Breaking News

ಅಂಗನವಾಡಿ ಕಟ್ಟಡಗಳಿಗೆ 1.40 ಕೋಟಿ ರೂ ಅನುದಾನ….

ಗೋಕಾಕ- ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ೧.೪೦ ಕೋಟಿ ರೂಪಾಯಿಗಳು ಮಂಜೂರಾಗಿದ್ದು, ಕಟ್ಟಡ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಭಾವಿ ಕ್ಷೇತ್ರದ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಕಳೆದ ಶುಕ್ರವಾರದಂದು ತಾಲ್ಲೂಕಿನ ಖಂಡ್ರಟ್ಟಿ ಗ್ರಾಮದಲ್ಲಿ ೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಇದಕ್ಕಾಗಿ ನರೇಗಾ ಯೋಜನೆಯಡಿ ಅನುದಾನವನ್ನು ನೀಡಲಾಗಿದೆ ಎಂದವರು ತಿಳಿಸಿದರು.

ಖಂಡ್ರಟ್ಟಿ, ಹಳ್ಳೂರ, ಸುಣಧೋಳಿ, ತುಕ್ಕಾನಟ್ಟಿ, ಹೊಸಟ್ಟಿ, ಉದಗಟ್ಟಿ ಮತ್ತು ದಂಡಾಪೂರ ಗ್ರಾಮಗಳಿಗೆ ತಲಾ ೨೦ ಲಕ್ಷ ರೂಪಾಯಿಗಳನ್ನು ಇದಕ್ಕಾಗಿ ವ್ಯಯ ಮಾಡಲಾಗುತ್ತಿದೆ ಎಂದು ಹೇಳಿದರು.
ಖಂಡ್ರಟ್ಟಿ ಗ್ರಾಮದಲ್ಲಿ ನಮ್ಮ ‌ಸರ್ಕಾರವಿದ್ದಾಗ ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ಕೈಕೊಳ್ಳಲಾಗಿದೆ. ಜನರ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡಲಾಗಿದೆ. ಈಗಿರುವ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನವನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.

ಅಗತ್ಯವಿರುವ ರಸ್ತೆ ದುರಸ್ತಿ ಕಾಮಗಾರಿಯನ್ನು ಕೈಕೊಳ್ಳುತ್ತೇನೆ. ಖಂಡ್ರಟ್ಟಿ ಗ್ರಾಮಕ್ಕೆ ಸಂಪರ್ಕವಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಮಾಜಿ ತಾ.ಪಂ. ಸದಸ್ಯ ಲಕ್ಷ್ಮಣ ಮುಸಗುಪ್ಪಿ, ಅರಭಾವಿ ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ, ಪ್ರಮುಖರಾದ ಲಕ್ಷ್ಮಣ ಬೀರಾಣಿ, ಬಾಳಪ್ಪ ಕಪರಟ್ಟಿ, ಲಕ್ಕಪ್ಪ ಬೆಳಗಲಿ, ಸುನೀಲ ಎತ್ತಿನಮನಿ, ಭೀಮಪ್ಪ ಜೋಗಿ, ಬಾಳಪ್ಪ ಜಗ್ಗಿನವರ, ಅರ್ಜುನ ಅಳಗುಡಿ, ಮುತ್ತೆಪ್ಪ ಪೂಜೇರಿ, ಯಲ್ಲಪ್ಪ ಸೂರನ್ನವರ, ರಮೇಶ ಬಡಿಗವಾಡ, ಕೆಂಪಣ್ಣ ಮಾದರ, ವಸಂತ ಕಪರಟ್ಟಿ, ಗಣಪತಿ ಚಿಪ್ಪಲಕಟ್ಟಿ, ಸಿದ್ದಪ್ಪ ಜಗ್ಗಿನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *