ಬೆಳಗಾವಿಯಲ್ಲಿ ಮಟನ್ ಏರ್ತಾ ಇದೆ,ಚಿಕನ್ ಇಳೀತಾ ಇದೆ,ಯಾಕೆ ಗೊತ್ತಾ..?
ಬೆಳಗಾವಿ- ಚೀನಾದಲ್ಲಿ ಕೋರೋನಾ ಮಹಾಮಾರಿ ಸೊಂಕಿಗೆ ಚೀನಾದಲ್ಲೇ ಇವತ್ತಿಗೆ 2400 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ,ಈ ಸೊಂಕು ಚೀನಿಯರನ್ನು ಬಲಿಪಡೆಯುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಠಿ ಮಾಡಿರುವದು ಸತ್ಯ
ಚೀನಾದ ಕೋರೋನಾ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರೀದೆ ಈ ಭೀಕರ,ಭಯಾನಕ ಸೊಂಕು ತಡೆಯಲು ಚೀನಾದಲ್ಲಿ ಕೋಳಿ,ಹಂದಿ ಸೇರಿದಂತೆ ಮಾನವ ಆಹಾರವಾಗಿ ಸೇವಿಸುವ ಪ್ರಾಣಿ,ಪಕ್ಷಿಗಳ ಮಾರಣಹೋಮ ನಡೆಯುತ್ತಿದೆ, ಈ ವಿಡಿಯೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ ಹೀಗಾಗಿ ಇದು ಜಾಗತಿಕ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ.
ಬೆಳಗಾವಿಯಲ್ಲಿ ಚಿಕನ್ ದರ ಕೆಜಿ ಗೆ ಎರಡು ನೂರು ರೂಗಳ ಗಡಿ ತಲುಪಿತ್ತು ಆದ್ರೆ ಈಗ ಕೋರೋನಾ ಸೊಂಕಿನ. ಮುಂಜಾಗ್ರತಾ ಕ್ರಮದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದಂತೆಯೇ ಬೆಳಗಾವಿಯಲ್ಲಿ ಚಿಕನ್ ದರದಲ್ಲಿ ಶೇ 50 ರಷ್ಟು ಇಳಿಕೆಯಾಗಿದೆ.
ಚಿಕನ್ ತಿಂದ್ರೆ ಕೋರೋನಾ ವೈರಸ್ ತಗಲುತ್ತದೆ ಎನ್ನುವ ವದಂತಿ ಮೌತ್ ಟು ಮೌತ್ ಅತ್ಯಂತ ಸ್ಪೀಡಾಗಿ ಹರಿದಾಡುತ್ತಿರುವದರಿಂದ ಬೆಳಗಾವಿಯ ಜನ ಚಿಕನ್ ಖರೀಧಿಸಲು ಹೆದರುತ್ತಿರುವದು ಸತ್ಯ.
ಬೆಳಗಾವಿಯ ಕೆಲವು ಅಂಗಡಿಗಳಲ್ಲಿ ಚಿಕನ್ ಕೆಜಿಗೆ 120 ,,ಇನ್ನು ಕೆಲವು ಅಂಗಡಿಗಳಲ್ಲಿ 130 ಇನ್ನು ಕೆಲವು ಅಂಗಡಿಗಳಲ್ಲಿ ನೂರು ರೂ ಕೆಜಿಗೆ ಚಿಕನ್ ಮಾರಾಟವಾಗುತ್ತಿದೆ.
ಆದ್ರೆ ಬೆಳಗಾವಿಯಲ್ಲಿ ಮಟನ್ ದರ ಪ್ರತಿ ಕೆಜಿಗೆ 600 ಗಡಿ ದಾಟಿದೆ,ಮಟನ್ ದರ ಪ್ರತಿ ದಿನ ಏರಿಕೆ ಆಗುತ್ತಿರುವದರಿಂದ ಮಟನ್ ದರವನ್ನು ಕಂಟ್ರೋಲ್ ಮಾಡಲು ಗ್ರಾಹಕರ ಒಳಿತಿಗಾಗಿ ಬೆಳಗಾವಿಯ ಮಟನ್ ಮಾರಾಟಗಾರರ ಸಂಘ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಸಂಜೆ ಆರು ಘಂಟೆಯ ನಂತರ ಬೆಳಗಾವಿಯಲ್ಲಿ ಮಟನ್ ಮಾರಾಟ ಮಾಡದಂತೆ ಕಟ್ಟಪ್ಪಣೆ ಹೊರಡಿಸಿದೆ .ಸಂಜೆ 6 ಘಂಟೆಯ ನಂತರ ಮಟನ್ ಮಾರಾಟ ಮಾಡಿದ ಅಂಗಡಿಕಾರನಿಗೆ ಹತ್ತು ಸಾವಿರ ರೂ ದಂಡ ವಿಧಿಸಲು ಮಟನ್ ಸೆಲ್ಲರ್ ಅಸೋಸೇಶಿಯನ್ ನಿರ್ಧಿಸಿದೆ.ಹೀಗಾಗಿ ಬೆಳಗಾವಿಯಲ್ಲಿ ಈಗ ಸಂಜೆ ಆರು ಘಂಟೆಯ ನಂತರ ಮಟನ್ ಸಿಗೋದೆ ಇಲ್ಲ.
ಬೆಳಗಾವಿಯ ಮಟನ್ ಅಂಗಡಿಗಳು ಸಂಜೆ ಆರು ಘಂಟೆಗೆ ಬಂದ್ ಆಗುತ್ತಿರುವದರಿಂದ ಗ್ರಾಹಕರು ಅನಿವಾರ್ಯ ವಾಗಿ ಚಿಕನ್ ಖರೀಧಿ ಮಾಡುತ್ತಿದ್ದಾರೆ.
ಚಿಕನ್ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಾ,ಮುಂಜಾಗ್ರತಾ ಕ್ರಮವಾಗಿ ,ಚಿಕನ್ ಸೇವನೆ ಮಾಡಬೇಕೋ ? ಬಿಡಬೇಕೋ ? ಅನ್ನೋದರ ಬಗ್ಗೆ ಬೆಳಗಾವಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡುವದು ಅತ್ಯಗತ್ಯ ವಾಗಿದೆ.