ಬೆಳಗಾವಿ- ಬೆಳಗಾವಿಯಲ್ಲಿ ಕೆ.ಕಲ್ಯಾಣ ಅವರ ಕುಟುಂಬದ ಕಲಹವನ್ನು ಬೆಳಗಾವಿ ಪೋಲೀಸರು ಬಗೆಹರಿಸಿದ ಬೆನ್ನಲ್ಲಿಯೇ ಬೆಳಗಾವಿ ನಗರದಲ್ಲಿ ಮತ್ತೊಂದು ಕಲ್ಯಾಣ ಕಲಹ ಶುರುವಾಗಿದೆ,ಈ ಕಲಹ ಕುಟುಂಬ ಕಲಹ ಅಲ್ಲ ಹಾಗಾದ್ರೆ ಏನಿದು ಹೊಸ ಕಲ್ಯಾಣ ಕಲಹ ಡಿಟೇಲ್ ವರದಿ ಇಲ್ಲಿದೆ ನೋಡಿ….
ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರು ತಮ್ಮ ಪುತ್ರನ ಬರ್ತಡೇ ಸಿಲೆಬ್ರೆಶನ್ ಗಾಗಿ ಅವರ ಕುಟುಂಬ ಹಾಗು ಅವರ ಅಳಿಯನ ಕುಟುಂಬದವರು ಜಾಂಬೋಟಿ ಬಳಿಯ ರಿಸಾರ್ಟ್ ಗೆ ಹೋಗಿದ್ದರು,ಬರ್ತಡೇ ಆಚರಣೆ ಮಾಡಿ ಮರಳಿ ಬರುವಾಗ ನಾವಗೆ ಬಳಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರ ಅಳಿಯನ ಕಾರಿಗೆ ಬೆಳಗಾವಿ ಶಹಾಪೂರ ಮೂಲದ ಕುಟುಂಬಸ್ಥರ ಕಾರೊಂದು ಡಿಕ್ಕಿ ಹೊಡೆದು ಅನೇಕ ಅನಾಹುತಗಳನ್ನು ಸೃಷ್ಠಿಸಿದೆ
ಕಾರು ಡಿಕ್ಕಿ ಹೊಡೆದ ಬಳಿಕ ಇಬ್ಬರ ನಡುವೆ ವಾದ ವಿವಾದವಾಗಿದೆ,ಅಷ್ಟರಲ್ಲಿ ಸಿಪಿಐ ಕಲ್ಯಾಣ ಶೆಟ್ಟಿ ಅವರ ಕಾರು ಮುಂದಕ್ಕೆ ಸಾಗಿತ್ತು ಅಳಿಯ ಪೋನ್ ಮಾಡಿ ಗಲಾಟೆ ನಡೆಯುತ್ತಿದೆ ತಿರುಗಿ ಬನ್ನಿ ಅಂತಾ ಹೇಳಿದಾಗ ಕಲ್ಯಾಣ ಶೆಟ್ಟಿ ಅವರು ತಿರುಗಿ ಬಂದು ಅವರ ಅಳಿಯನ ಜೊತೆ ಗಲಾಟೆ ಮಾಡಿದ ಸುನೀಲ ಕುರಣಕರ ರೂಪೇಶ್ ಪಾಟೀಲ ಅವರಿಗೆ ಸಿಪಿಐ ಕಲ್ಯಾಣ ಶೆಟ್ಟಿ ಸರ್ಕಾರಿ ರಿವಾಲ್ವರ್ ತೋರಿಸಿದ್ದಾರೆ,ಬೆದರಿಸಿದ್ದಾರೆ,ನಮ್ಮ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಆರೋಪಿಸಿ ಪರಿಯಾಂಕಾ ಸುನೀಲ ಕುರುಣಕರ ಮತ್ತು ರೂಪೇಶ್ ಪಾಟೀಲ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಇನ್ನೊಂದು ಕಡೆ,ಸಿಪಿಐ ಕಲ್ಯಾಣಶೆಟ್ಟಿ ಅವರ ಅಳಿಯ ಅವರು ಪ್ರಿಯಾಂಕಾ ಸುನೀಲ ಕುರುಣಕರ ಮತ್ತು ರೂಪೇಶ್ ಪಾಟೀಲ್ ಅವರು ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ,ಕಾರನ್ನು ದ್ವಂಸ ಮಾಡಿದ್ದಾರೆ ಎಂದು ಆರೋಪಿಸಿ ಸುನೀಲ್ ಮತ್ತು ರೂಪೇಶ್ ವಿರುದ್ದ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಎರಡೂ ಪಾರ್ಟಿಗಳ ವಿರುದ್ಧ ಬೆಳಗಾವಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ತನಿಖೆ ಮುಂದುವರೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ