ಗೋಕಾಕ್ ಚುನಾವಣೆ ಕಣಕ್ಕೆ ಭೀಮಶಿ ಜಾರಕಿಹೊಳಿ ಎಂಟ್ರಿ..
ಬೆಳಗಾವಿ- ಗೋಕಾಕ ಉಪ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ ದಿನಕ್ಕೊಂದು ಟ್ವಿಸ್ಟ ಪಡೆಯುತ್ತಿದ್ದು ಭೀಮಶಿ ಜಾರಕಿಹೊಳಿ ಗೋಕಾಕ್ ಕಣಕ್ಕೆ ಧುಮುಕಿ ಅಚ್ಚರಿ ಮೂಡಿಸಿದ್ದಾರೆ
2008 ,ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭೀಮಶಿ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಅವರ ಎದುರಾಳಿಯಾಗಿದ್ದರು ಇದೇ ಭೀಮಶಿ ಜಾರಕಿಹೊಳಿ ಅವರು ಇಂದು ರಮೇಶ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಭೀಮಶಿ ಜಾರಕಿಹೊಳಿ ಗೋಕಾಕ ಕ್ಷೇತ್ರದ ಜನ ಸತತವಾಗಿ ಐದು ಬಾರಿ ರಮೇಶ್ ಜಾರಕಿಹೊಳಿ ಅವರನ್ನು ಗೆಲ್ಲಿಸಿದ್ದಾರೆ ಈ ಬಾರಿಯೂ ಗೆಲ್ಲಿಸುತ್ತಾರೆ ರಮೇಶ್ ಗೋಕಾಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಹೀಗಾಗಿ ಉಪ ಚುನಾವಣೆಯಲ್ಲಿ ರಮೇಶ್ ಗೆಲುವು ಖಚಿತ ಎಂದು ಭೀಮಶಿ ಜಾರಕಿಹೊಳಿ ವಿಶ್ವಾಸ ವ್ಯೆಕ್ತಪಡಿಸಿದರು.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					