ಬೆಳಗಾವಿ- ರಾಜ್ಯದ ಸಕಾರಿ ಕಚೇರಿಗಳ ಮೇಲೆ ರಾಷ್ಟ್ರ ಧ್ವಜಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕನ್ನಡ ನಾಡ ಧ್ವಜ ಹಾರಿಸುವ ಕಾನೂನಾತ್ಮಕ ಆದೇಶ ಹೊರಡಿಸುವ ಕಡತ ಮುಖ್ಯಮಂತ್ರಿಗಳ ಕಚೇರಿಯಿಂದ ಮಾಯವಾಗಿದ್ದು ಕಡತ ಹುಡಿಕಿ ಕೂಡಲೇ ಆದೇಶ ಹೊರಡಿಸುವಂತೆ ಸಮಾಜ ಸೇವಕ ಮಾಹಿತಿ ಹಕ್ಕು ಕಾರ್ಯಕರ್ತ ಭಿಮಪ್ಪಾ ಗಡಾದ ಒತ್ತಾಯಿಸಿದ್ದಾರೆ.
ಕನ್ನಡ ನಾಡು ನುಡಿಗೆ ಸಮಂಧಿಸಿದ ಕಡತವೇ ಮುಖ್ಯಮಂತ್ರಿಗಳ ಕಚೇರಿಯಿಂದ ನಾಪತ್ತೆಯಾಗಿದೆ ಕನ್ನಡ ಧ್ವಜವನ್ನು ಹಾರಿಸಲು ಕಾನೂನಾತ್ಮಕ ಆದೇಶ ಹೊರಿಸಲು ಮುಖ್ಯಮಂತ್ರಿಗಳ ಅನುಮೋದನೆಗೆ ಹೋಗಿರುವ ಈ ಕಡತ ಒಂಬತ್ತು ತಿಂಗಳಾದರೂ ಮುಖ್ಯಮಂತ್ರಿಗಳ ಕೈಗೆ ಸಿಕ್ಕಿಲ್ಲ ಮುಖ್ಯಮಂತ್ರಿಗಳ ಆಧೀನ ಕಾರ್ಯದರ್ಶಿಗಳು ಕಡತ ನಾಪತ್ತೆಯಾಗಿದೆ ಎಂದು ತಿಳಿಸಿದ್ದು ಈ ಸರ್ಕಾರಕ್ಕೆ ಕನ್ನಡದ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದನ್ನು ತೋರಿಸುತ್ತದೆ ಎಂದು ಗಡಾದ ಆರೋಪಿಸಿದ್ದಾರೆ
ಕೂಡಲೇ ಕಡತ ಹುಡುಕಿ ಅದಕ್ಕೆ ಅನುಮೋದನೆ ನೀಡಬೇಕೆಂದು ಭಿಮಪ್ಪಾ ಗಡಾದ ಒತ್ತಾಯಿಸಿದ್ದಾರೆ.
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ