ಬೆಳಗಾವಿ- ಜಿಎಸ್ ಎಸ್ ವಾಕ್ ಶ್ರವಣ ಸಂಸ್ಥೆ ಧಾರವಾಡ ಹಾಗು ವಿವಿಧ ವೈದ್ಯಕೀಯ ಸಂಸ್ಥೆಗಳ ಆಶ್ರಯದಲ್ಲಿ ಕಿವಿ ಕೇಳಿಸದೇ ಇರುವ ಮಕ್ಕಳಿಗೆ ಹಾಗು ಜೊತೆಗೆ ಎಲ್ಲರಿಗೂ ಶ್ರವಣ ಯಂತ್ರಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಭೀಮ್ದ ನಿರ್ದೇಶಕ ಕಳಸದ ತಿಳಿಸಿದ್ದಾರೆ
ಜಿಲ್ಲಾ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ದೇಶದ ಜನ ಸಂಖ್ಯೆಯಲ್ಲಿ ಶೇ ೬.೩ ರಷ್ಟು ಜನರಿಗೆ ಕಿವಿ ದೋಷ ಇದೆ ಬೆಳಗಾವಿ ಜಿಲ್ಲೆಯಲ್ಲಿ ೧೯ ಸಾವಿರ ಜನರಿಗೆ ಕಿವಿ ದೋಷ ಇರುವದು ಕಂಡು ಬಂದಿದೆ ಅದಕ್ಕಾಗಿ ಮಾರ್ಚ ೨೧ ಹಾಗು ೨೨ ರಂದು ಎರಡು ದಿನಗಳ ಕಾಲ ಉಚಿತ ವಾಕ್ ಮತ್ತು ಶ್ರವಣ ತಪಾಸಣೆ ಕೊಠಡಿ ಸಂಖ್ಯೆ ೫೦ ರಲ್ಲಿ ನಡೆಯಲಿದ್ದು ಇದರ ಲಾಭ ಪಡೆಯುವಂತೆ ಕಳಸದ ಕೋರಿದ್ದಾರೆ
ಕಿವಿ ಕೇಳಿಸದೇ ಇರುವವರು ಮತ್ತು ಕಿವಿ ದೋಷ ಇರುವವರು ಮತ್ತು ಮಾತಿನಲ್ಲಿ ಅಸ್ಪಷ್ಟತೆ ಇರುವವರು ತಪಾಸಣೆ ಮಾಡಿಸಿ ಕೊಳ್ಳಬಹುದು ಮತ್ತು ಕಿವಿ ಕೇಳಿಸದೇ ಇರುವವರಿಗೆ ಮೈಸೂರ ಮೂಲದ ಜಿಎಸ್ಎಸ್ ಶ್ರವಣ ಸಂಸ್ಥೆ ಶ್ರವಣ ಯಂತ್ರಗಳನ್ನು ನೀಡಲಿದೆ ಎಂದು ಭೀಮ್ಸ ನಿರ್ದೇಶಕ ಕಳಸದ ತಿಳಿಸಿದರು
ಮಕ್ಕಳು ಮಾತನಾಡುವಾಗ ಅವರ ಮಾತಿನಲ್ಲಿ ಅಸ್ಪಷ್ಟತೆ ಇದ್ದಲ್ಲಿ ಅವರಿಗೆ ಟ್ರೀಟ್ ಮಾಡಲು ಇಬ್ಬರು ಸ್ಪೇಶ್ಯಾಲಿಸ್ಟಗಳು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಕಳಸದ ತಿಳಿಸಿದ್ದಾರೆ