ಬೆಳಗಾವಿ:
ಕಳೆದ ಮೂರು ವಾರಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ನಗರದ ಜನಜೀವನ ಅಸ್ತವ್ಯಸ್ಥವಾಗಿದೆ. ಜೊತೆಗೆ ನಗರದ ರಸ್ತೆಗಳು ಮಳೆ ಹೊಡೆತಕ್ಕೆ ಚಿಂದಿ ಚಿಂದಿಯಾಗಿ ಸ್ವರೂಪವನ್ನೇ ಕಳೆದುಕೊಂಡಿವೆ.
ಬೆಳಗಾವಿ ನಗರದ ಕಾಲೇಜು ರಸ್ತೆ, ಬೋಗಾರವೇಸ್, ಪಿಶ್ ಮಾರ್ಕೆಟ್ ರಸ್ತೆ ಸೇರಿದಂತೆ ನಗರದ ಹಲವಾರು ಪ್ರಮುಖ ರಸ್ತೆಗಳು ಚಿದ್ರ ಚಿದ್ರವಾಗಿದ್ದು, ಈ ರಸ್ತೆಗಳಲ್ಲಿ ಗುಂಡಿಗಳು ತುಂಬಿಕೊಂಡಿವೆ.
ಬೆಳಗಾವಿ ನಗರದ ಹಲವಾರು ಪ್ರಮುಖ ರಸ್ತೆಗಳನ್ನು ಗಮನಿಸಿದರೆ ಗುಂಡಿಗಳಲ್ಲಿ ರಸ್ತೆ ಇದೆಯೋ ಅಥವಾ ರಸ್ತೆಗಳಲ್ಲಿ ಗುಂಡಿಗಳಿವೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಪ್ರತಿ ವರ್ಷ ಸರ್ಕಾರದ ನೂರು ಕೋಟಿ ವಿಶೇಷ ಅನುದಾನದ ಸಿಂಹ ಪಾಲನ್ನು ರಸ್ತೆಗಳ ಅಭಿವೃಧಿಗೆ ಖರ್ಚು ಮಾಡುತ್ತದೆ. ಆದರೆ ಕಳಪೆ ಮಟ್ಟದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ ಎನ್ನುವುದಕ್ಕೆ ಚಿಂದಿ ಚಿಂದಿಯಾಗಿರುವ ರಸ್ತೆಗಳೇ ಅದಕ್ಕೆ ಜೀವಂತ ಸಾಕ್ಷಿ.
ಬೆಳಗಾವಿ ಖಾನಾಪುರ ರಸ್ತೆಯು ನಗರದಲ್ಲಿ ಹಾಯ್ದು ಹೋಗಿದೆ. ನಗರ ಪ್ರದೇಶದಲ್ಲಿ ಹಾಯ್ದುಹೋಗಿರುವ ಈ ರಸ್ತೆ ಹದಗೆಟ್ಟು ಹೋಗಿದೆ. ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಪಾಲಿಕೆ ಅಧಿಕಾರಿಗಳು ಕೂಡಲೆ ನಗರದ ರಸ್ತೆಗಳ ದುರಸ್ಥಿಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ. ಕುಂಬಕರ್ಣ ನಿದ್ರೆಯಲ್ಲಿರುವ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು ರಸ್ತೆಗಳ ಪರಿಸ್ಥಿತಿಯನ್ನು ಗಮನಿಸುವುದು ಅಗತ್ಯವಾಗಿದೆ.
Check Also
ಬಸವರಾಜ ಹೊರಟ್ಟಿ ಅವರ ಪಟ್ಟಿಯಲ್ಲಿ ಎಂಈಎಸ್ ನಿಷೇಧದ ವಿಚಾರವೂ ಸೇರಲಿ- ಕರವೇ
ಬೆಳಗಾವಿ -ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ಚರ್ಚೆಗೆ …