Breaking News

LOCAL NEWS

ವಸತಿ ಶಾಲೆಯ ಅಡುಗೆ ಕೋಣೆಯಲ್ಲಿ, ಸಿಲೆಂಡರ್ ಸ್ಪೋಟ ತಪ್ಪಿದ ಅನಾಹುತ….!!.

ಶಾಲೆಯಲ್ಲಿ ಸಿಲಿಂಡರ್ ಸ್ಫೋಟ: ಧಾನ್ಯ, ಸಾಮಗ್ರಿ ಭಸ್ಮ : ನಗರದಲ್ಲಿ ಘಟನೆ ಗೋಕಾಕ ಸೆ 26 : ಇಲ್ಲಿನ ವಿವೇಕಾನಂದ ನಗರದಲ್ಲಿ ತಾಲೂಕಿನ ಗೋಡಚಿನಮಲ್ಕಿ ಗ್ರಾಮದದಿಂದ ಸ್ಥಳಾಂತರಗೊಂಡಿರುವ ಡಾ..ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸೋಮವಾರದಂದು ಬಿಸಿಯೂಟ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ಸ್ಫೋಟವಾಗಿ ಕೋಣೆಯ ಬಾಗಿಲು ಸುಟ್ಟು ಹೋಗಿದ್ದು,ಒಳಗೆ ಇರುವ ಬಿಸಿಯೂಟದ ಆಹಾರ ಧಾನ್ಯ ಮುಂತಾದ ಪರಿಕರಗಳಿಗೆ ಸುಟ್ಟಿವೆ. ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ನಿಂದ ಭಾರಿ ಶಬ್ದ ಬಂದಾಗ ಅಡುಗೆಯವರು …

Read More »

ಚೋರ್ಲಾ ಘಾಟ್ ಮೂಲಕ ಗೋವಾ ರಾಜ್ಯಕ್ಕೆ ತೆರಳುವ ಲಾರಿಗಳಿಗೆ ತಡೆ

ಬೆಳಗಾವಿ- ಬೆಳಗಾವಿಯ ತರಕಾರಿ ಬೇಡ ಎಂದು ಗೋವಾ ಸಿಎಂ ಹೇಳಿಕೆ ನೀಡಿದ ಬೆನ್ನಲ್ಲಿಯೇ ಗೋವಾ ಸರ್ಕಾರ ಈಗ ಮತ್ತೊಂದು ಕಿರಿಕ್ ಮಾಡಿದೆ.ಭಾರಿ ವಾಹನ ಪ್ರವೇಶಕ್ಕೆ ಗೋವಾ ಸರ್ಕಾರ ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಚೋರ್ಲಾ ಘಾಟ್ ಮೂಲಕ ಗೋವಾ ರಾಜ್ಯಕ್ಕೆ ತೆರಳುವ ಲಾರಿಗಳಿಗೆ ತಡೆಯಲಾಗಿದೆ. ಭಾರಿ ಲಾರಿಗಳಿಂದ ಸಂಚಾರ ದಟ್ಟಣೆ ಆಗುತ್ತೆ ಎಂದು ಗೋವಾ ರಾಜ್ಯದಲ್ಲಿ ಭಾರಿ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ.ಉತ್ತರ ಗೋವಾ ಟ್ರಾಫಿಕ್ ಎಸ್‌ಪಿ ಮನವಿ ಮೇರೆಗೆ‌ ಉತ್ತರ …

Read More »

VTU ಉಪ ಕುಲಪತಿ ಸ್ಥಾನಕ್ಕೆ ಮೂರು ಜನ ಆಯ್ಕೆ….

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದ ಉಪ ಕುಲಪತಿ ಸ್ಥಾನಕ್ಕೆ ಸರ್ಚ್ ಕಮೀಟಿ ಒಟ್ಟು ಮೂರು ಜನರನ್ನು ಅರ್ಹಗೊಳಿಸಿದೆ. NIT goa ಡೈರೆಕ್ಟರ್ ಗೋಪಾಲ ಮುರುಗರೆ,ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಉಪ ಕುಲಪತಿ ವಿದ್ಯಾಶಂಕರ,ಬೆಳಗಾವಿಯ ವಿಟಿಯ ರಜಿಸ್ಟ್ರಾರ್ ಆನಂದ ದೇಶಪಾಂಡೆ ಅವರನ್ನು ಸರ್ಚ್ ಕಮೀಟಿ ಆಯ್ಕೆ ಮಾಡಿದ್ದು ಮೂವರಲ್ಲಿ ಒಬ್ಬರು ನಾಳೆ ಅಥವಾ ನಾಡಿದ್ದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಆನಂದ ದೇಶಪಾಂಡೆ ಹಾಗೂ ವಿದ್ಯಾಶಂಕರ ನಡುವೆ ಪೈಪೋಟಿ …

Read More »

ಬೆಳಗಾವಿ ಜಿಲ್ಲೆಗೆ ರಾಷ್ಟ್ರದಲ್ಲೇ 10ನೇ ರ್ಯಾಂಕ್…!!

ಸೆ.26 ರಂದು ನವದೆಹಲಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲರಿಗೆ ಗೌರವ ಪ್ರದಾನ ಬೆಳಗಾವಿ, -ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿ‌ಯಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆಯು ದೇಶದಲ್ಲಿಯೇ ಹತ್ತನೇ ರ್ಯಾಂಕ್ ಗಳಿಸಿದೆ. ಕೇಂದ್ರ ಸರಕಾರದ ವತಿಯಿಂದ ಏಪ್ರಿಲ್ 12, 2022 ರಿಂದ ಹಮ್ಮಿಕೊಳ್ಳಲಾಗಿದ್ದ ಆಝಾದಿಸೇ ಅಂತ್ಯೋದಯ ತಕ್ (ಎ.ಎಸ್.ಎ.ಟಿ) ಅಭಿಯಾನವು 15ನೇ ಆಗಸ್ಟ್ 2022 ರಂದು ಮುಕ್ತಾಯಗೊಂಡಿತ್ತು. ಈ ಅಭಿಯಾನದಲ್ಲಿ ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 75 ಜಿಲ್ಲೆಗಳು …

Read More »

ಬೆಳಗಾವಿಯಲ್ಲಿ ಒಂದೇ ದಿನ ಇಬ್ಬರು,ಧರ್ಮಗುರುಗಳ ಜಯಂತಿ…..!!!

ಬೆಳಗಾವಿ: ಗಣೇಶೋತ್ಸವ ಹಬ್ಬವನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ಸೈ ಎನಿಸಿಕೊಂಡಿದ್ದ ಬೆಳಗಾವಿ ಪೊಲೀಸರಿಗೆ ಈಗ ಮತ್ತೊಂದು ಸವಾಲು ಎದುರಾಗಿದೆ. ಎರಡು ಹಬ್ಬಗಳು ಒಂದೇ ದಿನ ಬಂದಿದ್ದು, ಅದು ಮುಸ್ಲಿಂ ಹಾಗೂ ಹಿಂದುಗಳ ಆಚರಣೆ ಒಂದೇ ದಿನ ಇರುವುದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಹೌದು, ಅಕ್ಟೋಬರ್ 9 ಮಹತ್ವದ ದಿನವಾಗಿದ್ದು, ಈ ಬಾರಿ ಮುಸ್ಲಿಮರ ಪವಿತ್ರ ಹಬ್ಬ ಈದ್ …

Read More »

ಬೆಳಗಾವಿಯಲ್ಲಿ ಜಾನುವಾರಗಳಿಗೆ ರೋಗ ಬಂದಿದೆ ಹುಷಾರ್…!!!

*ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ: ಎಚ್ಚರಿಕೆ ವಹಿಸಲು ಪಶುಪಾಲನಾ ಇಲಾಖೆ ಸಲಹೆ* ಬೆಳಗಾವಿ,  ಜಿಲ್ಲೆಯ ಬೆಳಗಾವಿ ತಾಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಲಂಪಿ ಸ್ಕನ್ ಡಿಸೀಜ್)ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ(ಸೊಳ್ಳೆ,ನೊಣ,ಉಣ್ಣೆ ಇತ್ತಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ …

Read More »

ಬೆಳಗಾವಿಯಲ್ಲಿ ಖತರ್ನಾಕ್ ಆ್ಯಕ್ಸಿಡೆಂಟ್ ನಾಲ್ವರು ಸಾವು….

ಬೆಳಗಾವಿ- ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಲ್ಲಿ ಭೀಕರ ಅಪಘಾತ ಸಂಬವಿಸಿದೆ, ಲಾರಿ ಕಾರಿಗೆ ಡಿಕ್ಕಿ ಹೊಡೆದು ಕಾರು,ಬೈಕ್ ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿ,ಈ ಅಪಘಾತದಲ್ಲಿ ಒಟ್ಟು ನಾಲ್ಕು ಜನರು ಸಾವನ್ನೊಪ್ಪಿದ್ದಾರೆ‌‌. ಸವದತ್ತಿ ತಾಲ್ಲೂಕಿನ ಭೂದಿಗೊಪ್ಪ ಕ್ರಾಸ್ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಮೂರು ಜನ ಸದಥಳದಲ್ಲೇ ಮೃತಪಟ್ಟಿದ್ದು ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬೂದಿಗೊಪ್ಪ ಕ್ರಾಸ್ ಬಳಿ ಸರಣಿ ಅಪಘಾತದಲ್ಲಿ,ಸ್ವಿಫ್ಟ್ ಡಿಸೈರ್ ಕಾರು ಚಾಲಕ ನಿಖಿಲ್ ಕದಂ (24), …

Read More »

ಹಿತ್ತಲದಾಗ ಬಾವಿಗೆ ಬಿದ್ದು ಸತ್ತು, ಮೂರು ದಿನವಾದರೂ ಗೊತ್ತಾಗಿರಲಿಲ್ಲ…!!!

ಬೆಳಗಾವಿ – ಮನೆಯ ಹಿತ್ತಲಲ್ಲಿದ್ದ ಬಾವಿಯಿಂದ ನೀರು ತೆಗೆಯಲು ಹೋಗಿ,ಕಾಲು ಜಾರಿ ಬಾವಿಗೆ ಬಿದ್ದು ಆತ ಸಾವನ್ನೊಪ್ಪಿ ಮೂರು ದಿನ ಕಳೆದರೂ ಮನೆಯವರಿಗೆ ಈ ವಿಚಾರ ಗೊತ್ತಾಗಿರಲಿಲ್ಲ. ಬೆಳಗಾವಿ ನಗರದ ಪಾಂಗುಳ ಗಲ್ಲಿಯ ನಿವಾಸಿ ಸಂಜಯ ಪಾಟೀಲ 42 ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.ಮೃತ ಸಂಜಯ ಪಾಟೀಲ ವಿಪರೀತವಾಗಿ ಕುಡಿಯುತ್ತಿದ್ದ,ಆಗಾಗ್ಗೆ ಕುಡಿದು ಎರಡು,ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಮನೆಯವರು ಕಾಯಿಪಲ್ಲೆ ಮಾರಾಟ ಮಾಡಲು ಬೆಳಿಗ್ಗೆ ಹೋದ್ರೆ ಸಂಜೆ ಬರುತ್ತಾರೆ ಹೀಗಾಗಿ ಮನೆಯ …

Read More »

ನಾಲ್ಕು ಜನ ಜಾರಕಿಹೊಳಿ ಬ್ರದರ್ಸ್ ಒಂದೇ ಎಂದು ಕನಫ್ಯುಸ್ ಮಾಡ್ಕೋಬೇಡಿ- ಸತೀಶ್

ಬೆಳಗಾವಿ ಜಿಲ್ಲೆಗೆ ಕಾಲಿಟ್ಟ ಬೆಳಗೋ ಬೇಕರಿ…!! ಬೇಕರಿ ಪ್ರೋಡಕ್ಟ್ ಗಳನ್ನು ಮಾರಾಟ ಮಾಡಲು ಬೆಳಗಾವಿ ಜಿಲ್ಲೆಯಲ್ಲಿ ಡಿಸ್ಟಿಬ್ಯಟರ್ ಗಳು ಬೇಕಾಗಿದ್ದಾರೆ. ಸಂಪರ್ಕಿಸಿ..9538876488 ಬೆಳಗಾವಿ-ಜಾರಕಿಹೊಳಿ ಬ್ರದರ್ಸ್ ಗೆ ಸರ್ಕಾರ ಬೀಳಿಸುವ ಶಕ್ತಿ ಇದೆ ಎಂದು ಜನ ಹೇಳ್ತಾರೆ,ಆದ್ರೆ ನಾಲ್ಕೂ ಜನಕ್ಕೆ ಬೇರೆ,ಬೇರೆ ರೀತಿಯ ಶಕ್ತಿ ಇದೆ,ಆದ್ರೆ ಸರ್ಕಾರ ಬೀಳಿಸುವ ಶಕ್ತಿ ಕೇವಲ ರಮೇಶ್ ಜಾರಕಿಹೊಳಿ ಅವರಿಗೆ ಮಾತ್ರ ಇದೆ,ಎಂದು ಸತೀಶ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿ ಅವರ ಕಾಲೆಳೆದಿದ್ದಾರೆ. ಗೋಕಾಕ್ ನಗರದಲ್ಲಿ …

Read More »

ಬೆಳಗಾವಿಯ ಚನ್ನಮ್ಮ ವಿವಿ ವಿರುದ್ಧ ಯುದ್ಧ ಸಾರಿದ ವಿಧ್ಯಾರ್ಥಿಗಳು….!!

ಬೆಳಗಾವಿ-ಬೆಳಗಾವಿಯ ಚನ್ನಮ್ಮ ವಿಶ್ವ ವಿದ್ಯಾಲಯ ವಿರುದ್ಧ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ನಡೆಸುತ್ತಿದ್ದಾರೆ.ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು ಚನ್ನಮ್ಮ ವಿಶ್ವವಿದ್ಯಾಲಯದ ವಿರುದ್ಧ ಯುದ್ಧ ಸಾರಿದ್ದಾರೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಧ್ಯಾರ್ಥಿಗಳ ಆಂದೋಲನದ ಶುರುವಾಗಿದೆ.ವಿಶ್ವವಿದ್ಯಾಲಯ ಮುಂಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ಕಡಿಮೆ ಶಿಷ್ಯವೇತನ ಮಂಜೂರಾಗಿದೆ.ಮಂಜೂರಾದ ಮೊತ್ತದಲ್ಲಿ ನೀಡಿದ ಮೊತ್ತಕ್ಕಿಂತ ಕಡಿಮೆ ಶಿಷ್ಯವೇತನ …

Read More »