Breaking News

ತುಕ್ಕಾನಟ್ಟಿ ಗ್ರಾಮದ ಆಶ್ರಯನೆಗಳ ಹಂಚಿಕೆಯಲ್ಲಿ ಗೋಲ್ ಮಾಲ್ ಗ್ರಾಮಸ್ಥರ ಆರೋಪ

ಬೆಳಗಾವಿ

ತುಕ್ಕಾನಟ್ಟಿ ಗ್ರಾಮದಲ್ಲಿ ಜೂ.2ರಂದು ನಡೆದ ತುರ್ತು ಗ್ರಾಮ ಸಭೆಯಲ್ಲಿ ಆಯ್ಕೆಯಾದ ಆಶ್ರಯ ಮನೆಗಳನ್ನು ತಡೆಹಿಡಿಯುವಂತೆ ಆಗ್ರಹಿಸಿ ಬುಧವಾರ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತುಕ್ಕಾನಟ್ಟಿ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಆಶ್ರಯ‌ಮನೆಗಳ ಆಯ್ಕೆಯಲ್ಲಿ ತಮಗೆ ಬೇಕಾದ ವ್ಯಕ್ತಿಗಳಿಗೆ ಮನೆ ಹಂಚಿಕೆ ಮಾಡಿದ್ದಾರೆ. ಬಡತನದ ರೇಖೆಗಿಂತ ಕೆಳಗಿನ ಕುಟುಂಬದವರು ನಾಲ್ಕೈದು ಸಲ ಅರ್ಜಿ ಸಲ್ಲಿಸಿದರೂ ಮನೆ ಹಂಚಿಕೆ ಮಾಡದಿರುವುದು ಹಲವು ಅನುಮಾನಲ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಐದರಿಂದ ಹತ್ತು ಎಕರೆ ಜಮೀನು ಹೊಂದಿದ ಕುಟುಂಬದವರ ಕಡೆಯಿಂದ 30 ಸಾವಿರ ರು. ಹಣ ಪಡೆದು ಆಶ್ರಯ ಮನೆ ಹಂಚಿಕೆ ಮಾಡಿದ್ದಾರೆ. ಒಂದೇ ಕುಟುಂಬದವರಿಗೆ ಎರಡು ಮನೆಗಳನ್ನು ಹಂಚಿಕೆ ಮಾಡಿದ್ದಲ್ಲದೆ, ಓರ್ವ ವಿದ್ಯಾರ್ಥಿಯ ಹೆಸರಿನಲ್ಲಿ ಮನೆ ಹಂಚಿಕೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ‌.
ಹಲವಾರು ವರ್ಷಗಳಿಂದ ಆಶ್ರಯ‌ ಮನೆ ಮಂಜೂರಾತಿಗಾಗಿ ಗ್ರಾಮಸ್ಥರು ಹೋರಾಟ ನಡೆಸಿದ್ದೇವೆ. ನಾವು ಕಡು ಬಡವರು ಹಲವಾರು ಸಲ ಗ್ರಾಪಂನಲ್ಲಿ ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸಿದ್ದೇವು. ಅರ್ಹರಿಹೆ ಮನೆ ಹಂಚಿಕೆ ಮಾಡುವ ಬದಲು ಅಕ್ರಮವಾಗಿ ಶ್ರೀಮಂತರಿಗೆ ಮನೆ ಹಂಚಿಕೆ ಮಾಡಿರುತ್ತಾರೆ. ಕೂಡಲೇ ಅದನ್ನು ತಡೆ ಹಿಡಯಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಭೀಮಪ್ಪ ಗಡಾದ, ಗೌರಿ ಹಮ್ಮನ್ನವರ, ರೂಪಾ ಬಬಲೆನ್ನವತ, ಯಲ್ಲಪ್ಪಾ ಮರ್ದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.