ಬೆಳಗಾವಿ- ಬೆಳಗಾವಿಯ ಸುವರ್ಣ ಸೌದದಲ್ಲಿ ಕಳೆದ ಐದು ದಿನಗಳಿಂದ ಕಲಾಪಗಳು ಸುಗಮವಾಗಿ ನಡೆಯುತ್ತಿವೆ ಕಲಾಪಗಳಲ್ಲಿ ಯಾವುದೇ ರಿತಿಯ ಗದಗಲ ಗಲಾಟೆಗಳು ಇಲ್ಲದೇ ಅರ್ಥಪೂರ್ಣವಾದ ಚರ್ಚೆಗಳು ನಡೆಯುತ್ತಿವೆ ಕಲಾಪಗಳನ್ನು ವೀಕ್ಷೀಸಿಸಲು ಬೆಳಗಾವಿ ನಗರದ ವಿವಿಧ ಶಾಲೆಗಳ ಮಕ್ಕಳು ಖುಷಿ ಖುಷಿಯಾಗಿ ಸುವರ್ಣ ಸೌಧಕ್ಕೆ ಆಗಮಿಸಿ ಕಲಾಪಗಳನ್ನು ವಿಕ್ಷಣೆ ಮಾಡುತ್ತಿದ್ದಾರೆ
ಸುವರ್ಣ ವಿದಾನ ಸೌದದಲ್ಲಿ ಮಹಾದಾಯಿ ಕುರಿತು ಅರ್ಥಪೂರ್ಣವಾದ ಚರ್ಚೆ ನಡೆಯುತ್ತಿದೆ ಚರ್ಚೆಯಲ್ಲಿ ದಕ್ಷಿಣ ಕರ್ನಾಟಕದ ಶಾಸಕರು ಪಾಲ್ಗೊಂಡು ಈ ಭಾಗದ ರೈತರ ಭವಣೆಯನ್ನು ಸದನದಲ್ಲಿ ಮಂಡಿಸಿ ಮಹಾದಾಯಿ ಸಮಸ್ಯೆ ಕೇವಲ ಉತ್ತರ ಕರ್ನಾಟಕದ ಸಮಸ್ಯೆ ಅಲ್ಲ ಇದು ಅಖಂಡ ಕರ್ನಾಟಕದ ಸಮಸ್ಯೆ ಆಗಿದ್ದು ಸಮಸ್ಯೆ ಬಗೆ ಹರಿಸಲು ಪ್ರಧಾನಿ ನರೇಂದ್ರ ಮೋದಿ ಮದ್ಯಸ್ಥಿಕೆ ವಹಿಸಬೇಕೆಂಬ ಒಕ್ಕೊರಲಿನ ಒತ್ತಾಯ ಕೇಳಿ ಬಂದಿದೆ
ರೈತರ ಸಾಲ ಮನ್ನಾ,ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ಶಾಸಕರು ಸರಕಾರದ ಗಮನವನ್ನು ಸೇಳೆದಿದ್ದಾರೆ ಜೊತೆಗೆ ಬರ ಪರಿಸ್ಥಿತಿಯ ನಿರ್ವಹಣೆಯ ಬಗ್ಗೆ ಸರ್ಕಾರ ಯುದ್ದೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದ್ದಾರೆ