Breaking News
Home / Breaking News / ಬೆಳಗಾವಿಯ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆಯಲ್ಲಿ ಏನೇನು ಇರುತ್ತೆ ಗೊತ್ತಾ..??

ಬೆಳಗಾವಿಯ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆಯಲ್ಲಿ ಏನೇನು ಇರುತ್ತೆ ಗೊತ್ತಾ..??

ಶೀಘ್ರದಲ್ಲೇ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆ ಉದ್ಘಾಟನೆ: ಶಾಸಕ ಅನಿಲ ಬೆನಕೆ

ಬೆಳಗಾವಿ: ಬೆಳಗಾವಿ ನಗರದಲ್ಲಿ 140 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆಯ ಕಾಮಗಾರಿ ಮುಗಿಯುವ ಹಂತದಲ್ಲಿ ಇದ್ದು, ಇನ್ನು ನಾಲ್ಕೈದು ತಿಂಗಳಲ್ಲಿ ಜನರ ಉಪಯೋಗಗಕ್ಕೆ ಬರಲಿದೆ ಎಂದು ಶಾಸಕ ಅನಿಲ ಬೆನೆಕ ಅವರು ತಿಳಿಸಿದರು.

ಮಂಗಳವಾರ ಬಿಮ್ಸ್ ಆವರಣದಲ್ಲಿ ನಿರ್ಮಾಣ ಆಗುತ್ತಿರುವ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆಯ ಕಾಮಗಾರಿಯನ್ನು ಶಾಸಕ ಅನಿಲ ಬೆನಕೆ, ಬಿಮ್ಸ್ ಮುಖ್ಯ ಸರ್ಜನ್ ಎಬಿ ಪಾಟಿಲ್, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೊತೆ ಸೇರಿ ಅವರು ಪರಿಶೀಲನೆ ನಡೆಸಿದರು.

ಬಳಿಕ ಮಾಹಿತ ನೀಡಿದ ಅವರು, ಬೆಳಗಾವಿ ನಗರದಲ್ಲಿ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ಹೆಮ್ಮೆಯ ವಿಷಯ. ಈ ಆಸ್ಪತ್ರೆಯ ಕಾಮಗಾರಿಗೆ 2018 ರಲ್ಲಿ ಚಾಲನೆ ನೀಡಲಾಗಿತ್ತು. ಸಾಂಕ್ರಾಮಿಕ ರೋಗ ಕೋವಿಡ್ ಹಾಗೂ ಮಳೆಯ ಕಾರಣ ಆಸ್ಪತ್ರೆ ನಿರ್ಮಾಣದ ಕಾಮಗಾರಿ ಒಂದು ವರ್ಷ ನಿಧಾನವಾಗಿದೆ. ಆಸ್ಪತ್ರೆಯ ಕಟ್ಟಡವು ನಾಲ್ಕು ಮಹಡಿ ವರೆಗೆ ನಿರ್ಮಾಣ ಆಗುತ್ತಿದೆ. ಒಂದು ಮಹಡಿಯಲ್ಲಿ ನಾಲ್ಕು ವಿಭಾಗಳು ಇರಲಿದ್ದು, ಹೀಗೆ ಒಟ್ಟು ಆಸ್ಪತ್ರೆಯಲ್ಲಿ ಎಂಟು ವಿಭಾಗಗಳು ಇರಲಿದೆ ಎಂದು ತಿಳಿಸಿದರು. ‌

ಮೊದಲ ಮಹಡಿಯಲ್ಲಿ ನಿರೋಲಜಿ ವಿಭಾಗ, ನಿರೋ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ ಹಾಗೂ ಇಂಡೋ ಕ್ರೋನಾಲಜಿ ವಿಭಾಗಳು ಇರಲಿದೆ.‌ ಎರಡನೆಯ ಮಹಡಿಯಲ್ಲಿ ಗ್ಯಾಸ್ಟ್ರೋಲಜಿ, ನೆಫ್ರೋಲಜಿ, ಸರ್ಜಿಕಲ್ ಗ್ಯಾಸ್ಟ್ರೋಲಜಿ ವಿಭಾಗಳು ಇದೆ. ಮೂರನೆಯ ಮಹಡಿಯಲ್ಲಿ ವಿಐಪಿ ರೂಮ್‌, ಜನರಲ್ ರೂಮ್, ಇರಲಿದ್ದು ನಾಲ್ಕನೇ ಮಹಡಿಯಲ್ಲಿ ಆಪರೇಷನ್ ಥಿಯೇಟರ್ ಗಳು ಇರಲಿದೆ. ಎಂದು ತಿಳಿಸಿದರು.

ಸೂಪರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಇನ್ನೂ ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಾ ಆಗಲಿದೆ. ಗುತ್ತಿಗೆದಾರರು ಹಾಗೂ ಇಂಜಿನಿಯರ್ ಜೊತೆ ಚರ್ಚೆ ನಡೆಸಿದಾಗ ಅವರು ಅಗಸ್ಟ್ ಸೆಪ್ಟೆಂಬರ್ ವರೆಗೆ ಕಾಮಗಾರಿ ಪೂರ್ಣ ಆಗಲಿದೆ ಎಂದು ತಿಳಿಸಿದ್ದಾರೆ. ಕಾಲಮಿತಿ ಒಳಗಡೆ ಕಾಮಗಾರಿ ಮುಗಿಸಲು ತ್ವರಿತವಾಗಿ ಕೆಲಸ ನಡೆಯಬೇಕು ಎಂದು ಸೂಚನೆ ನೀಡಲಾಗಿದೆ.‌ ಇನ್ನೂ ನಾಲ್ಕೈದು ತಿಂಗಳಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡಿ ಜನರಿಗೆ ಅರ್ಪಣೆ ಮಾಡಬೇಕು ಎಂದು ತಿಳಿಸಿದರು.

ಮುಂದಿನ ಮೂರು ತಿಂಗಳ ಒಳಗಡೆ ತಾಯಿ ಮಕ್ಕಳ ಆಸ್ಪತ್ರೆ, ಟ್ರೋಮಾ ಸೇಂಟರ್, ನರ್ಸಿಂಗ್ ಕಾಲೇಜು ಕೂಡಾ ಪ್ರಾರಂಭ ಆಗಲಿದೆ ಎಂದು ತಿಳಿಸಿದರು. ಈ ಆಸ್ಪತ್ರೆಯಿಂದ ಬೆಳಗಾವಿ ಜಿಲ್ಲೆಗೆ ಅಷ್ಟೇ ಅಲ್ಲದೆ ನೇರೆಯ ಗೋವಾ ಹಾಗೂ ಮಹಾರಾಷ್ಟ್ರದ ರೋಗಿಗಳಿಗೆ ಎಲ್ಲಾ ತರಹ ಚಿಕಿತ್ಸೆ ಉಚಿತವಾಗಿ ಸಿಗಲಿದೆ ಎಂದು ತಿಳಿಸಿದರು.

*ಪ್ರಾದೇಶಿಕ ಆಯುಕ್ತರ ಜೊತೆ ಸಭೆ ನಡೆಸಿದ ಶಾಸಕ ಅನಿಲ ಬೆನಕ*

ಆಸ್ಪತ್ರೆ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಶಾಸಕ ಅನಿಲ ಬೆನಕೆ ಅವರು, ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲಾನ್ ಬಿಸ್ವಾಸ್ ಜೊತೆ ಚರ್ಚೆ ನಡೆಸಿ, ಮೊದಲ ಎರಡು ಮಹಡಿಯ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಮುಗಿಸಿ, ಇನ್ನುಳಿದ ಎರಡು ಮಹಡಿ ಕಾಮಗಾರಿಯನ್ನು ಐದು ತಿಂಗಳ ಒಳಗಾಗಿ ಮುಗಿಸಿಕೊಡುವಂತೆ ತಿಳಿಸಿದರು. ‌ಇದಕ್ಕೆ ಪ್ರಾದೇಶಿಕ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ‌

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *