Breaking News
Home / Breaking News / ಮೂರು ಭಾಗವಾಗಿ ಮೂರಾಬಟ್ಟಿಯಾದ..ಎಂಈಎಸ್….

ಮೂರು ಭಾಗವಾಗಿ ಮೂರಾಬಟ್ಟಿಯಾದ..ಎಂಈಎಸ್….

ಬೆಳಗಾವಿ-. ಸೂಪರ್ ಸೀಡ್ ಆದ್ರೆ ಮತ್ತೆ ಚುನಾವಣೆಗೆ ಎದುರಾಗುತ್ತದೆ ಎಂಬ ಭಯದಿಂದ ಬೆಳಗಾವಿ ಮಹಾನಗರ ಪಾಲಿಕೆಯ ಹದಿನಾಲ್ಕು ಜನ  ಎಂಈಎಸ್ ಸದಸ್ಯರು  ಶುಕ್ರವಾರ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಕನ್ನಡ ಗುಂಪಿಗೆ ಬೆಂಬಲ ಕೊಡುವದಾಗಿ ಘೋಷಿಸಿ ಸೂಪರ್ ಸೀಡ್ ನಿಂದ ತಪ್ಪಿಸಿಕೊಳ್ಳಲು ವಿನೂತನ ಪ್ರಯತ್ನ ಮಾಡಿದ್ದಾರೆ

ಮಹಾಪೌರ ಹಾಗು ಉಪ ಮಹಾಪೌರರು ಸೇರಿದಂತೆ ಕೆಲವು ಎಂಈಎಸ್ ನಗರ ಸೇವಕರು ಕರಾಳ ದಿನಾಚೆರಣೆಯಲ್ಲಿ ಪಾಲ್ಗೊಂಡು  ಸರಕಾರಕ್ಕೆ ಸವಾಲು ಹಾಕಿದ್ದರು ಸರ್ಕಾರ ಈಗ ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವದರಿಂದ  ಎಂಈಎಸ್ ಸದಸ್ಯರು ಬೆಚ್ಚಿಬಿದ್ದಿದ್ದಾರೆ ಹೀಗಾಗಿ ವಿನಾಯಕ ಗುಂಜಟಕರ ನೇತ್ರತ್ವದಲ್ಲಿ ಹದಿನಾಲ್ಕು ಜನ ಸದಸ್ಯರು ಸತಿಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ನಾವು ಕನ್ನಡ ಗುಂಪಿಗೆ ಬೆಂಬಲ ಕೊಡುವದಾಗಿ ತಿಳಿಸಿದ್ದಾರೆ

. ಬೆಳಗಾವಿ ಮಾಹನಗರ ಪಾಲಿಕೆ ಸೂಪರ್ ಸೀಡ್ ಆಗದಿದ್ದರೆ ಕನ್ನಡ ಸದಸ್ಯರ ಜತೆಗೆ ‌ಅಧಿಕಾರ ಹಂಚಿಕೆ ಕುರಿತು ಮಾತುಕತೆ. ಮಾಡುತ್ತೇವೆ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಹೊಸ ಸೂತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೇವೆ ಎಂದು ಎಂಈಎಸ್ ನಿಂದ ಹೊರಗೆ ಬಂದಿರುವ ನಗರ ಸೇವಕರು ಸ್ಪಷ್ಟಪಡಿಸಿದ್ದಾರೆ

. ಮಾಜಿ ಉಪಮೇಯರ್ ಮಿನಾವಾಜ್, ನಾಗೇಶ ಮಂಡೋಳ್ಕರ್, ವಿನಾಯಕ ಗುಂಜಟಕರ್ ನೇತೃತ್ವದಲ್ಲಿ ಒಟ್ಟು ಹದಿನಾಲ್ಕು ಜನ ಸದಸ್ಯರು ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವದು ಬೇಡ ಕರಾಳ ದಿನಾಚರಣೆಯಲ್ಲಿ ಯಾರು ಪಾಶಲ್ಗೊಂಡಿದ್ದಾರೆಯೋ ಅವರ ಮೇಲೆ ಕ್ರಮ ಕೈಗೊಳ್ಳಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಎಂಈಎಸ್ ನಗರ ಸೇವಕರು ಕನ್ನಡ ಗುಂಪಿಗೆ ಸೇರುತ್ತಿರುವದು ಒಳ್ಳೆಯ ಬೆಳವಣಿಗೆ ಬೆಳಗಾವಿ ಅಭಿವೃದ್ಧಿ ದೃಷ್ಠಿಯಿಂದ  ಒಳ್ಳೆಯದಾಗಿದ್ದು ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಅಧಿವೇಶನ ಮುಗಿದ ಬಳಿಕ  ಇನ್ನೊಂದು ಬಾರಿ ಮನವಿ ಮಾಡಿಕೊಳ್ಳುತ್ತೇನೆ ಎಂದರು

.  ಬೆಳಗಾವಿ ರಾಜಕೀಯದಲ್ಲಿ ಮಾಸ್ಟರ್ ಮೈಂಡ್ ಎಂದೆ ಕರಿಯಿಸಿಕೊಂಡ ಸತೀಶ್ ಜಾರಕಿಹೋಳಿ ನಾಡ ದ್ರೋಹಿ ಎಂ.ಇ.ಎಸ್ ಅನ್ನು ಮೂರು ಭಾಗಮಾಡಿ ತನ್ನ ರಾಜಕೀಯ ಚಾಣಾಕ್ಷತನ ಮೇರೆದಿದ್ದಾರೆ. ನಾಡವಿರೋಧಿ ಎಂಈಎಸ್ ಈಗ ಮೂರು ಭಾಗವಾಗಿ ಮೂರಾಬಟ್ಟೆಯಾಗಿದೆ

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *