ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಸಾಂಬ್ರಾ ಜಿಪಂ ಸದಸ್ಯ
ಬೆಳಗಾವಿ- ಸಾಂಬ್ರಾ ಜಿಪಂ ಕ್ಷೇತ್ರದ ಜಿಪಂ ಸದಸ್ಯ,ಸತೀಶ್ ಜಾರಕಿಹೊಳಿ ಅವರ ಬೆಂಬಲಿಗ ಕೃಷ್ಣಾ ಅನಿಗೋಳಕರ ಇಂದು ಜಿಪಂ ಸದಸ್ಯ ಸ್ಥಾನಕ್ಕೆ ಜೊತೆಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಜನ ನಾಯಕರು ಸೇರಿ ನಾವು,ಕಾಂಗ್ರೆಸ್ ಪಕ್ಷವನ್ನು ಬಿಟ್ಟು,ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುವ ತೀರ್ಮಾಣ ಕೈಗೊಂಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಶಿರ್ವಾದವೂ ,ನಮ್ಮ ಮೇಲಿದೆ ಎಂದು ಕೃಷ್ಣಾ ಅನಿಗೋಳಕರ ಅವರು ಹೇಳಿದರು
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ,ಆದಷ್ಟು ಬೇಗನೆ ಬಿಜೆಪಿ ಸೇರುತ್ತೇವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಜನ ಕಾಂಗ್ರೆಸ್ ನಾಯಕರು,ನೂರಾರು ಕಾರ್ಯಕರ್ತರು ನನ್ನ ಜೊತೆ ಬಿಜೆಪು ಸೇರ್ತಾರೆ ಎಂದು ಕೃಷ್ಣಾ ಅನಿಗೋಳಕರ ಮಾಹಿತಿ ನೀಡಿದರು.
ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಿರ್ದೇಶಕರಾಗಿ ಇತ್ತೀಚೆಗಷ್ಟೇ ಆಯ್ಕೆ ಆಗಿರುವ ಅವರು,ಈಗ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ ಶುರುವಾದಂತೆ ಕಾಣುತ್ತಿದೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					