ಬೆಳಗಾವಿ- ಕೇಂದ್ರದ ರಾಜ್ಯ ರೇಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು ನಾಳೆ ಈ ಉಪ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ಸಾದ್ಯತೆ ಇದೆ.
ತಮೀಳುನಾಡು,ಪಶ್ಚಿಮ ಬಂಗಾಲ,ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು ಕೇಂದ್ರ ಚುನಾವಣಾ ಆಯೋಗ ಈ ರಾಜ್ಯಗಳ ಚುನಾವಣೆಯ ದಿನಾಂಕ ಪ್ರಕಟಿಸಲಿದ್ದು,ನಾಳೆ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಚುನಾವಣಾ ಆಯೋಗ ಸುದ್ಧಿಗೋಷ್ಠಿ ಕರೆದಿದ್ದು. ಈ ಸುದ್ಧಿಗೋಷ್ಠಿಯಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ದಿನಾಂಕವೂ ಪ್ರಕಟವಾಗುವ ಸಾದ್ಯತೆಗಳಿವೆ
ನಾಳೆ ಬೆಳಗಾವಿ ಉಪ ಚುನಾವಣೆಯ ದಿನಾಂಕ ಪ್ರಕಟವಾದಲ್ಲಿ ಬಿಜೆಪಿ,ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದ್ದು, ಎರಡೂ ಪಕ್ಷಗಳ ಆಕಾಂಕ್ಷಿಗಳ ಎದೆಯಲ್ಲಿ ಈಗ ಢವ,ಢವ ಶುರುವಾಗಿದೆ.
ಬಹುತೇಕ ನಾಳೆ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಚುನಾವಣಾ ಆಯೋಗದ ಸುದ್ಧಿಗೋಷ್ಠಿಯಲ್ಲಿ ಬೆಳಗಾವಿ ಬೈ ಇಲರಕ್ಷನ್ ಘೋಷಣೆಯಾದಲ್ಲಿ,ನಾಳೆಯಿಂದ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳಲಿವೆ.