ಬೆಳಗಾವಿ-ಬೆಳಗಾವಿ ಜಿಲ್ಲೆಯ ಮೂರು ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ.ಆದಾಯಕ್ಕಿಂತ 200 ಪಟ್ಟು ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿದೆ.
ಎಸಿಬಿ ಅಧಿಕಾರಿಗಳ ತನಿಖೆಯ ಬಳಿಕ
ಸದಾಶಿವ ಮರಲಿಂಗಣ್ಣವರ್ ಆರ್ ಟಿ ಓ ಇನ್ಸ್ಪೆಕ್ಟರ್ ಮನೆ, ಕಚೇರಿ ಮೇಲೆ ದಾಳಿ ನಡೆದ ಬಳಿಕ,ಗೋಕಾಕ್ ಮನೆ, ರಾಮದುರ್ಗ ತಾಲೂಕಿನ ಕಳ್ಳೂರು ಗ್ರಾಮದ ಮನೆ, ಬೆಳಗಾವಿ ರಾಮತೀರ್ಥ ನಗರದ ಮನೆ, ಸಹೋದರನ ಮುಧೋಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ಪರಶೀಲಿಸಿದಾಗ
ಕಳ್ಳೂರು ಗ್ರಾಮದಲ್ಲಿ 22 ಎಕರೆ ಜಮೀನು, ಬೆಳಗಾವಿಯಲ್ಲಿ ಒಂದು ಮನೆ.
31 ಲಕ್ಷ ಮೌಲ್ಯದ ಎರಡು ಕಾರಗಳು.
5 ಲಕ್ಷ ಮೌಲ್ಯದ 1.135 kg ಬಂಗಾರ.
5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು.
ಮನೆಯಲ್ಲಿ 8 ಲಕ್ಷ ನಗದು ಹಣ ಪತ್ತೆಯಾಗಿದ್ದು ಆರ್ ಟಿ ಓ ಹತ್ತಿರ
ಒಟ್ಟು 1 ಕೋಟಿ 87 ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ.ಆದಾಯಕ್ಕಿಂತ ಶೇ 190ರಷ್ಟು ಹೆಚ್ಚಿನ ಆಸ್ತಿ ಪತ್ತೆಯಾಗಿದ್ದು ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಅಡಿವಿಸಿದ್ದೇಶ್ವರ ಮಸ್ತಿ, ಸಹಕಾರ ಅಭಿವೃದ್ಧಿ ಅಧಿಕಾರಿ ಬೈಲಹೊಂಗಲ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು ಬೈಲಹೊಂಗಲದಲ್ಲಿ 66 ಲಕ್ಷ ಮೌಲ್ಯದ ಎರಡು ಮನೆ. 20 ಲಕ್ಷ ಮೌಲ್ಯದ ನಿರ್ಮಾಣ ಹಂತದಲ್ಲಿ ಇರೋ ಮನೆ.
44 ಲಕ್ಷ ಮೌಲ್ಯದ ನಾಲ್ಕು ನಿವೇಶನ.
20 ಲಕ್ಷ ಮೌಲ್ಯದ ಕಾರ್, ದ್ವೀಚಕ್ರ ವಾಹನ.
11 ಲಕ್ಷ ಮೌಲ್ಯದ 263 ಗ್ರಾಂ ಚಿನ್ನಾಭಾರಣ.
ಬ್ಯಾಂಕ್ ಡೆಪಾಜಿಟ್, ಶೆರ್ಸ್, ಇನ್ಶುರೆನ್ಸ್ ಪತ್ರಗಳು ವಶಕ್ಕೆ ಪಡೆಯಲಾಗಿದೆ.5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆ.
1.20 ಲಕ್ಷ ರೂಪಾಯಿ ನಗದು ಹಣ ಮನೆಯಲ್ಲಿ ಪತ್ತೆಯಾಗಿದೆ.1 ಕೋಟಿ 24 ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ.ಆದಾಯಕ್ಕಿಂತ ಶೇಕಡಾ 191 ರಷ್ಟು ಹೆಚ್ಚಿನ ಅಕ್ರಮ ಸಂಪತ್ತು ಇದೆ.
ತಾನಾಜಿ ಪಾಟೀಲ್, ಹೆಸ್ಕಾಂ ಅಧಿಕಾರಿ ಬೆಳಗಾವಿಯ ನಿವಾಸಿದ ಮೇಲೆ ಎಸಿಬಿ ದಾಳಿ.
ಒಂದು ಮನೆ, ಎರಡು ನಿವೇಶನ, ನಿರ್ಮಾಣ ಹಂತದಲ್ಲಿ ಇರೋ ಎರಡು ಮನೆ ಪತ್ತೆ.
10 ಲಕ್ಷ ಮೌಲ್ಯದ 239 ಗ್ರಾಂ ಚಿನ್ನಾಭರಣ.
20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು.
1ಕೋಟಿ 82 ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಪತ್ತೆ.
ಆದಾಯಕ್ಕಿಂತ ಶೇ240 ರಷ್ಟು ಹೆಚ್ಚು ಆಸ್ತಿ ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ..