ಊಭಯ ಸಧನಗಳಲ್ಲಿ ಮಹಾದಾಯಿ….

ಬೆಳಗಾವಿ- ಉಭಯ ಸಧನಗಳಲ್ಲಿ ಗುರುವಾರ ಮಹಾದಾಯಿ ಕುರಿತು ಮಹತ್ವದ ಚರ್ಚೆ ನಡೆಯಿತು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ  ಮಹಾದಾಯಿ ಹಾಗು ಕಳಸಾ ಬಂಡೂರಿ ನಾಲಾ ಯೋಜನೆಯ ಕುರಿತು ಸರ್ಕಾರ ಕೈಗೊಂಡ ಕ್ರಮಗಳು ಹಾಗು ಈ ಕುರಿತು ನಡೆದ ಕಾನೂನಾತ್ಮಕ ಹೋರಾಟದ ಬೆಳವಣೆಗೆಗಳ ಕುರಿತು ಸುಧೀರ್ಘವಾದ ಹೇಳಿಕೆ ನೀಡಿದರು

ಮುಖ್ಯಮಂತ್ರಿಗಳ ಹೇಲಿಕೆಯ ನಂತರ ಶಾಸಕ ಕೋನರೆಡ್ಡಿ ಮಾತನಾಡಿ ಕಳಸಾ ಬಂಡೂರಿ ಹಾಗು ಮಹಾದಾಯಿ ಯೋಜನೆಗಳ ಅನುಷ್ಠಾನಕ್ಕಾಗಿ ಅಖಂಡ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿದೆ ಈ ಯೋಜನೆಗೆ ಸಮಂಧಿಸಿದಂತೆ ಬೆಳಗಾವಿಯ ಅಧಿವೇಶನದಲ್ಲಿ ಪರಿಣಾಮಕಾರಿಯಾದ ನಿರ್ಣಯ ಕೈಗೊಳ್ಳಬೇಕು ಈ ಬಗ್ಗೆ ಸ್ಪಷ್ಠ ನಿರ್ಧಾರ ಕೈಗೊಳ್ಳದಿದ್ದರೆ ಸದನದಲ್ಲಿಯೇ ಮಲಗುತ್ತೇನೆ ಎಂದರು

ಸವದತ್ತಿ ಶಾಸಕ ಾನಂದ ಮಾಮನಿ ಮಾತನಾಡಿ ಮಲಪ್ರಭಾ ನದಿಯ ನೀರನ್ನು ಹಲವಾರು ಜಿಲ್ಲೆಗಳ ಜನ ಕುಡಿಯುತ್ತಾರೆ ಮಲಪ್ರಭಾ ನದಿ ಈ ಭಾಗದ ಜೀವನದಿಯಾಗಿದೆ ಈ ನದಿಯಲ್ಲಿ ನಿರಂತರವಾಗಿ ನೀರು ಹರಿಯಬೇಕಾದರೆ ಮಹಾದಾಯಿ ಹಾಗು ಕಳಸಾ ಬಂಡೂರಿ ನಾಲೆಗಲನ್ನು ಮಲಪ್ರಭೆಗೆ ಜೋಡಿಸುವದು ಅತ್ಯಗತ್ಯ ಹೀಗಾಗಿ ಈ ವಿಷಯದಲ್ಲಿ ಪಕ್ಷಾತೀತ ಹೋರಾಟ ನಡೆಯಬೇಕು ಎಂದು ಸಲಹೆ ನೀಡಿದರು ಶಾಸಕ ಬೊ ಆರ್ ಯಾವಗಲ್ ಮಾತನಾಡಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕದ ಜನರ ಭವಣೆಯನ್ನು ಅರ್ಥ ಮಾಡಿಕೊಳ್ಳಬೇಕು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ನ್ಯಾಯಾಧಿಕರಣದ ಹೊರಗೆ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು

ವಿಧಾನ ಪರಿಷತ್ತಿನಲ್ಲಿಯೂ ಮಹಾದಾಯಿ ಕುರಿತು ಚರ್ಚೆ ನಡೆಯಿತು ಚರ್ಚೆಯಲ್ಲಿ ಹಲವಾರು ಜನ ಹಿರಿಯ ಸದಸ್ಯರು ಭಾಗವಹಿಸಿ ಸಲಹೆಗಳನ್ನು ನೀಡಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *