ಬೆಳಗಾವಿ- ಲಾಕ್ ಡೌನ್ ಸಮಯದಲ್ಲಿ ಬೆಳಗಾವಿ ನಗರದಲ್ಲಿ ಜೀವದ ಹಂಗು ತೊರೆದು ಸ್ವಚ್ಛತೆ ಕಾಪಾಡಿದ ಬೆಳಗಾವಿ ನಗರದ ಪೌರ ಕಾರ್ಮಿಕರಿಗೆ ಇಂದು ಬೆಳಿಗ್ಗೆ ಉಪಹಾರಕ್ಕೆ ಆಮಂತ್ರಿಸಿ ಖುದ್ದಾಗಿ ಅವರಿಗೆ ಉಪಹಾರವನ್ನು ನೀಡಿದ ಶಾಸಕ ಅಭಯ ಪಾಟೀಲ ಪೌರ ಕಾರ್ಮಿಕರನ್ನು ಅಭಿಮಾನದಿಂದ ಸಮ್ಮಾನಿಸಿದ್ದಾರೆ.
ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲರ ಉಪಹಾರದ ಆಮಂತ್ರಣಕ್ಕೆ ಓಗೊಟ್ಟು ಸುಮಾರು 600 ಪೌರ ಕಾರ್ಮಿಕರು ಬೆಳಗಾವಿ ಮಹಾವೀರ ಭವನದಲ್ಲಿ ಜಮಾಯಿಸಿದ್ದರು.
ಶಾಸಕ ಅಭಯ ಪಾಟೀಲ ಖುದ್ದಾಗಿ ನಿಂತು ಎಲ್ಲ ಪೌರ ಕಾರ್ಮಿಕರಿಗೆ ಉಪಹಾರವನ್ನು ಉಣಬಡಿಸಿದರು,ಅವರ ಜೊತೆಗೆ ಗಂಟೆಗಳ ಕಾಲ,ಕಾಲಕಳೆದರು,ಅವರ ಸಮಸ್ಯೆಗಳನ್ನು ಆಲಿಸಿದರು ನಂತರ ಪೌರ ಕಾರ್ಮಿಕರನ್ನು ಬಿಳ್ಕೊಡುವಾಗ ಪ್ರತಿಯೊಬ್ಬರಿಗೂ ಆಹಾರದ ಕಿಟ್ ಗಳನ್ನು ನೀಡಿ ಬಿಳ್ಕೊಟ್ಟರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ,ಲಾಕ್ ಡೌನ್ ಅವಧಿಯಲ್ಲಿ ಬೆಳಗಾವಿಯ ಪೌರ ಕಾರ್ಮಿಕರು ಜೀವದ ಹಂಗು ತೊರೆದು ಬೆಳಗಾವಿಯಲ್ಲಿ ಸ್ವಚ್ಛತೆ ಕಾಪಾಡಿದ್ದಾರೆ.ವೈದ್ಯರು,ಪ್ಯಾರಾ ಮೇಡಿಕಲ್,ಅಂಗನವಾಡಿ,ಆಶಾ ಕಾರ್ಯಕರ್ತೆಯರ ಸೇವೆಯ ಯಂತೆ ಪೌರ ಕಾರ್ಮಿಕರೂ ಮಾಡಿದ ಸೇವೆ ಅಮೂಲ್ಯವಾಗಿದೆ.ಪೌರ ಕಾರ್ಮಿಕರು ಕೊರೋನಾ ವಾರಿಯರ್ಸಗಳು ಎಂದು ಅಭಯ ಪಾಟೀಲ ಹೇಳಿದರು.