Breaking News
Home / Breaking News / ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಪ್ರಶ್ನೆಯಾದ ಬೆಳಗಾವಿ ಪರಿಷತ್ ಚುನಾವಣೆ

ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಪ್ರಶ್ನೆಯಾದ ಬೆಳಗಾವಿ ಪರಿಷತ್ ಚುನಾವಣೆ

ಬೆಳಗಾವಿ – ಡಿಸೆಂಬರ್10 ರಂದು ನಡೆಯುವ ಬೆಳಗಾವಿಯ ಎರಡು ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು. ರಾಜಕೀಯವಾಗಿ ಜಿದ್ದಾಜಿದ್ದಿನ ಹೋರಾಟಕ್ಕೆ ಚುನಾವಣೆ ವೇದಿಕೆಯಾಗಿದೆ. ಈಗಾಗಲೇ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ನಿಂದ ಚನ್ನರಾಜ್ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಈ ಚುನಾವಣೆ ಹಲವು ರಾಜಕೀಯ ಲೆಕ್ಕಾಚಾರಗಳಿಗೆ ‌ಸಾಕ್ಷಿಯಾಗಲಿದೆ.

ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮೊದಲ ಮತ ಬಿಜೆಪಿಗೆ ಎರಡು ಮತ ಕಾಂಗ್ರೆಸ್ ಸೋಲಿಸಲು ಎಂದು ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಆದರೇ ಬಿಜೆಪಿಯಲ್ಲಿ ಕೇವಲ ರಮೇಶ ಜಾರಕಿಹೊಳಿ ಮಾತ್ರ ಆಕ್ಟಿವ್ ಆಗಿ ಓಡಾಡುತ್ತಿದ್ದಾರೆ. ಆದರೇ ಸಚಿವರಾದ ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತ್ರ ಇನ್ನೂ ಆ್ಯಕ್ಟಿವ್ ಆದಂತೆ ಕಾಣುತ್ತಿಲ್ಲ.

ರಮೇಶ ಸಹೋದರ ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಸಂಚಲನ ಸೃಷ್ಟಿಯಾಗಿದೆ. ನಾಮಪತ್ರ ಸಲ್ಲಿಕೆ ದಿನವೇ 2 ಸಾವಿರಕ್ಕೂ ಹೆಚ್ಚು ಗ್ರಾಪಂ ಸದಸ್ಯರನ್ನು ಕರೆತಂದು ನಾಮಪತ್ರ ಸಲ್ಲಿಕೆಯನ್ನು ಲಖನ ಜಾರಕಿಹೊಳಿ ಮಾಡಿದ್ದಾರೆ. ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ ಜಾರಕಿಹೊಳಿಗೆ ಹಲವು ಪಂಚಾಯತಿ ಸದಸ್ಯರ ಜತೆಗೆ ನೇರವಾದ ಸಂಪರ್ಕ ಇದೆ. ಇದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಬೆನ್ನಿಗೆ ಲಕ್ಷ್ಮೀ ಹೆಬ್ಬಾಳ್ಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನಿಂತಿದ್ದಾರೆ. ಕ್ಷೇತ್ರದ ಎಲ್ಲಾ ಕಡೆಗಳಲ್ಲಿ ಪ್ರಚಾರ ಸಭೆಯಲ್ಲಿ ನಡೆಸುತ್ತಿದ್ದಾರೆ‌. ಆದರೆ ರಾಜಕೀಯವಾಗಿ ಮಹತ್ವದ ಚುನಾವಣೆ ಇದಾಗಿದೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲು, ಗೆಲುವಿನ ಬಗ್ಗೆ ಅನೇಕ‌‌ ವಿಮರ್ಶೆಗಳು ನಡೆಯುತ್ತಿವೆ.‌ ಆದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ರಮೇಶ ಜಾರಕಿಹೊಳಿ ಮೇಲೆ ವರಿಷ್ಠರು ಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರಿದ್ದಾರೆ,ಇವರೆಲ್ಲರೂ ಪಕ್ಷದ ಪರವಾಣಿ ಪ್ರಾಮಾಣಿಕವಾಗಿ ಶ್ರಮಿಸಿದ್ರೆ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಮೊದಲ ಸುತ್ತಿನಲ್ಲೇ ಗೆಲ್ಲುವದರಲ್ಲಿ ಸಂಶಯವೇ ಇಲ್ಲ,ಆದ್ರೆ ಬಿಜೆಪಿಯ ಆಂತರಿಕ ರಾಜಕೀಯವೇ ವಿಭಿನ್ನವಾಗಿದೆ.ಮಹಾಂತೇಶ್ ಕವಟಗಿಮಠ ಗೆಲ್ಲಿಸುವ ಜವಾಬ್ದಾರಿ ಕೇವಲ ರಮೇಶ್ ಜಾರಕಿಹೊಳಿ ಮೇಲಿದೆ ಎಂದು ಬಿಂಬಿಸಲಾಗುತ್ತಿದೆ,ಮಹಾಂತೇಶ್ ಗೆಲ್ಲದಿದ್ದರೆ ಇದಕ್ಕೆಲ್ಲಾ ರಮೇಶ್ ಜಾರಕಿಹೊಳಿ ಅವರೊಬ್ಬರೇ ಕಾರಣ ಎಂದು ಹೇಳಿ ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಅವರ ವರ್ಚಸ್ಸು ಡೌನ್ ಮಾಡಲು ಒಂದು ಗುಂಪು ವ್ಯೆವಸ್ಥಿತವಾಗಿ ಕೆಲಸ ಮಾಡುತ್ತಿದೆ ಎನ್ನುವ ಚರ್ಚೆಗಳು ನಡೆಯುತ್ತಿವೆ.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಸಂಖ್ಯಾಬಲ ಜಾಸ್ತಿ ಇದೆ,ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಎಷ್ಟು ಮತ ಹಾಕಿಸುತ್ತಾರೆ ಅನ್ನೋದು ಈಗ ಮುಖ್ಯವಾಗಿದೆ,ಬಿಜೆಪಿ ಶಾಸಕರ ನಡೆ ಮಹಾಂತೇಶ್ ಕವಟಗಿಮಠ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದೆ.ಬಿಜೆಪಿ ವರಿಷ್ಠರು ಶಾಸಕರ ನಡೆಯ ಮೇಲೆ ನಿಗಾ ಇಟ್ಟಿದ್ದಾರೆ.

ಇತ್ತ ಕಾಂಗ್ರೆಸ್ಸಿನಲ್ಲಿ ಅದೇ ರೀತಿಯ ಪರಿಸ್ಥಿತಿ ಇದೆ.ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಮೇಲಿದೆ ಹೀಗಾಗಿ ಅವರು ಜಿಲ್ಲೆಯಾದ್ಯಂತ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜೊತೆ ಪ್ರಚಾರ ನಡೆಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ಸಿಗೆ ಸೋಲಾದ್ರೆ ಅದಕ್ಕೆ ಸತೀಶ್ ಜಾರಕಿಹೊಳಿ ಅವರೇ ಜವಾಬ್ದಾರರಾಗುತ್ತಾರೆ ಎನ್ನುವ ಸುದ್ದಿ ಜಿಲ್ಲೆಯಾದ್ಯಂತ ಸಾಕಷ್ಟು ಪ್ರಚಾರ ಪಡೆದಿದ್ದು,ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರನ್ನು ಗೆಲ್ಲಿಸಲು ಸತೀಶ್ ಜಾರಕಿಹೊಳಿ ಅವರು ಪ್ರಮಾಣಿಕವಾಗಿ ಓಡಾಡುತ್ತಿದ್ದು, ಒಟ್ಟಾರೆ ಈ ಬಾರಿಯ ಪರಿಷತ್ತಿನ ಚುನಾವಣೆ ,ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ್ದು ನಿಜ.

ಪ್ರಸಕ್ತ ವಿಧಾನ ಪರಿಷತ್ತಿನ ಚುನಾವಣೆ,ಪಕ್ಷಗಳ ನಡುವೆ ನಡೆಯುತ್ತಿರುವ ಚುನಾವಣೆ ಅಲ್ಲವೇ ಅಲ್ಲ,ಪರಸ್ಪರ ಸೇಡು ತೀರಿಸಿಕೊಳ್ಳುವ ಚುನಾವಣೆ ಇದಾಗಿದ್ದು, ವ್ಯೆಯಕ್ತಿಕ ವರ್ಚಸ್ಸು ಉಳಿಸಿಕೊಳ್ಳುವ,ಇನ್ನೊಬ್ನರ ವರ್ಚಸ್ಸು ಹಾಳು ಮಾಡುವ ಜಿದ್ದಾಜಿದ್ದಿಯ ಸಂಘರ್ಷಕ್ಕೆ ಈ ಚುನಾವಣೆ ಇದಾಗಲಿದ್ದು, ಈ ಆಂತರಿಕ ಸಂಘರ್ಷ ಯಾರನ್ನು ಸೋಲಿಸುತ್ತದೆ,ಯಾರನ್ನು ಗೆಲ್ಲಿಸುತ್ತದೆ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.

ಉಸಾಬರಿಯಿಂದ ಉಸ್ತುವಾರಿ ದೂರ….!!!

ಬೆಳಗಾವಿ ಜಿಲ್ಲೆಯಲ್ಲಿ ಪರಿಷತ್ತಿನ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ,ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದು ,ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಆರಂಭವಾದರೂ ಜಿಲ್ಲಾ ಉಸ್ತುವಾರಿ ಸಚಿವ ಗೋವೀಂದ್ ಕಾರಜೋಳ ಅವರು ಬೆಳಗಾವಿ ಜಿಲ್ಲೆಗೆ ಬಾರದೇ ಇರೋದು ಚರ್ಚೆಗೆ ಕಾರಣವಾಗಿದೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *