Breaking News
Home / Breaking News / ಬೆಳಗಾವಿಯಲ್ಲಿ ಎರಡು ಕಡೆ ಸಿಐಡಿ ಅಧಿಕಾರಿಗಳ ದಾಳಿ

ಬೆಳಗಾವಿಯಲ್ಲಿ ಎರಡು ಕಡೆ ಸಿಐಡಿ ಅಧಿಕಾರಿಗಳ ದಾಳಿ

ಬೆಳಗಾವಿ- ಬೆಳಗಾವಿ ನಗರದಲ್ಲಿ ಎರಡು ಕಡೆ ದಾಳಿ ನಡೆಸಿರುವ ಸಿಐಡಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ಎರಡು ಬೈಕ್ ಗಳನ್ನು ವಶಕ್ಕೆ ಪಡೆದು ಅಪಾರ ಪ್ರಮಾಣದ ಗಾಂಜಾ ಜಪ್ತು ಮಾಡಿದ್ದಾರೆ.

ಸಿಐಡಿ ಬೆಳಗಾವಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್
.ಎಸ್.ಕೆ.ಕುರಗೊಡಿ, ರವರಿಗೆ ಬಂದ ಮಾಹಿತಿ ಮೇರೆಗೆ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್
ಠಾಣಾ ಸರಹದ್ದಿನ ಅಯೋಧ್ಯ ನಗರದಲ್ಲಿರುವ ಯು.ಕೆ.27 ಹೋಟೆಲ್ ಹತ್ತಿರ ಗಾಂಜಾ ಮಾರಾಟದಲ್ಲಿ
ತೊಡಗಿದ್ದ ಆಕೀಬ್ ಜಾವೀದ್ ದುನಿಯಾರ್ ತಂದೆ ಜಾವೀದ್ ಮನಿಯಾರ್, 27 ವರ್ಷ, ಈತನಿಗೆ
ಹಿಡಿದಿದ್ದು ಈತನಿಂದ 610 ಗ್ರಾಂ ಗಾಂಜಾ ಆಂದಾಜು ಕಿಮ್ಮತ್ತು ರೂ.12,200/- ಒಂದು ದ್ವಿಚಕ್ರ
ವಾಹನ ಹrb ನಗದು ಹಣ ರೂ 530/- ಜಪ್ತು ಮಾಡಿದ್ದಾರ

ಬೆಳಗಾವಿ ನಗರದ ಬೋಗಾರವೆಸ್
ಧರ್ಮವೀರ ಸಂಭಾಜಿ ಸರ್ಕಲ್ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಸೈಪ್‌ಅಲಿ ಮಾಡಿವಾಲೆ
ಸಾ|| ಆನಸಾರ ಗಲ್ಲಿ, ಪೀರಣವಾಡಿ, ಬೆಳಗಾವಿ ವಯಸ್ಸು 27 ವರ್ಷ ಈತನಿಗೆ ಹಿಡಿದಿದ್ದು ಈತನಿಂದ
520 ಗ್ರಾಂ ಗಾಂಜಾ ಆಂದಾಜು ಕಿಮ್ಮತ್ತು ರೂ.10,400/- ಒಂದು ದ್ವಿಚಕ್ರ ವಾಹನ ಹಾಗು ನಗದು
ಹಣ ರೂ.720/- ಜಪ್ತು ಮಾಡಿದ್ದು ಈ ಕುರಿತು ಬೆಳಗಾವಿ ನಗರದ ಸಿಐಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಕ್ಷ್ಮಣ ಹುಂಡರದ, ಡಿಟೆಕ್ಟಿವ್ ಸಬ್‌ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಯವರಾದ
ಜಗದೀಶ ಎಂ ಬಾಗನವರ, ಜಿ.ಆರ್.ಶಿರಸಂಗಿ, ಚಿದಂಬರ ಚಟ್ಟರಕ್ಕಿ ರವರು ಭಾಗವಹಿಸಿರುತ್ತಾರೆ.

Check Also

ಬಾಸ್ ಬಂದು ಹೋದ ಮೇಲೆ ಅಜ್ಜಿಯ ಮನೆಗೆ ಬಂತು ಗ್ಯಾಸ್…!!

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್‌, ಗ್ಯಾಸ್‌ ನೀಡಿದ್ದಾರೆ. …

Leave a Reply

Your email address will not be published. Required fields are marked *