Breaking News
Home / Breaking News / ಬೊಮ್ಮಾಯಿ ಸರ್ಕಾರ, ಭಾವಿ ಸಚಿವರ ಸಂಕಟ ವಿಸ್ತರಣೆ…!!!

ಬೊಮ್ಮಾಯಿ ಸರ್ಕಾರ, ಭಾವಿ ಸಚಿವರ ಸಂಕಟ ವಿಸ್ತರಣೆ…!!!

ಬೆಳಗಾವಿ- ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ಸಚಿವ ಸಂಪುಟ ವಿಸ್ತರಣೆ, ಅಥವಾ ಪುನಾರಚನೆ ಸರ್ಕಸ್ ನಡೆಯುತ್ತಲೇ ಇದೆ, ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಬಸವ ಜಯಂತಿ ಎಲ್ಲ ಮುಹೂರ್ತಗಳು ಕಳೆದರು ಸಚಿವ ಸಂಪುಟ ವಿಸ್ತರಣೆಯ ಮಹೂರ್ತ ಇನ್ನುವರೆಗೆ ನಿಗದಿ ಆಗದ ಹಿನ್ನಲೆಯಲ್ಲಿ, ಭಾವಿ ಸಚಿವರ ಸಂಕಟ ವಿಸ್ತರಣೆ, ಆಗುತ್ತಲೇ ಇದೆ. ಸಚಿವಾಕಾಂಕ್ಷಿಗಳಿಗೆ ನಾಳೆ ಬಾ ಎನ್ನುವ ರೀತಿ ಆಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಸುಪುತ್ರ ವಿಜಯೇಂದ್ರ, ಯೋಗೇಶ್ವರ್, ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಅಭಯ ಪಾಟೀಲ ಸೇರಿದಂತೆ ಹಲವರು ಮಂತ್ರಿ ಆಗ್ತಾರೆ ಎನ್ನುವ ಸುದ್ದಿ ರಾಜ್ಯದಲ್ಲಿ ಸಾಕಷ್ಟು ಪ್ರಚಾರ ಪಡೆದಿದೆ. ಆದ್ರೆ ಇವರು ಮಂತ್ರಿ ಆಗೋದು ಯಾವಾಗ ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆಯ ಕುರಿತು ಹತ್ತು ಹಲವು ಬಾರಿ ದೆಹಲಿಗೆ ಹೋಗಿ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮಾಡಿರುವದಾಗಿ ಹೇಳಿಕೊಂಡಿದ್ದಾರೆ. ಒಮ್ಮೆ ಪ್ರಧಾನಿ ಇಲ್ಲ, ಮತ್ತೊಮ್ಮೆ ನಡ್ಡಾ ಇಲ್ಲ ಅಂತ ಚರ್ಚೆ ನಡೆದಿಲ್ಲ. ಆದ್ರೆ ಇನ್ನುವರೆಗೆ ವಿಸ್ತರಣೆ ಅಥವಾ ಪುನಾರಚಣೆ ದಿನಾಂಕ ನಿಗದಿ ಆಗಿಲ್ಲ ಹೀಗಾಗಿ ಸಚಿವ ಆಕಾಂಕ್ಷಿಗಳ ಸಂಕಟ ಮಾತ್ರ ವಿಸ್ತರಣೆ ಆಗುತ್ತಲೇ ಇದೆ.

ರಾಜ್ಯದಲ್ಲಿ ಎಂಎಲ್ಸಿ ಇಲೆಕ್ಷನ್ ಘೋಷಣೆ ಆಗಿದೆ. ಈ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈಗ ಸದ್ಯ ಸಚಿವ ಸಂಪುಟ ವಿಸ್ತರಣೆ ಮಾಡಿದ್ರೆ ಕ್ರಾಸ್ ವೋಟೀಂಗ್ ಆಗಬಹುದು. ಸಚಿವ ಸ್ಥಾನ ಸಿಗದೇ ಇರುವ ಆಕಾಂಕ್ಷಿಗಳು ಅಡ್ಡ ಮತದಾನ ಮಾಡಿಸಬಹುದು. ಇದು ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣ ಆಗಬಹುದು ಎನ್ನುವ ಆತಂಕ ಬಿಜೆಪಿಗೆ ಎದುರಾಗಿದೆ ಎಂದು ಹೇಳಲಾಗಿದೆ. ಸಂಪುಟ ಸೇರ್ಪಡೆ ಆಸಕ್ತಿಯು ಶಾಸಕರಿಗೆ ಕಮ್ಮಿ ಆಗಿದೆ. ವಿಳಂಭ ಧೋರಣೆ ಮುಂದೆ ಮುಳುವಾಗೋ ಆತಂಕ ಸಹ ಎದುರಾಗಿದೆ

Check Also

ಬಾಸ್ ಬಂದು ಹೋದ ಮೇಲೆ ಅಜ್ಜಿಯ ಮನೆಗೆ ಬಂತು ಗ್ಯಾಸ್…!!

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್‌, ಗ್ಯಾಸ್‌ ನೀಡಿದ್ದಾರೆ. …

Leave a Reply

Your email address will not be published. Required fields are marked *