ಬೆಳಗಾವಿ-ಕರ್ನಾಟಕದ ಜೀವ ನದಿಯಾಗಿರುವ ಕಾವೇರಿಯಿಂದ ತಮಿಳನಾಡಿಗೆ ನೀರು ಬಿಡುವಂತೆ ಮಾನ್ಯ ಸುಪ್ರೀಂ ಕೋರ್ಟ ಆದೇಶ ನಿಡಿರುವದನ್ನು ಖಂಡಿಸಿ ಈ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ ಮಾಡುತ್ತಿದೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ನೂರಾರು ಕನ್ನಡದ ಕಾರ್ಯಕರ್ತರು ಚನ್ನಮ್ಮಾ ವೃತ್ತದಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು
ಕಾವೇರಿ ಮಹಾದಾಯಿ ರಾಜ್ಯದ ಎರಡು ಕಣ್ಣುಗಳು ವಿಷಯದಲ್ಲಿ ಸರ್ಕಾರ ಹೆಚ್ಚನ ಕಾಳಜಿ ವಹಿಸಿ ಕಾನೂನಾತ್ಮಕ ಹೋರಾಟ ಮಾಡಬೇಕು.ರಾಜ್ಯದಲ್ಲಿ ಬರಗಾಲವಿದ್ದು ಜಲಾಶಯಗಳು ಖಾಲಿ ಇವೆ ಅನ್ನೋದನ್ನು ಮಾನ್ಯ ಸುಪ್ರೀಂ ಕೋರ್ಟಿಗೆ ಮನವರಿಕೆ ಆಗುವ ರೀತಿಯಲ್ಲಿ ವಾದ ಮಂಡಿಸುವಂತೆ ಹೋರಾಟಗಾರರು ಒತ್ತಾಯಿಸಿದರು
ಕಾವೇರಿ ವಿಷಯದಲ್ಲಿ ರಾಜ್ಯದ ಜನರಿಗೆ ಅನ್ಯಾಯವಾಗಿದ್ದು ರಾಜ್ಯದ ಜನ ಊತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಎಂದು ಭೇಧ ಮರೆತು ನ್ಯಾಯ ಸಿಗೋವರೆಗೆ ಹೋರಾಟ ಮಾಡಬೇಕು ಅದಕ್ಕಾಗಿ ಅಖಂಡ ಕರ್ನಾಟಕ ಹೋರಾಟದಲ್ಲಿ ಧುಮುಕಬೇಕು ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ
ಸುಮೀತ ಗಿರೆಪ್ಪಗೌಡರ.ರಮೇಶ ಯರಗಣ್ಣವರ ವಿನಾಯಕ ಬೋವಿ,ಸತೀಶ ಗಾಡಿವಡ್ಡÀರ. ಸಂಪತ್ ಸಕ್ರೆಣ್ಣವರ. ಶರೀಧರ ತಳವಾರ. ದರ್ಶನ ಧಾರವಾಡ ಮೊದಲಾದವರು ಉಪಸ್ಥಿತರಿದ್ದರು
Check Also
ಎರಡು ಗ್ರಾಮಗಳಿಗೆ ದೀಪಾವಳಿ ಗೀಫ್ಟ್ ಕೊಟ್ಟ ಸಾಹುಕಾರ್….!!
ತಿಗಡಿ ಮತ್ತು ಅವರಾದಿ ಗ್ರಾಮಗಳಿಗೆ ದಸರಾ ಹಬ್ಬದ ಗಿಫ್ಟ್ ಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಗಡಿ, ಅವರಾದಿಗೆ ಪದವಿ ಪೂರ್ವ …