Breaking News

ಬೆಳಗಾವಿಯಿಂದ ಮೋದಿ,ಅಮೀತ್ ಶಾ ಹೆಸರು ಪ್ರಸ್ತಾಪ ಆಗುವದಷ್ಟೇ ಬಾಕಿ….

ಬೆಳಗಾವಿ-ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ,ಆದ್ರೆ ಆಕಾಂಕ್ಷಿಗಳ ಪಡ್ಟಿ ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಲೇ ಇದೆ.

ಸುಮಾರು 70 ಕ್ಕಿಂತ ಹೆಚ್ವು ಜನ ಆಕಾಂಕ್ಷಿಗಳು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸಲು ರೆಡಿಯಾಗಿದ್ದು ಬಿಜೆಪಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ದೆ ಮಾಡ್ತಾರೆ,ಇವರು ಸ್ಪರ್ದೆ ಮಾಡುತ್ತಾರೆ ಎಂಬ ಸುದ್ಧಿಗಳು ಹರದಾಡುತ್ತಲೇ ಇದೆ‌,ಕೆಲ ದಿನಗಳ ಹಿಂದಷ್ಟೇ ಜಗದೀಶ್ ಶೆಟ್ಟರ್ ಸ್ಪರ್ದೆ ಮಾಡ್ತಾರೆ ಎನ್ನುವ ಸುದ್ಧಿಯೂ ಬೆಳಗಾವಿ ಜಿಲ್ಲೆಯಲ್ಲಿ ಸುಳಿದಾಡಿತ್ತು,ಈ ವಿಚಾರದಲ್ಲಿ ಬಹುತೇಕ ಎಲ್ಲ ಘಟಾನುಘಟಿ ನಾಯಕರ ಹೆಸರು ಪ್ರಸ್ತಾಪ ಆಗಿದೆ.ಬೆಳಗಾವಿಯಿಂದ ನರೇಂದ್ರ ಮೋದಿ ಅಥವಾ ಅಮೀತ ಶಾ ಅವರ ಹೆಸರು ಪ್ರಸ್ತಾಪ ಆಗುವದಷ್ಟೇ ಬಾಕಿ ಇದೆ.

ಬಿಜೆಪಿ ಹೈಕಮಾಂಡ್ ಈರಣ್ಣಾ ಕಡಾಡಿ,ಮತ್ತು ಗಸ್ತಿ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿದ ಬಳಿಕ ಬಿಜೆಪಿ ಸಾಮಾನ್ಯ ಕಾರ್ಯಕರ್ತರಲ್ಲೂ ಉತ್ಸಾಹ ಮೂಡಿದೆ.ಸಹಜವಾಗಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು,ದೆಹಲಿ ಪ್ರತಿನಿಧಿ ಯಡಿಯೂರಪ್ಪನವರ ಪರಮ ಭಕ್ತ ಶಂಕರಗೌಡ ಪಾಟೀಲ,ವಿಶ್ವನಾಥ ಪಾಟೀಲ,ಎಂಬಿ ಝಿರಲಿ,ಡಾ.ರವಿ ಪಾಟೀಲ,ಕಿರಣ ಜಾಧವ,ರಾಜು ಜಿಕ್ಕನಗೌಡರ,ವಿರೇಶ ಕಿವಡಸಣ್ಣವರ,ರಾಜೀವ ಟೋಪಣ್ಣವರ,ರುದ್ರಣ್ಣಾ ಚಂದರಗಿ, ಸೇರಿದಂತೆ 70 ಕ್ಕೂ ಹೆಚ್ವು ಜನ ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ,ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಕೊಡದಿದ್ದರೆ ನಮಗೆ ಟಿಕೆಟ್ ಕೊಡಿ ಎನ್ನುವ ಬೇಡಿಕೆ ಇಟ್ಟಿದ್ದಾರೆ.

ನಾಳೆ ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮೀಟಿ ಮೀಟೀಂಗ್ ನಡೆಯಲಿದೆ,ಎಲ್ಲ ಆಕಾಂಕ್ಷಿಗಳು ಗೆರಿಗೆರಿ ಅಂಗಿ ಹೊಲಿಸಿ ಲಾಬಿ ಮಾಡಲು ರೆಡಿಯಾಗಿದ್ದಾರೆ.

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *