ಬೆಳಗಾವಿ- ನಗರಕ್ಕೆ ಹೊಂದಿಕೊಂಡಿರುವ ಮಾರ್ಕಂಡೇಯ ನದಿಯಲ್ಲಿ ಸದಾಶಿವ ನಗರದ ಸಾನಿಕಾ ಪಾಟ್ನೇಕರ ಎಂಬ ಯುವತಿ ತನ್ನ ಸ್ನೇಹಿತರಿಗೆ ಗುಡ್ ಬಾಯ್ ಎಂದು ಮೆಸೆಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲಿಯೇ ಹತ್ತರಕಿಯ ಯುವಕನ ಶವ ಶನಿವಾರ ಉಚಗಾಂವ ಬಳಿ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದೆ
ಉಚಗಾಂವ ಬಳಿ ಮಾರ್ಕಂಡೇಯ ನದಿಯಲ್ಲಿ ಹತ್ತರಕಿ ಗ್ರಾಮದ 28 ವರ್ಷದ ಕೆಂಪಣ್ಣ ಬಸಪ್ಪ ಗಸ್ತಿ ಎಂಬಾತನ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ ಕಾಕತಿ ಪೋಲಿಸರು ಶವವನ್ನು ನದಿಯಿಂದ ಹೊರ ತೆಗೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ
ಲವ್ ಮಾಡಿ ಮೋಸ ಹೋದವರೆಲ್ಲ ಮಾರ್ಕಂಡೇಯ ನದಿಗೆ ಹಾರಿ ಆತ್ಮಹತ್ಯೆಮಾಡಿಕೊಳ್ಳುತ್ತಿದ್ದು ಈ ನದಿ ಸುಸಾಯಿಡ್ ಪಾಯಿಂಟ್ ಆಗಿದೇಯಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
