ಬೆಳಗಾವಿಯ ರೌಡಿಯ ಬರ್ಬರ ಹತ್ಯೆ ಕೇಸ್;ಸುಪಾರಿ ಕೊಟ್ಟವ ಅರೆಸ್ಟ್
ಬೆಳಗಾವಿ: ಬೆಳಗಾವಿಯಲ್ಲಿ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ರೌಡಿಯ ಹತ್ಯೆ ಪ್ರಕರಣ ಸಂಬಂಧ ಮಾಳಮಾರುತಿ ಠಾಣೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಲಕ್ಷ್ಮಣ ದಡ್ಡಿ (55) ಬಂಧಿತ ಆರೋಪಿ.
ಅಕ್ಟೋಬರ್ 26 ಮಧ್ಯರಾತ್ರಿ ಸ್ನೇಹಿತನ ಪುತ್ರನ ಮಗನ ಬರ್ತಡೆ ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದ ರೌಡಿ ಶಹಬಾಜ್ ಪಠಾಣ್ ನನ್ನು ಬೆನ್ನೆತ್ತಿ ಕೊಲೆ ಮಾಡಲಾಗಿತ್ತು. ಹಳೇ ಧ್ವೇಷವೇ ಶಹಬಾಜ್ ಕೊಲೆಗೆ ಪ್ರಮುಖ ಕಾರಣ ಎಂಬುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕೆಲ ವರ್ಷಗಳ ಹಿಂದೆ ಆರೋಪಿ ಲಕ್ಷ್ಮಣ ದಡ್ಡಿ ಪುತ್ರನ ಮೇಲೆ ಶಹವಾಜ್ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಇದರಿಂದ ಕುಪಿತಕೊಂಡಿದ್ದ ಲಕ್ಷ್ಮಣ ದಡ್ಡಿ ಶಹಬಾಜ್ ಹತ್ಯೆಗೆ ಸುಪಾರಿ ಕೊಟ್ಟಿದ್ದನು. ಅಲ್ಲದೇ ಹತ್ಯೆ ಪ್ರಕರಣದಲ್ಲಿ ತಾನೂ ಭಾಗಿಯಾಗಿದ್ದನು. ಹತ್ಯೆ ಘಟನೆ ಬಳಿಕ ಲಕ್ಷ್ಮಣ ದಡ್ಡಿ ಪರಾರಿಯಾಗಿದ್ದನು. ಇಂದು ರೌಡಿ ಹತ್ಯೆಯ ಹಂತಕನನ್ನು ಮಾಳಮಾರುತಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.
ಇದಕ್ಕೂ ಮೊದಲು ಮಾಳಮಾರುತಿ ಠಾಣೆ ಪೊಲೀಸರು ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಬಸವರಾಜ್ ದಡ್ಡಿ (24) ಹಾಗೂ ಬಸವಣ್ಣಿ ನಾಯಿಕ (27) ಎಂಬುವವರನ್ನು ಬಂಧಿಸಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ