ಎಪ್ರೀಲ್ 13 ರಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಎಪ್ರೀಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 21 ನಾಮಪತ್ರಗಳ ಪರಶೀಲನೆ ಎಪ್ರೀಲ್ 24 ನಾಮಪತ್ರ ಹಿಂಪಡೆಯಲು ಕೊನೇಯ ದಿನಾಂಕ ಮೇ 10 ರಂದು ಮತದಾನ ಮೇ 13 ರಂದು ಮತ ಎಣಿಕೆ ದೆಹಲಿ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ …
Read More »ಎಲ್ಲರ ಚಿತ್ತ ಚುನಾವಣಾ ಆಯೋಗದ ಸುದ್ದಿಗೋಷ್ಠಿಯತ್ತ
ಬೆಳಗಾವಿ: ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಚುನಾವಣೆ ಘೋಷಣೆಯಾಗುವ ದಿನಾಂಕವನ್ನೇ ಜನ ಎದುರು ನೋಡುತ್ತಿದ್ದರು. ಇಂದು ಬೆಳಿಗ್ಗೆ 11.30ಕ್ಕೆ ಭಾರತ ಚುನಾವಣೆ ಆಯೋಗದ ಸುದ್ದಿಗೋಷ್ಠಿ ನಡೆಯಲಿದ್ದು, ಎಲ್ಲರ ಚಿತ್ತ ಅದರತ್ತ ನೆಟ್ಟಿದೆ. ಎಷ್ಟು ಹಂತದಲ್ಲಿ ಚುನಾವಣೆ ನಡೆಯುತ್ತದೆ? ಏನೇನು ಮಹತ್ವದ ಕ್ರಮ ಕೈಗೊಳ್ಳುತ್ತದೆ? ಮಾದರಿ ಚುನಾವಣೆ ನೀತಿಸಂಹಿತೆ ಯಾವಾಗಿನಿಂದ ಜಾರಿಯಾಗ್ತದೆ ಎಂಬುದು ಕುತೂಹಲ ಮೂಡಿಸಿದೆ.
Read More »ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಕಿಟ್ ಕೊಟ್ಟ ಸಿಎಂ!!
ಬೆಂಗಳೂರು, ): ಸಮಾಜ ಸುಧಾರಣೆಯಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪತ್ರಕರ್ತರ ವೃತ್ತಿಗೆ ಅನುಕೂಲವಾಗುವಂತಹ ಲ್ಯಾಪ್‌ಟಾಪ್, ಕ್ಯಾಮೆರಾ ಮತ್ತಿತರ ಅಗತ್ಯ ಸಲಕರಣೆಗಳನ್ನು ಸರಕಾರದ ವತಿಯಿಂದ ನೀಡಲಾಗಿದ್ದು, ಇವುಗಳನ್ನು ಬಳಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸೋಮವಾರ (ಮಾ.27) ನಡೆದ ಕಾರ್ಯಕ್ರಮದಲ್ಲಿ …
Read More »ಒಂದೇ ಕ್ಷೇತ್ರದಲ್ಲಿ 42 ಗಾರ್ಡನ್ ಗಳನ್ನು ನಿರ್ಮಿಸಿದ್ದು,ಎಲ್ಲಿ ಯಾರು ಗೊತ್ತಾ??
ಬೆಳಗಾವಿ- ಹೋಲ್ ಸೇಲ್ ವ್ಯಾಪಾರ,ಹೋಲ್ ಸೇಲ್ ಖರೀದಿ, ಯನ್ನು ನಾವು ನೋಡಿದ್ದೇವೆ.ಆದ್ರೆ ಹೋಲ್ ಸೇಲ್ ಡೆವಲಪ್ಮೆಂಟ್ ನೋಡಲು ನಮಗೆ ಶಾಸಕ ಅಭಯ ಪಾಟೀಲರ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಮಾತ್ರ ನೋಡಲು ಸಿಗುತ್ತದೆ.ಹೌದು ಇದು ಸತ್ಯ,ಯಾಕಂದ್ರೆ ಶಾಸಕ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಒಟ್ಟು 42 ಉದ್ಯಾನವನಗಳನ್ನು ನಿರ್ಮಿಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಬೆಳಗಾವಿ ದಕ್ಷಿಣತಕ್ಷೇತ್ರದ ಯಾವ ಭಾಗದಲ್ಲಿ ಗಾರ್ಡನ್ ಇಲ್ಲ,ಆ ಭಾಗವನ್ನು ಆಯ್ಕೆ ಮಾಡಿ ಅಲ್ಲಿ ಒಟ್ಟು …
Read More »ಎರಡೂವರೆ ಕೋಟಿಯಲ್ಲಿ ಮೂರು ಮೂರ್ತಿ,ಲೋಕೋಪಯೋಗಿ ಮಂತ್ರಿಗೆ ಕೀರ್ತಿ!!
ಬೆಳಗಾವಿ-ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿಮೆ ಪೊಲಿಟಿಕ್ಸ್ ಮುಂದುವರೆದಿದೆ.ಛತ್ರಪತಿ ಶಿವಾಜಿ, ವಿಶ್ವಜ್ಯೋತಿ ಬಸವೇಶ್ವರ, ಸಂಭಾಜೀ ಮಹಾರಾಜರ ಪುತ್ಥಳಿ ಆಯ್ತು,ಈಗ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಿದ್ದು ಲಬೆಳಗಾವಿಯ ಸುವರ್ಣಸೌಧ ಎದುರು ತಲೆ ಎತ್ತಿರುವ ಮೂವರು ಮಹನೀಯರ ಪುತ್ಥಳಿಗಳು ನಾಳೆ ಅನಾವರಣ ಮಾಡಲಾಗುತ್ತಿದೆ.ಮೂವರು ಮಹನೀಯರ ಪುತ್ಥಳಿಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ನಾಳೆ ಬೆಳಗ್ಗೆ 11 ಕ್ಕೆ ಬೆಳಗಾವಿಗೆ ಆಗಮಿಸಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ …
Read More »ಕಿತ್ತೂರು ಕ್ಷೇತ್ರದಿಂದ ಲಕ್ಷ್ಮೀ ಅಕ್ಕಾ ಇಲೆಕ್ಷನ್ ಗೆ ನಿಲ್ಲೋದು ಪಕ್ಕಾ!!
ಬೆಳಗಾವಿ-ಕಿತ್ತೂರು ಕಾಂಗ್ರೆಸ್‌ನಲ್ಲಿ ಬಂಡಾಯದ ಬಿರುಗಾಳಿ ಬೀಸುವ ಎಲ್ಲ ಲಕ್ಷಣಗಳು ಕಂಡು ಬಂದಿವೆ ಇನಾಮದಾರ್ ಕುಟುಂಬದ ಸೊಸೆ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ದೆ ಮಾಡುವ ಎಲ್ಲ ಸಾಧ್ಯತೆಗಳಿದ್ದು ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮೀ ವಿಕ್ರಂ ಇನಾಮದಾರ್ ಅವರನ್ನು ಚುನಾವಣೆಯ ಅಖಾಡಕ್ಕೆ ಇಳಿಸಲು ಇನಾಮದಾರ್ ಅಭಿಮಾನಿಗಳು ಎಲ್ಲ ಸಿದ್ಧತೆಗಳನ್ನು ನಡೆಸಿದ್ದಾರೆ. ಶುಕ್ರವಾರ ಕಿತ್ತೂರು ಕ್ಷೇತ್ರದ ನೇಗಿನಹಾಳದಲ್ಲಿರುವ ಡಿ.ಬಿ ಇನಾಮದಾರ್ ಮನೆಯಲ್ಲಿ ಅಭಿಮಾನಿಗಳು ಸಭೆ ಸೇರಿ ಈ ಸಭೆಯಲ್ಲಿ ಮಾತನಾಡಿದ ಇನಾಮದಾರ್ ಆಪ್ತ …
Read More »ಬೆಳಗಾವಿಯಲ್ಲಿ ಹೊಡೀ ಒಂಬತ್ತ್, ಇನ್ನೂ ಒಂಬತ್ತರಲ್ಲಿ ಆಮ್ಯಾಲ ಗಾಡೀ ಹತ್ತ್!!
ಬೆಳಗಾವಿ-2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ 5 ಜನ ಹಾಲಿ ಶಾಸಕರು, 3 ಜನ ಮಾಜಿ ಶಾಸಕರು, ಓರ್ವ ಹೊಸ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.ನಾಲ್ಕು- ಐದು ಜನರ ಆಕಾಂಕ್ಷಿ ಇರೋ ಕ್ಷೇತ್ರದ ರಿಸ್ಕ್ ತೆಗೆದುಕೊಳ್ಳದ ನಾಯಕರು ಕೇವಲ ಒಂಬತ್ತು ಕ್ಷೇತ್ರಗಳಲ್ಲಿ ಹೊಡೀ ಒಂಬತ್ತ್ ಇನ್ನುಳಿದ ಒಂಬತ್ತು ಕ್ಷೇತ್ರಗಳಲ್ಲಿ ಆಮ್ಯಾಲ ಗಾಡಿಹತ್ತ ಎನ್ನುವ ಪರಿಸ್ಥಿತಿ ಕಾಂಗ್ರೆಸ್ ನಲ್ಲಿದೆ. …
Read More »ಬೆಳಗಾವಿ: ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ತುಂಬಿದ್ರೆ ಹುಷಾರ್, ಕೇಸ್ ಹಾಕಲು ಡಿಸಿ ಆದೇಶ
ಗೂಡ್ಸ್ ವಾಹನದಲ್ಲಿ ಪ್ರಯಾಣ: ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ ಬೆಳಗಾವಿ:ಜಿಲ್ಲೆಯಲ್ಲಿ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯವುದು ಕಂಡುಬಂದರೆ ಅಂತಹ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದನ್ನು ಚುನಾವಣಾ ಆಯೋಗ ಕೂಡ ಗಂಭೀರವಾಗಿ ಪರಿಗಣಿಸಿದೆ. ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದನ್ನು ಮೋಟಾರು ವಾಹನ ಕಾಯ್ದೆ ಪ್ರಕಾರ ನಿಷೇಧಿಸಲಾಗಿರುತ್ತದೆ. ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇಂದಿನಿಂದ ಜಿಲ್ಲೆಯಾದ್ಯಂತ ತೀವ್ರ …
Read More »ಬೆಳಗಾವಿ ಗಡಿ ವಿವಾದ: ಮಹಾರಾಷ್ಟ್ರದ ಪರಿಷತ್ತಿನಲ್ಲಿ ಮತ್ತೆ ಕಿರಿಕ್!!
ಬೆಳಗಾವಿ- ಗಡಿ ವಿಚಾರದಲ್ಲಿ ನೆರೆಯ ಮಹಾರಾಷ್ಟ್ರ ಮತ್ತೇ ತನ್ನ ಹಳೇ ಚಾಳಿ ಮುಂದುವರೆಸಿದೆ. ತನ್ನ ಯೋಜನೆಯನ್ನು ಕರ್ನಾಟಕ ನೆಲದಲ್ಲಿ ಜಾರಿಗೊಳಿಸುವ ವಿವಾದಾತ್ಮಕ ನಿರ್ಧಾರ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿದೆ. ಮಹಾರಾಷ್ಟ್ರದ ಪ್ರಚೋದನಾತ್ಮಕ ನಿರ್ಣಯಕ್ಕೆ ಕರ್ನಾಟಕ ಸಿಎಂ ಕೂಡ ಆಕ್ರೋಶ ಹೊರಹಾಕಿದ್ರು. ಇದಕ್ಕೆ ಮಹಾರಾಷ್ಟ್ರ ಪರಿಷತ್ ಸದಸ್ಯೆ ಸಿಎಂ ಬೊಮ್ಮಾಯಿ ಹಾಗೂ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿದ್ದರೂ ಮಹಾರಾಷ್ಟ್ರ ನಾಯಕರು ಮಾತ್ರ ಗಡಿವಿವಾದ ಕೆಣಕುವ ಚಾಳಿ …
Read More »ಬ್ಯಾಂಕಿಂಗ್ ಮತ್ತು SSC ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಹೊಸ ಬ್ಯಾಚ್]
ಬೆಳಗಾವಿ-BPS (ಇನ್ಸ್ಟಿಟ್ಯೂಟ್ ಫಾರ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್) ತನ್ನ ವೇಳಾಪಟ್ಟಿ ಪ್ರಕಟಿಸಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRB) ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ (PSB) ನೇಮಕಾತಿ ಪ್ರಕ್ರಿಯೆ ಅಗಸ್ಟ 2023 ರಿಂದ ಪ್ರಾರಂಭವಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2023 ರಲ್ಲಿ ಬ್ಯಾಂಕ್ ಕ್ಲರ್ಕ್ ಮತ್ತು ಬ್ಯಾಂಕ್ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಿದೆ. ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2023 ರಲ್ಲಿ …
Read More »