ಬೆಳಗಾವಿ- ಪ್ರತಿ ಹತ್ತು ವರ್ಷಕ್ಕೊಮ್ಮೆ ಬೆಳಗಾವಿ ಮಹಾನಗರದ ಹೊಸ ಸಿಡಿಪಿ,ಮಾಡುವದು ವಾಡಿಕೆ,ಹಳೆಯ ಸಿಡಿಪಿ ಅವಧಿ ಮಾರ್ಚ ತಿಂಗಳಿಗೆ ಮುಕ್ತಾಯ ವಾಗಲಿದ್ದು ಹೊಸ ಸಿಡಿಪಿ ಸಿದ್ಧಗೊಳಿಸಲು ಕೇಂದ್ರ ಸರ್ಕಾರ ಅಮೃತ ಯೋಜನೆಯ ಅಡಿಯಲ್ಲಿ ಫ್ರಾನ್ಸ್ ಮೂಲದ ಕಂಪನಿಗೆ ಗುತ್ತಿಗೆ ನೀಡಿದೆ.
ಬೆಳಗಾವಿ,ಹುಬ್ಬಳ್ಳಿ-ಧಾರವಾಡ,ಗದಗ ಮೂರು ಜಿಲ್ಲೆಗಳ ಹೊಸ ಸಿಡಿಪಿ,ಅಂದ್ರೆ ಕಾಂಪ್ರಯೇನ್ಸೀವ್ ಡೆವಲಪ್ಮೆಂಟ್ ಪ್ಲ್ಯಾನ್,ಕನ್ನಡದಲ್ಲಿ ಇದಕ್ಕೆ ಮಹಾ ಯೋಜನೆ ಅಂತಾ ಕರೀತಾರೆ,ಈ ಮೊದಲು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವೇ ಸಿಡಿಪಿ ಮಾಡುತ್ತಾ ಬಂದಿತ್ತು ಆದ್ರೆ ಈ ಬಾರಿ ಕೇಂದ್ರ ಸರ್ಕಾರ ಅಮೃತ ಯೋಜನೆ ಅಡಿಯಲ್ಲಿ ಫ್ರಾನ್ಸ್ ಮೂಲದ EGIS ಕಂಪನಿಗೆ ಗುತ್ತಿಗೆ ನೀಡಿದೆ.
ಆರು ತಿಂಗಳಲ್ಲಿ ಹೊಸ ಸಿಡಿಪಿ ರೆಡಿ ಮಾಡುವಂತೆ ಷರತ್ತು ವಿಧಿಸಿದ್ದು ಆರು ತಿಂಗಳ ನಂತರ ಬೆಳಗಾವಿ ಮಹಾನಗರಕ್ಕೆ ಹೊಸ ಸಿಡಿಪಿ ಅನ್ವಯವಾಗಲಿದೆ.
ಇದರ ಜೊತೆಗೆ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದ್ದು ಬೆಳಗಾವಿ ಬುಡಾ ವ್ಯಾಪ್ತಿಗೆ ಬೆಳಗಾವಿ ನಗರದ ಸುತ್ತಮುತ್ತಲಿನ,28 ಗ್ರಾಮಗಳನ್ನು ಸೇರ್ಪಡೆ ಮಾಡುವಂತೆ ಬುಡಾ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಸರ್ಕಾರ ಮಂಜೂರು ಮಾಡಿದ ನಂತರ ,28 ಹಳ್ಳಿಗಳು ಬುಡಾ ವ್ಯಾಪ್ತಿಗೆ ಸೇರಲಿದ್ದು ,ಹೊಸ ಸಿಡಿಪಿ ಯೋಜನೆಯಲ್ಲಿ 28 ಗ್ರಾಮಗಳು ಸೇರ್ಪಡೆ ಆಗುವದಿಲ್ಲ
.ಎಂದು ಬುಡಾ ಆಯುಕ್ತ ಪ್ರೀತಂ ನರಸಲಾಪೂರೆ,ತಿಳಿಸಿದ್ದಾರೆ.