲ್ಲಿ ಸೊಂಕು ಸಕ್ರೀಯವಾಗಿದೆ.
ಬೆಳಗಾವಿ ಆರೋಗ್ಯ ಇಲಾಖೆ ಹೊರರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಆಗಮಿಸಿರುವ, ಸೊಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಒಟ್ಟು 1009 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದು ,ಬೆಳಗಾವಿ ಜಿಲ್ಲಾಡಳಿತ ಒಟ್ಟು 1009 ಜನರ ರಿಪೋರ್ಟ್ ಗಾಗಿ ಕಾಯುತ್ತಿದೆ.
1009 ಜನರ ರಿಪೋರ್ಟ್ ಇನ್ನೂ ಬರೋದು ಬಾಕಿ ಇದ್ದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.