ಅಭ್ಯರ್ಥಿಗಳು 10 ನಾಮಪತ್ರಗಳು 19…. ಬೆಳಗಾವಿ- ಸ್ಥಳೀಯ ಸಂಘ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಎರಡು ಸ್ಥಾನಗಳಿಗೆ ನಡೆಯುವ ಚುನಾವಣೆಯ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯವಾಗಿದ್ದು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 10 ಜನ ಅಭ್ಯರ್ಥಿಗಳು ಒಟ್ಟು 19 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರು 3,ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ 4, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ 4, ಪಕ್ಷೇತರ …
Read More »ನಾಳೆ ಮಂಗಳವಾರ,ಲಖನ್, ಚನ್ನರಾಜ್ ಕವಟಗಿಮಠ ಅವರಿಂದ ನಾಮಪತ್ರ…!!!
ನಾಳೆ ಮಂಗಳವಾರ ಮೂವರು ದಿಗ್ಗಜರಿಂದ ನಾಮಪತ್ರ ಸಲ್ಲಿಕೆ… ಬೆಳಗಾವಿ-ನಾಳೆ ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಈ ದಿನ ಬೆಳಗಾವಿ ಜಿಲ್ಲೆಯ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಲಖನ್ ಜಾರಕಿಹೊಳಿ ಅವರು ಸಾವಿರಾರು ಪಂಚಾಯತಿ ಸದಸ್ಯರನ್ನು ಬೆಳಗಾವಿಯಲ್ಲಿ ಸಮಾವೇಶಗೊಳಿಸಲಿದ್ದು ಸರ್ದಾರ್ ಮೈದಾನದಿಂದ ಸಾವಿರಾರು ಸಪೋಟರ್ಸ್ ಜೊತೆಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಮತ್ತು ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರು ನಾಳೆ ಮಂಗಳವಾರವೇ ನಾಮಪತ್ರ ಸಲ್ಲಿಸಲಿದ್ದಾರೆ. …
Read More »ನೇಕಾರ ಕುಟುಂಬಗಳಿಗೆ ಸಾಂತ್ವನ ಹೇಳಿದ ಸಾಹುಕಾರ್…
ವಡಗಾಂವ ನೇಕಾರ ಸಮಾಜದ ಮೂವರು ಆತ್ಮಹತ್ಯೆ: ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಳಗಾವಿ ದಕ್ಷಿಣ ಮತಕೇತ್ರದ ಜನರ ಸಮಸ್ಯೆ ಆಲಿಸಿದ ಸತೀಶ ಜಾರಕಿಹೊಳಿ, ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸುವುದಾಗಿ ಭರವಸೆ ..! ಬೆಳಗಾವಿ: ಸಾಲದ ಬಾದೆ ತಾಳಲಾದರೆ ಆತ್ಮಹತ್ಯೆಗೆ ಶರಣಾದ ದಕ್ಷಿಣ ಮತಕ್ಷೇತ್ರದ ವಡಗಾಂವ ನೇಕಾರ ಸಮಾಜ ಮೂವರು ಮೃತ ಕುಟುಂಬಸ್ಥರ ಮನೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ, …
Read More »ಚಿಕ್ಕೋಡಿಯಲ್ಲಿ ಘರ್ಜಿಸಿದ ರಾಜಾಹುಲಿ…
ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ನಿಶ್ಚಿತವಾಗಿ ಬಹುಮತ ಸಿಗಲಿದೆ: ಬಿಎಸ್ವೈ ಚಿಕ್ಕೋಡಿ:ರಾಜ್ಯದ 20ಸ್ಥಾನಗಳ ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಕನಿಷ್ಠ 17ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಹೇಳಿದರು. ಚಿಕ್ಕೋಡಿ ಪಟ್ಟಣದ ಮಹಾಂತೇಶ ಕವಟಗಿಮಠ ಫಾರ್ಮ್ ಹೌಸ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ವೈ, ವಿಧಾನ ಪರಿಷತ್ 25 ಕ್ಷೇತ್ರಗಳ ಪೈಕಿ 20ರಲ್ಲಿ ಮಾತ್ರ ಬಿಜೆಪಿ ಪಕ್ಷ ಸ್ಪರ್ಧೆ ಮಾಡಿದೆ.ಅಭ್ಯರ್ಥಿಗಳ ಘೋಷಣೆ ಮಾಡುವ ಮುನ್ನವೇ ರಾಜ್ಯದಲ್ಲಿ ಪ್ರಚಾರ ಪಕ್ಷದಿಂದ …
Read More »ರಮೇಶ್ ಜಾರಕಿಹೊಳಿ ಅವರಿಂದ ಭರ್ಜರಿ ಬೇಟೆ….!!!
ಬಿಜೆಪಿ ತೆಕ್ಕೆಗೆ ವಿವೇಕರಾವ್ ಪಾಟೀಲ…. ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ವಿಧಾನ ಪರಿಷತ್ತಿನ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಈ ವಿಚಾರವಾಗಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾಜಿ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು.ವಿವೇಕರಾವ್ ಪಾಟೀಲ ಶೀಘ್ರದಲ್ಲೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ವಿವೇಕರಾವ್ ಪಾಟೀಲ ಅವರನ್ನು ಭೇಟಿಯಾಗಿ ಸುಧೀರ್ಘ ಸಮಾಲೋಚನೆ ನಡೆಸಿದ ರಮೇಶ್ ಜಾರಕಿಹೊಳಿ …
Read More »ಪಾರ್ಟಿ ಯಾರ ನೋಡ್ತಾರ್ರೀ…ಇಲ್ಲೇನಿದ್ರೂ ಪ್ಯಾಕೇಟ್ ಜೊತೆಗೆ ಪ್ಯಾಕೇಜ್…..!!!
ಬೆಳಗಾವಿ- ಸ್ಥಳೀಯ ಸಂಘ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಎರಡು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿ ಈಗಾಗಲೇ ಎರಡು ದಿನ ಕಳೆದರೂ ಇನ್ನುವರೆಗೆ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಿ ಎರಡು ದಿನ ಕಳೆದು ಇವತ್ತು ಮೂರನೇಯ ದಿನವಾದರೂ ಯಾರೊಬ್ಬರು ಇನ್ನುವರೆಗೆ ನಾಮಪತ್ರ ಸಲ್ಲಿಸಿಲ್ಲ. ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ಪ್ರಚಾರ ಜೋರಾಗಿಯೇ ನಡೆದಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ …
Read More »ಸತೀಶ್ ಜಾರಕಿಹೊಳಿ ಸಿಎಂ ಆಗಲಿ- ಚನ್ನರಾಜ್ ಹಟ್ಟಿಹೊಳಿ
ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೆಕೆನ್ನುವದು ನಮ್ಮೆಲ್ಲರ ಆಶಯ- ಚನ್ನರಾಜ್ ಹಟ್ಟಿಹೊಳಿ ಯಮಕನಮರಡಿ-ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿಯವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯೂ ಮುಂಬರುವ ವಿಧಾನಸಭೆಯ ದಿಕ್ಸೂಚಿಯಾಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಒಟ್ಟಿಗೆ ಕೆಲಸ …
Read More »ಸುವರ್ಣಸೌಧಕ್ಕೆ ಎಡಿಜಿಪಿ ಭೇಟಿ,ಭದ್ರತಾ ವ್ಯೆವಸ್ಥೆಯ ಪರಶೀಲನೆ…..
ಬೆಳಗಾವಿ- ಸರ್ಕಾರ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಕಾನೂನು ಸುವ್ಯೆವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ ರೆಡ್ಡಿ ಇಂದು ಸುವರ್ಣವಿಧಾನಸೌಧಕ್ಕೆ ಭೇಟಿ ನೀಡಿ ಸ್ಥಳೀಯ ಪೋಲೀಸ್ ಅಧಿಕಾರಗಳ ಜೊತೆ ಸಮಾಲೋಚನೆ ನಡೆಸಿದ್ರು ಸುವರ್ಣ ವಿಧಾನಸೌಧದ ಒಳಾಂಗಣ,ಹೊರಾಂಗಣ,ಮುಖ್ಯಮಂತ್ರಿಗಳ ಕಚೇರಿಯ ಭದ್ರತೆ ಸೇರಿದಂತೆ ಪೋಲೀಸ್ ಬಂದೋಬಸ್ತಿ,ಹಾಗೂ ಅಧಿವೇಶನದ ಸಂಧರ್ಭದಲ್ಲಿ ಪ್ರತಿಭಟನೆ ನಡೆಸುವ ಸ್ಥಳ,ಸೇರಿದಂತೆ ವಿವಿಧ ವಿಷಯಗಳ ಕುರಿತು ಸ್ಥಳೀಯ ಪೋಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ …
Read More »ಬಸವರಾಜ ಖಾನಪ್ಪನವರ ಅವರಿಗೆ ಕನ್ನಡ ಸಂಘಟನೆಗಳ ಬೆಂಬಲ
ಬೆಳಗಾವಿ-ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಗೋಕಾಕದ ಕನ್ನಡ ಹೋರಾಟಗಾರ ಬಸವರಾಜ ಖಾನಪ್ಪನವರಅ ವರನ್ನು ಬೆಂಬಲಿಸಲು ಬೆಳಗಾವಿಯ ವಿವಿಧ ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಖಾನಪ್ಪನವರ ಅವರು ಕನ್ನಡಪರ ಹೋರಾಟ ಮಾಡುತ್ತ ಬಂದಿದ್ದು ಅವರನ್ನು ಬೆಂಬಲಿಸಿ ಒಬ್ಬ ಹೋರಾಟಗಾರನಿಗೆ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಕನ್ನಡ ಸಂಘಟನೆಗಳು ಕಸಾಪ ಮತದಾರರಲ್ಲಿ ಮನವಿ ಮಾಡಿವೆ.ಈಗಾಗಲೇ ಒಂದು …
Read More »ಬೆಳಗಾವಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ್ ಫೈನಲ್…!!!
ಬೆಳಗಾವಿ- ವಿಧಾನ ಪರಿಷತ್ತಿನ ಚುನಾವಣೆಗೆ ಬೆಳಗಾವಿಯಲ್ಲಿ ಅಖಾಡಾ ರೆಡಿಯಾಗಿದ್ದು, ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯನ್ನಾಗಿ ಚನ್ನರಾಜ ಹಟ್ಟಿಹೊಳಿ ಅವರನ್ನು ಆಯ್ಕೆ ಮಾಡಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಧ್ಯಾಹ್ನ ನಡೆದ ಮಹತ್ವದ ಸಭೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ಹೆಸರು ಫೈನಲ್ ಆಗಿದೆ. ಬೇರೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕಿಯೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿದ್ದು ಪರಿಷತ್ ಚುನಾವಣೆಯ …
Read More »