Breaking News

LOCAL NEWS

ಚುನಾವಣಾ ವೇಳಾಪಟ್ಟಿ ಪ್ರಕಟ,ಇಂದಿನಿಂದ ನೀತಿಸಂಹಿತೆ ಜಾರಿ…

ಬೆಳಗಾವಿ-ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರಗಳ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬಂದಿರುತ್ತದೆ. ಎಲ್ಲ ರಾಜಕೀಯ ಪಕ್ಷಗಳು ಮಾದರಿ ನೀತಿಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಮೇ 12) ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದ ಹೊಸ ಯೋಜನೆ/ಕಾರ್ಯಕ್ರಮ ಗಳನ್ನು ಘೋಷಿಸುವಂತಿಲ್ಲ. ಪ್ರಚಾರ ಕೂಡ ಕೋವಿಡ್ ಮಾರ್ಗಸೂಚಿ ಪ್ರಕಾರ ನಡೆಸಬೇಕಾಗುತ್ತದೆ. ಈ …

Read More »

ಬೆಳಗಾವಿಯಲ್ಲಿ ಆಪರೇಷನ್ ಡಾಗ್ ಸಕ್ಸೆಸ್…!!

ಬೆಳಗಾವಿ: ಮಕ್ಕಳ ಕಲ್ಲೇಟಿಗೆ ಆಯತಪ್ಪಿ ಬಾವಿಗೆ ಬಿದ್ದ ಬೀದಿ ನಾಯಿಯನ್ನು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ. ಎಸ್‌ಡಿ‌ಆರ್‌ಎಫ್ ಸಿಬ್ಬಂದಿ ಬಾವಿಗೆ ಬಿದ್ದ ನಾಯಿಯನ್ನು ಹೊರತೆಗೆದಿದ್ದಾರೆ. ಬೆಳಗಾವಿಯ ಕಚೇರಿ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಎಸ್‌ಡಿಆರ್‌ಎಫ್ ಆಪರೇಷನ್ ಡಾಗ್ ಕಾರ್ಯಾಚರಣೆ ಯಶಸ್ವಿಯಾಗಿಷೆ. ರಕ್ಷಣಾ ಕಾರ್ಯಾಚರಣೆ ವೇಳೆ ನಾಯಿ ಕಚ್ಚಿದರೂ ಛಲಬಿಡದೇ ರಕ್ಷಣೆ ಮಾಡಲಾಗಿದೆ. ಬೀದಿನಾಯಿ ರಕ್ಷಣಾ ಕಾರ್ಯಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೊಂಟಕ್ಕೆ ಹಗ್ಗ …

Read More »

ರಮ್ಯಾಗೆ ಪ್ರಶ್ನೆ ಮಾಡಿದ ಲಕ್ಷ್ಮೀ ಹೆಬ್ಬಾಳಕರ ಸಹೋದರ

ಬೆಳಗಾವಿ-ಅಶ್ವತ್ಥ್ ನಾರಾಯಣ್ – ಎಂ.ಬಿ.ಪಾಟೀಲ್ ಭೇಟಿ ಬಗ್ಗೆ ಡಿಕೆಶಿ ಹೇಳಿಕೆಗೆ ರಮ್ಯಾ ಪ್ರತಿಕ್ರಿಯೆ ವಿಚಾರವಾಗಿ,ಮಾಜಿ ಸಂಸದೆ ರಮ್ಯಾ ವಿರುದ್ಧ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕ ಅನುಪಸ್ಥಿತಿಯಲ್ಲಿ ಬೆಳಗಾವಿಯಲ್ಲಿ ಜನ್ಮ ದಿನ ಆಚರಿಸಿ,ಅಭಿಮಾನಿಗಳಿಗೆ,ಸಸಿ,ವಿಧ್ಯಾರ್ಥಿಗಳಿಗೆ ಬುಕ್,ಬ್ಯಾಗ್ ಹಂಚಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ,ರಮ್ಯಾ ಅವರು ಬಹಳ ದಿನಗಳಿಂದ ರಾಜಕಾರಣದಿಂದ ದೂರ ಉಳಿದವರು,ಈಗ ಮತ್ತೆ ಏಕಾಏಕಿ ಬಂದು ಅವರೇಕೆ ಸ್ಟೇಟ್‌ಮೆಂಟ್ ಕೊಡಬೇಕು? …

Read More »

ಚಂಡಮಾರುತ, ಇನ್ನೆಷ್ಟು ದಿನ ಮಳೆ..? ಹವಾಮಾನ ವರದಿ ಇಲ್ಲಿದೆ ನೋಡಿ…..

ಬೆಳಗಾವಿ-ಬಂಗಾಳಕೊಳ್ಳಿಯಲ್ಲಿ ಉಂಟಾಗಿರುವ ಅಸಾನಿ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮೇ 24 ರವರೆಗೂ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ವರದಿ ನೀಡಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿಯೂ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.ಕೆಲವಡೆ ಮೋಡ ಕವಿದ ವಾತಾವರಣ ಇದೆ.ಇನ್ನೆರಡು ದಿನ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಿದ್ದು,ಮೇ 24 ರವರೆಗೂ ಮಳೆಯ ಕಾಟ ಮುಂದು ವರೆಯಲಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

Read More »

ಎಂಇಎಸ್ ಜೊತೆ ಶರದ್ ಪವಾರ್ ಆಪ್ತ,ಆಪ್ತ ಸಭೆ ಮಾಡಿದ್ರು ಗುಪ್ತ ಗುಪ್ತ…!!

ಗಡಿವಿವಾದದ ಬಗ್ಗೆ ಮಾತನಾಡಲಿಲ್ಲ ಎಂಇಎಸ್ ನಾಯಕರ ಜೊತೆ ಸಭೆ ಮಾಡುವದನ್ನು ಬಿಡಲಿಲ್ಲ… ಬೆಳಗಾವಿ- ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ ಪವಾರ್ ಅವರು ಎರಡು ದಿನ ಬೆಳಗಾವಿ ಜಿಲ್ಲೆ ಮತ್ತು ಮಹಾನಗರದಲ್ಲಿ ನಡೆದ ವಿವಿದ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಆದ್ರೆ ಎಲ್ಲಿಯೂ ಬೆಳಗಾವಿ ಗಡಿವಿವಾದದ ಕುರಿತು ಅವರು ಮಾತನಾಡಲಿಲ್ಲ ಆದ್ರೆ ನಾಡದ್ರೋಹಿ ಎಂಇಎಸ್ ನಾಯಕರ ಜೊತೆ ಗುಪ್ತವಾಗಿ ಸಭೆ ಮಾಡುವದನ್ನು ಶರದ್ ಪವಾರ್ ಮರೆಯಲಿಲ್ಲ. ಕಾರ್ಯಕ್ರಮದಲ್ಲಿ ಗಡಿ ವಿವಾದದ ಕುರಿತು ಮಾತನಾಡಿದ್ರೆ, …

Read More »

ಬೆಳಗಾವಿ ಜಿಲ್ಲೆಯಲ್ಲಿ ಯಾರು ? ಎಷ್ಟು..? ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ ಗೊತ್ತಾ…???

*ಬೆಳಗಾವಿ ಜಿಲ್ಲೆಯ 21 ಸಕ್ಕರೆ ಕಾರ್ಖಾನೆಗಳಿಂದ ಒಟ್ಟು 889.61 ಕೋಟಿ ಕಬ್ಬಿನ ಬಿಲ್ ಬಾಕಿ* *(2021-22 ನೇ ಸಾಲಿನ ಮಾರ್ಚ್ 15ರವರೆಗೆ ಕಬ್ಬಿನ ಬಿಲ್ ಬಾಕಿ ಇರುವ ವಿವರ)* 1. ಅರಿಹಂತ ಶುಗರ್ಸ್ – ಉತ್ತಮ್ ಪಾಟೀಲ್ – 18.60 ಕೋಟಿ 2. ಅಥಣಿ ಶುಗರ್ಸ್ – ಮಾಜಿ ಸಚಿವ ಶ್ರೀಮಂತ ಪಾಟೀಲ್ – 62.61 ಕೋಟಿ 3. ಬೆಳಗಾಮ್ ಶುಗರ್ಸ್ – ಸತೀಶ್ ಜಾರಕಿಹೊಳಿ – 23.60 ಕೋಟಿ …

Read More »

ರಾಜ್ಯಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬೆಳಗಾವಿಯ ಹುಡುಗ…

ದೆಹಲಿಯಲ್ಲಿ ದಿನಾಂಕ 10/05/2022 ರಿಂದ ಪ್ರಾರಂಭವಾಗಿರುವ ಐಪಿಎಲ್ ಮಾದರಿಯ ರಾಷ್ಟ್ರಮಟ್ಟದ ಮೂರನೇ ಆವೃತ್ತಿಯ *”ಡೆಫ್ ಪ್ರೀಮಿಯರ್ ಲೀಗ್-2022″* ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಚೆನ್ನೈ ಬ್ಲಾಸ್ಟರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬೆಳಗಾವಿ ಜಿಲ್ಲೆಯ ಮದವಾಲ್ ಗ್ರಾಮದ ಯುವ ಪ್ರತಿಭೆ *ನಾಗರಾಜ ಅನಿಲ್ ನಿರವಾಣಿ* ಅವರು ನಮ್ಮ ಜಿಲ್ಲೆಯ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದು ನಾವೆಲ್ಲ ಹೆಮ್ಮೆ ಪಡುವ ವಿಷಯವಾಗಿದೆ. ಬಾಲ್ಯದಿಂದಲೂ ಕಿವುಡತನವಿದ್ದರೂ ಆ ನ್ಯೂನತೆಯನ್ನು ತನ್ನ ಅಗಾಧವಾದ ಶಕ್ತಿಯನ್ನಾಗಿ ಪರಿವರ್ತಿಸಿ ಸಾಧನೆಗಳ ಶಿಖರವೇರಿರುವ ಇವರು ನಡೆದುಬಂದ …

Read More »

ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳು….

ಬೆಳಗಾವಿ-ಹಿಜಾಬ್ ಆಯ್ತು,ದೇವಾಲಯಗಳ ಆವರಣದಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ಬಹಿಷ್ಕಾರ,ಹಾಕಿದ್ದಾಯ್ತು, ಆಜಾನ್ ವಿರುದ್ದ ಭಜನೆ ಮಾಡಿದ ಬಳಿಕ ಈಗ ಹೊಸ ವರಸೆ ಶುರುವಾಗಿದೆ. ಗೋಕಾಕ್ ತಾಲ್ಲೂಕಿನ ಪುಟ್ಟ ಹಳ್ಳಿಯೊಂದರಲ್ಲಿ ಮಸೀದಿಯ ಮೇಲೆ ಬೆಳಗಿನ ಜಾವ ಕೇಸರಿ ಧ್ವಜ ಹಾರಿಸುವ ಕೃತ್ಯವೂ ಈಗ ನಡೆದಿದೆ. ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಘಟನೆ ಅರಭಾವಿ ಸಮೀಪದ ಸತ್ತಿಗೇರಿ ಮಡ್ಡಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ ಸಮೀಪದ ಸತ್ತಿಗೇರಿ ಮಡ್ಡಿ ಗ್ರಾಮ ಇದಾಗಿದ್ದುಮುಂಜಾನೆ ನಮಾಜಗೆ ಬಂದ …

Read More »

ಶರದ ಪವಾರ್, ಎದುರು ಎಂಇಎಸ್ ಪುಂಡರ ಪುಂಡಾಟಿಕೆ….

ಬೆಳಗಾವಿ- ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಎದುರೇ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಮರಾಠಾ ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ,ಶರದ್ ಪವಾರ್ ಭಾಷಣ ಶುರುವಾಗುತ್ತಿದ್ದಂತೆ ಎಂಇಎಸ್ ಪುಂಡರು ನಾಡದ್ರೋಹ ಘೋಷಣೆ ಕೂಗಿದ್ದಾರೆ.ಮರಾಠ ಕೋ ಆಪರೇಟಿವ್ ಬ್ಯಾಂಕ್ ಅಮೃತ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಶರದ್ ಪವಾರ್, ಎಂಇಎಸ್ ಪುಂಡರ ಪೂರ್ವನಿಯೋಜಿತ ಘೋಷಣೆಗಳಿಂದ ತಬ್ಬಿಬ್ಬಾದರು. ಶರದ್ ಪವಾರ್‌ …

Read More »

ದ್ವನಿವರ್ದಕಗಳ ನಿಯಂತ್ರಣದ ಕುರಿತು ಸಿಎಂ ನೇತ್ರತ್ವದಲ್ಲಿ ಉನ್ನತ ಮಟ್ಟದ ಸಭೆ…

ಬೆಂಗಳೂರು: ಸುಪ್ರೀಂಕೋರ್ಟ್‌ ಆದೇಶದಂತೆ ರಾಜ್ಯದಲ್ಲಿ ಧ್ವನಿವರ್ಧಕಗಳ ಬಳಕೆ ನಿಯಂತ್ರಿಸಲು ಹೊಸ ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲಿ ಪರಿಷ್ಕೃತ ಆದೇಶ ಹೊರಬೀಳಲಿದ್ದು, ಆ ಬಳಿಕ ನಿಗದಿತ ಮಿತಿಗಿಂತ ಹೆಚ್ಚಿನ ಧ್ವನಿ ಹೊರಡಿಸುವ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ. ಮಸೀದಿಗಳಲ್ಲಿ ಆಜಾನ್‌ ಕೂಗುವ ಧ್ವನಿವರ್ಧಕಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಸೇರಿದಂತೆ ಹಿಂದುತ್ವ ಪರ ಸಂಘಟನೆಗಳು ಅಭಿಯಾನ ನಡೆಸಲು ಮುಂದಾಗಿವೆ. ಆಜಾನ್‌ಗೆ ಪ್ರತಿಯಾಗಿ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್‌ ಚಾಲೀಸಾ …

Read More »