ಬೆಳಗಾವಿ-ಬೆಳಗಾವಿಯಲ್ಲಿ ಅಕ್ರಮವಾಗಿ ಮಕ್ಕಳ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ.ಎರಡನೇ ಮದುವೆ ಮಾಡಿಸಿದ್ದ ದಲ್ಲಾಳಿಯಿಂದಲೇ ಮಕ್ಕಳ ಮಾರಾಟದ ಕೃತ್ಯ ನಡೆದಿದೆ.ಹೊಸದಾಗಿ ಮದುವೆ ಆಗಿದ್ದೀರಿ ಮಗು ಸ್ವಲ್ಪ ದಿನ ನನ್ನ ಬಳಿ ಇರ್ಲಿ ಎಂದು ನಂಬಿಸಿ ಮಗು ಮಾರಾಟ ಮಾಡಿದ ಪ್ರಕರಣ ಬಯಲಾಗಿದೆ.
ಪ್ರಕರಣ ಸಂಬಂಧ ನಾಲ್ಕು ಜನ ಆರೋಪಿಗಳನ್ನು ಹುಕ್ಕೇರಿ ಪೋಲೀಸರು ಬಂಧಿಸಿದ್ದಾರೆ.
ಮಾರಾಟವಾಗಿದ್ದ ಮಗುವನ್ನು ಪತ್ತೆಮಾಡಿದ ಪೋಲೀಸರು ತಾಯಿಗೆ ಮಗುವನ್ನು ಮರಳಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಸುಲ್ತಾಪುರ ಗ್ರಾಮದ ಸಂಗೀತಾ ಎರಡನೇ ಮದುವೆ ಆಗಿದ್ದಳು,ಎರಡನೇ ಮದುವೆ ಮಾಡಿಸಿದ್ದ ದಲ್ಲಾಳಿ ಲಕ್ಷ್ಮೀ ಗೋಲಬಾಂವಿ ಎಂಬಾತಳು
ಸಂಗೀತಾಳ ಮಗುವನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾಳೆ.
ಮದುವೆ ಮಾಡಿಸುವ ದಲ್ಲಾಳಿಲಕ್ಷ್ಮೀ ತನ್ನ ಗೆಳತಿ ಅನಸೂಯಾ ಜೊತೆಗೆ ಸೇರಿ ನಾಲ್ಕು ಲಕ್ಷಕ್ಕೆ ಮಗು ಮಾರಾಟ ಮಾಡಿದ್ದಳುಬೆಳಗಾವಿಯ ದಿಲ್ ಶಾನ್ ಎಂಬ ಮಹಿಳೆಗೆ ಮಗುವನ್ನು ಮರಾಟ ಮಾಡಲಾಗಿತ್ತು.ತನ್ನ ಮಗಗಳಿಗಾಗಿ ಮಗು ಖರಿದೀಸಿದ್ದ ದಿಲ್ ಶಾನ್ ಈಗ ಮಗುವನ್ನು ಪೋಷಕರಿಗೆ ಮುಟ್ಟಿಸಿದ್ದಾಳೆ.
ಆರೋಪಿಗಳುಮಗು ಖರೀದಿ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬರೆದುಕೊಡುವಂತೆ ದಿಲ್ ಶಾನ್ ಪಟ್ಟು ಹಿಡಿದಿದ್ದಳು.ಬಳಿಕ ಫೋನ್ ಸ್ವೀಚ್ ಆಫ್ ಮಾಡಿ ಎಸ್ಕೆಪ್ ಆಗಿದ್ದ ಆರೋಪಿಗಳುಮೂರು ತಿಂಗಳ ಬಳಿಕ ಮಗುವಿನ ತಾಯಿ ಎನ್ ಜಿಓ ಮೂಲಕ ಪೊಲೀಸರಿಗೆ ದೂರು ನೀಡಿದ್ದಳು.ಮಗು ಪತ್ತೆ ಮಾಡಿಕೊಂಡುವಂತೆ ತಾಯಿ ಸಂಗೀತ ಮನವಿ ಮಾಡಿದ್ದಳು.
ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ 7 ವರ್ಷದ ಗಂಡು ಮಗು ಪತ್ತೆಯಾಗಿದ್ದು
ಮಗುವನ್ನು ಮರಳಿ ತಾಯಿಗೆ ಒಪ್ಪಿಸಿದ ಹುಕ್ಕೇರಿ ಪೊಲೀಸರುಮಗು ಮರಾಟ ತಂಡಕ್ಕೆ ಸಂಗೀತಾ ಎರಡನೇ ಪತಿ ಸಾಥ್ ನೀಡಿದ್ದ ಎನ್ನುವ ವಿಚಾರ
ಪೊಲೀಸ್ ತನಿಖೆಯ ವೇಳೆಯಲ್ಲಿ ಬಯಲಾಗಿದೆ.
ನಾಲ್ಕು ಲಕ್ಷ ರೂಪಾಯಿಯಲ್ಲಿ ಐದು ಜನರಿಗೆ ಪಾಲಾಗಿತ್ತು.ಪ್ರಕರಣ ಸಂಬಂಧ ದಲ್ಲಾಳಿ ಲಕ್ಷ್ಮೀ ಗೋಲಬಾಂವಿ,ಅನಸೂಯಾ ದೊಡ್ಡಮನಿ, ಸಂಗೀತಾ ಸಾವಂತ್ ಹಾಗೂ ಸದಾಶಿವ ಮಗದುಮ್ಮ ಎಂಬಾತರನ್ನು ಬಂಧಿಸಲಾಗಿದೆ.