ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿರುವ ಪಂಚಗಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.ರಾಧಾ ನಗರಿ ಡ್ಯಾಂ ನಿಂದ ಪಂಚ ಗಂಗಾ ನದಿಗೆ 12 ಸಾವಿರ ಕ್ಯುಸೆಕ್ಸ್ ನೀರು ಬಿಡಲಾಗಿದ್ದು. ಪಂಚಗಂಗಾ ನದಿಯ 27 ಸೇತುವೆಗಳು ( ಬಾಂಧಾರಗಳು) ಮಳುಗಡೆಯಾಗಿವೆ.
ಪಂಚಗಂಗಾ ನದಿಗೆ ಮಹಾಪೂರ ಬಂದ್ರೆ ಬೆಳಗಾವಿ ಜನ ಆತಂಕ ಯ್ಯಾಕೆ ಪಡಬೇಕು ಅಂದ್ರೆ ಕೊಲ್ಹಾಪೂರದಿಂದ ರಬಸವಾಗಿ ಹರಿಯುತ್ತಿರುವ ಈ ನದಿ ಮಹಾರಾಷ್ಟ್ರ ಹದ್ದಿಯಲ್ಲಿರುವ ನರಸಿಂಹವಾಡಿ ಬಳಿ ಕೃಷ್ಣಾ ನದಿಗೆ ಕೂಡುತ್ತದೆ.ಇಲ್ಲಿ ಪಂಚಗಂಗಾ ನದಿ ಮತ್ತು ಕೃಷ್ಣಾ ನದಿಯ ಸಂಗಮ ವಾಗುತ್ತದೆ.ಪಂಚಗಂಗಾ ನದಿಗೆ ಮಹಾಪೂರ ಬಂದ್ರೆ,ಈ ನದಿಯ ನೀರು ನೇರವಾಗಿ ಕೃಷ್ಣಾ ನದಿಗೆ ಸೇರುತ್ತದೆ.
ಪಂಚಗಂಗಾ ನದಿ ಇವತ್ತು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.ಈ ನದಿಗೆ ರಾಧಾ ನಗರಿ ಡ್ಯಾಂ ನಿಂದ 12 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು ಈ ನೀರು ನೇರವಾಗಿ ಕೃಷ್ಣಾ ನದಿಗೆ ಸೇರುತ್ತದೆ.ಈ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಹೆಚ್ವು ಮಳೆಯಾದ್ರೆ ಕೃಷ್ಣಾ ತೀರದಲ್ಲಿ ಆತಂಕ ಎದುರಾಗುತ್ತದೆ.
ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಪಂಚಗಂಗಾ ನದಿಯ ಒಳ ಹರಿವು ಕೃಷ್ಣಾ ಒಡಲಿಗೆ ಸೇರಲಿದೆ.
ಖಾನಾಪೂರ, ಜಾಂಬೋಟಿ,ಸೇರಿದಂತೆ ಪಶ್ಚಿಮಘಟ್ಟದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದೆ. ಬೆಳಗಾವಿ ಮಹಾನಗರ ಸೇರಿದಂತೆ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ.