Breaking News

ಆಲಮ್‌ ನದಾಫ್ ಅತ್ಯುತ್ತಮ ಸಾಧನೆ

ಮಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ‌ ಎಕ್ಸ್ ಪರ್ಟ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಆಲಮ್ ಆರ್. ನದಾಫ್ ವಿಜ್ಞಾನ ವಿಭಾಗದಲ್ಲಿ ಪ್ರತಿಶತ ಶೇ 90ರಷ್ಟು ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾನೆ.

ಜೀವಶಾಸ್ತ್ರ -95, ಗಣಿತ-94,
ಕೆಮೆಸ್ಟ್ರಿ – 83  ಹಾಗೂ ಭೌತಶಾಸ್ತ್ರ ದಲ್ಲಿ  82  ಸೇರಿದಂತೆ PCMBಯಲ್ಲಿ ಒಟ್ಟು ಶೇ.88.5 ಅಂಕ ಗಳಿಸಿ ಗಮನಾರ್ಹ ಸಾಧನೆ ಗೈದಿದ್ದಾನೆ.

ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ‌ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗನ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ‌ ವಿದ್ಯಾರ್ಥಿಯ ತಂದೆಯವರಾದ ಹಿರಿಯ ಪತ್ರಕರ್ತ ರಾಜು ನದಾಫ್ ಹಾಗೂ ತಾಯಿ ಫರೀದಾ ಅವರು ಸಿಹಿ‌‌ ತಿನ್ನಿಸಿ ಖುಷಿ ಹಂಚಿಕೊಂಡರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *