ಚಿಕ್ಕೋಡಿಯಲ್ಲಿ ಹಸುಗೆ ಸೀಮಂತ ಕಾರ್ಯ ನೆರವೇರಿಸಿ ಸಂಭ್ರಮಿಸಿದ ಕುಟುಂಬಸ್ಥರು
ಚಿಕ್ಕೋಡಿ: ತುಂಬು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವುದು ವಾಡಿಕೆ.ಆದರೇ, ಇಲ್ಲೋಂದು ಗ್ರಾಮದಲ್ಲಿ ಮನೆಯಲ್ಲಿದ್ದ ಏಳು ತಿಂಗಳ ತುಂಬು ಗರ್ಭಿಣಿ ಆಕಳಿಗೆ ಸೀಮಂತ ಕಾರ್ಯನೆರವೇರಿಸಿ ಸಂಭ್ರಮಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಅಪ್ಪಾಸಾಹೇಬ ಪಾಟೋಳೆ ಎಂಬುವವರು ತಮ್ಮ ಆಕಳಿಗೆ ಸೀಮಂತ ಕಾರ್ಯಕ್ರಮ ನೆರೆವೇರಿಸಿದವರು. ಕಳೆದ ಹಲವಾರು ವರ್ಷಗಳಿಂದ ಅಪ್ಪಾಸಾಹೇಬ ಪಾಟೋಳೆ ಅವರು ತಮ್ಮ ಮನೆಯಲ್ಲಿರುವಂತಹ ಆಕಳುಗಳಿಗೆ ವಿಶೇಷ ಸ್ಥಾನಮಾನ ನೀಡುವದಲ್ಲದೇ ತಮ್ಮ ಮನೆಯ ಮಕ್ಕಳಂತೆ ಸಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಮನೆಯಲ್ಲಿದ್ದ ಆಕಳೊಂದು ೭ತಿಂಗಳು ಗರ್ಭಿಣಿಯಾಗಿದೆ.ಹೀಗಾಗಿ ತಮ್ಮ ಮನೆ ಮಗಳಂತೆ ಹಸುಗೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.ಈ ವೇಳೆ ಗ್ರಾಮಸ್ಥರು ಹಾಗೂ ಪಾಟೋಳೆ ಕುಟುಂಬಸ್ಥರು ಸೇರಿಕೊಂಡು ಆಕಳಿಗೆ ಕುಂಕುಮ-ಅರಿಶಿಣ ಹಚ್ಚಿ,ಸೀರೆ ಉಡಿಸಿ, ಸೋಬಾನೆ ಪದಗಳನ್ನು ಹಾಡಿ, ಹೊಳಿಗೆ ತಿನ್ನಿಸಿ ಶಾಸ್ತ್ರೋಕ್ತವಾಗಿ ಸಂಭ್ರಮದಿಂದ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದಾರೆ. ಇನ್ನೂ ಇವರ ಕಾರ್ಯಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಸಂಧರ್ಭದಲ್ಲಿ ರೂಪಾಲಿ, ಪಾಟೋಳೆ,ಅಕ್ಕಾತಾಯಿ ಪಾಟೀಲ,ರಾಧಿಕಾ ಶಿರಹಟ್ಟಿ,ರಾಜಶ್ರೀ ಘೋಸರವಾಡೆ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ.