ಬೆಳಗಾವಿ- ಬೆಳಗಾವಿ ನಗರದ ಖಾನಾಪೂರ ರಸ್ತೆಯಲ್ಲಿರುವ ಅನಿಗೋಳ ಕ್ರಾಸ್ ನಲ್ಲಿರುವ ಬಿಗ್ ಬಝಾರ್ ಮೇಲೆ ದಾಳಿ ಮಾಡಿರುವ ಆಹಾರ ಸಂರಕ್ಷಣಾಧಿಕಾರಿ ಅಧಿಕಾರಿ ಎಂಎಸ್ ಪಲ್ಲೇದ ದಾಳಿ ಮಾಡಿದ್ದಾರೆ
ಬಿಗ್ ಬಝಾರ್ ನಲ್ಲಿ ಔಟ್ ಡೇಟೆಡ್ ಬಿಸ್ಕೀತ್ ಪ್ಯಾಕೇಟ್ ಗಳನ್ನು ಮಾರಾಟ ಮಾಡುವ ಬಗ್ಗೆ ಗ್ರಾಹಕರೊಬ್ಬರು ಆಹಾರ ಸಂರಕ್ಷಣಾಧಿಕಾರಿ ಅವರಿಗೆ ದೂರು ಸಲಗಲಿಸಿದ್ದರು
ಈ ಕುರಿತುದಾಳಿ ಮಾಡಿರುವ ಅಧಿಕಾರಿಗಳು ಅವಧಿ ಮುಗಿದ ಬಿಸ್ಕೀತ್ ಪ್ಯಾಕೇಟ್ ಗಳನ್ನು ವಶ ಪಡಿಸಿಕೊಂಡು ಐದು ಸಾವಿರ ದಂಡ ವಿಧಿಸಿದ್ದಾರೆ
ನಿನ್ನೆ ಅಷ್ಟೆ ಬಿಗ್ ಬಝಾರ್ ನಲ್ಲಿ ಟೇಸ್ಟೀ ಎಂಬ ಹೆಸರಿನ ಎರಡು ಬಿಸ್ಕೀತ್ ಪ್ಯಾಕೇಟ್ ಖರೀಧಿಸಿದ ಗ್ರಾಹಕರೊಬ್ಬರು ಪ್ಯಾಕೇಟ್ ಅವಧಿ ಮುಗಿದ ವಿಷಯ ತಿಳಿದು ಬಿಗ್ ಬಝಾರ್ ನ ಮೇಲ್ವಿಚಾರಕರ ಜೊತೆ ಜಗಳಾಡಿಕೊಂಡಿದ್ದರು ಗ್ರಾಹಕ ಖರೀದಿಸಿದ ಎರಡು ಅವಧಿ ಮುಗಿದ ಬಿಸ್ಕೀತ್ ಪ್ಯಾಕೇಟ್ ಗಳನ್ನು ಆಧರಿಸಿ ಆಹಾರ ಸಂರಕ್ಷಣಾಧಿಕಾರಿ ಪಲ್ಲೇದ ಅವರು ಬಿಗ್ ಬಝಾರ್ ಗೆ ಐದು ಸಾವಿರ ದಂಡ ವಿಧಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ