ಬೆಳಗಾವಿ-ಬೆಳಗಾವಿ ಅಂದ್ರೆ ಕರ್ನಾಟಕದ ಕಾಶ್ಮೀರ.ಗಡಿನಾಡು ಗುಡಿ,ರಾಜ್ಯದ ಎರಡನೇಯ ರಾಜಧಾನಿ ಸ್ಮಾರ್ಟ ಸಿಟಿ ಎಂಬೆಲ್ಲ ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೆ ಬೆಳಗಾವಿ ಬಸ್ ನಿಲ್ದಾನದ ಪರಿಸ್ಥಿತಿ ನೋಡಿದರೆ ಇದೆಲ್ಲ ಬೋಗಸ್ ಅನ್ನೋದು ಸಾಭೀತಾಗುತ್ತದೆ
ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ಧಾಣ ಪ್ರವೇಶ ಮಾಡಿದರೆ ಸಾಕು ಹತ್ತು ಹಲವು ಸಮಸ್ಯೆಗಳು ಎದುರಾಗುತ್ತವೆ ನಿಲ್ಧಾಣದ ತುಂಬೆಲ್ಲ ಗುಂಡಿಗಳು ಬಿದ್ದಿವೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ಾಸನಗಳ ವ್ಯೆವಸ್ಥೆ ಇಲ್ಲವೇ ಇಲ್ಲಿಯ ಪಾರ್ಕಿಂಗ್ ನಿರ್ವಹಣೆ ಮಾಡುವ ಗುತ್ತಗೆದಾರನಿಗೆ ಯಾವುದೇ ಸರ್ಕಾರದ ನಿಯಮಗಳು ಅನ್ವಯವಾಗುವದೇ ಇಲ್ಲ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಇನ್ನೊಂದು ಅದ್ಭುತ ಸಂಗತಿ ಇದೆ ಅದೇನಂದರೆ ಇಲ್ಲಿಯ ಟಾಯಲೆಟ್ ಗಳು ಅತೀ ತುಟ್ಟಿ ಇವರು ಮಾಡುವ ಚಾರ್ಜ ನೋದಿದರೆ ಸ್ಥಳದಲ್ಲಿಯೇ ಮೂರ್ಚೆ ಬೀಳುತ್ತಾನೆ ಯಾರಾದರೂ ಹೊಟ್ಟೆ ಭಾರವಾಗಿದೆಯಲ್ಲ ಸ್ವಲ್ಪ ರಿಲ್ಯಾಕ್ಸ ಆಗೋಣ ಅಂತಾ ಜೇಬಲ್ಲಿ ದುಡ್ಡಿಲ್ಲದೇ ಟಾಯಲೆಟ್ ಗೆ ನುಗ್ಗಿದರ ಪಾಯಜಾಮ್ ರಾಡಿ ಆಗೋದು ಗ್ಯಾರಂಟಿ ಇಲ್ಲಿ ಹತ್ತರ ನೋಟು ಕೊಟ್ಟರೆ ಮಾತ್ರ ರಿಲ್ಯಾಕ್ಸ ಆಗಬಹುದು
ಇಷ್ಟು ರೇಟು ದೇಶದ ಯಾವ ಬಸ್ ಸ್ಟ್ಯಾಂಡ್ ನಲ್ಲಿಯೂ ಇಲ್ಲ ಯಾವ ಏರ್ಪೋರ್ಟನಲ್ಲಿಯೂ ಇಲ್ಲ ಬೆಳಗಾವಿ ಬಸ್ ಸ್ಟ್ಯಾಂಡ್ ನಲ್ಲಿ ಹತ್ತು ರೂಪಾಯಿ ಪಡೆದು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದರೂ ಸಾರಿಗೆ ಅಧಿಕಾರಿಗಳು ಮಾತ್ರ ಯಾವೂದೇ ಕ್ರಮ ಕೈಗೊಳ್ಳುತ್ತಿಲ್ಲ ಸಾರಿಗೆ ಸಂಸ್ಥೆ ಶೌಚಾಲಯಗಳಿಗೆ ಎರಡು ರೂಪಾಯಿ ದರ ನಿಗದಿ ಮಾಡಿದೆ ಆದರೆ ಇದನ್ನು ಗಾಳಿಗೆ ತೂರಿದ ಗುತ್ತಿಗೆದಾರ ಹತ್ತರ ನೋಟು ಪಡೆದು ಪ್ರಯಾಣಿಕರ ಹೊಟ್ಟೆಯ ಭಾರವನ್ನು ಇನ್ನಷ್ಟು ಹೆಚ್ಚಿಸಿದ್ದಾನೆ