ಬೆಳಗಾವಿ- ಇಂದು ಬೆಳಿಗ್ಗೆ ಬೆಳಗಾವಿ ನಗರದ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆಳಗಾವಿ ಜಿಲ್ಲಾ ಉಸ್ತುವಾರಿ,ಹಾಗೂ ಜಲಸಂಪನ್ಮೂಲ ಸಚಿವ ಗೋವೀಂದ್ ಕಾರಜೋಳ ಅವರು ಶಾಸಕ ಅಭಯ ಪಾಟೀಲ ಅವರೊಂದಿಗೆ ಆಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಗನ್ ಮ್ಯಾನ್ ,ಪಿಎ ಗಳನ್ನು ಸರ್ಕ್ಯುಟ್ ಹೌಸ್ ನಲ್ಲೇ ಬಿಟ್ಟು, ಎಸ್ಕಾಟ್ ಇಲ್ಲದೇ ಶಾಸಕ ಅಭಯ ಪಾಟೀಲ ಅವರ ಕಾರಿನಲ್ಲಿ ತೆರಳಿದ ಸಚಿವ ಗೋವೀಂದ್ ಕಾರಜೋಳ ಶಾಸಕ ಅಭಯ ಪಾಟೀಲರ ಜೊತೆ ಹೋಗಿದ್ದಾದರೂ ಎಲ್ಲಿ? …
Read More »ಹೂವು ಖರೀದಿಗೆ ಫ್ಲಾವರ್ ಮಾರುಕಟ್ಟೆಗೆ ಮುಗಿಬಿದ್ದ ಜನರು
ಬೆಳಗಾವಿ: ಗಣೇಶ ಚತುರ್ಥಿ ಮುನ್ನಾ ದಿನವಾದ ಗುರುವಾರ ಜನರು, ವ್ಯಾಪಾಸ್ಥರು ನಗರದ ಹೂವು ಮಾರುಕಟ್ಟೆಗೆ ಹೂವು ಖರೀದಿಗೆ ಮುಗಿಬಿದ್ದ ಪರಿಣಾಮ ಜನಜಂಗು ಉಂಟಾಗಿತ್ತು. ಬೆಳಗ್ಗೆ 6 ಗಂಟೆಗೆ ವ್ಯಾಪಾರಸ್ಥರು, ಸಾರ್ವಜನಿಕರು ಮಾರುಕಟ್ಟೆಯತ್ತ ದೌಡಾಯಿಸಿದರು. ಮಧ್ಯಾಹ್ನ 12 ಗಂಟೆಯವರೆಗೂ ಖರೀದಿಯಲ್ಲಿ ತೊಡಗಿದ್ದರು. ಖರೀದಿಗೆ ಬಂದ ಜನರು, ರೈತರು ಹಾಗೂ ವ್ಯಾಪಾತಸ್ಥರು ರಸ್ತೆ ಬದಿಗೆ ವಾಹನಗಳನ್ನು ನಿಲ್ಲಿಸಿದ್ದರಿಂದ ಬೆಳಗ್ಗೆ 7 ರಿಂದ ಒಂದು ತಾಸು ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಹೂವು ಬೆಳಗಾರರಿಗೆ …
Read More »ನಿಂತ ಲಾರಿಗೆ, ಬೈಕ್ ಡಿಕ್ಕಿ,ಬೆಳಗಾವಿಯ ಇಬ್ಬರು ಯುವಕರ ಸಾವು..
ಬೆಳಗಾವಿ- ಹಾಯವೇ ಪಕ್ಕ ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬೆಳಗಾವಿ ನಗರದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಕತಿ ಗ್ರಾಮದ ಸಮೀಪದಲ್ಲಿರುವ ಬರ್ಡೆ ಧಾಭಾ ಬಳಿ ನಡೆದಿದೆ. ನಿನ್ನೆ ರಾತ್ರಿ ಬರ್ಡೆ ಧಾಭಾ ಬಳಿ, ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೆಳಗಾವಿಯ ಚವ್ಹಾಟ ಗಲ್ಲಿಯ ಯುವಕ ಶ್ರೀನಾಥ ಡಿ.ಪವಾರ,ಸದಾಶಿವ ನಗರದ ಯುವಕ, ರುಚಿತ.ಆರ್ .ಧುಮಾವತ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಇಬ್ಬರೂ ಯುವಕರು …
Read More »ಗದ್ದಲದಲ್ಲಿ ಕಾಲ್ ರಿಸೀವ್ ಮಾಡಿ,ಆತ ಹೋಗಿದ್ದಾದರೂ ಎಲ್ಲಿ ..??
ಬೆಳಗಾವಿ- ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿಯೊಬ್ಬ,ತನ್ನ ವಾರ್ಡಿನಲ್ಲಿ ಸಂಬ್ರಮಿಸುತ್ತಿರುವಾಗ, ವಿಜಯೋತ್ಸವ ಆಚರಿಸುವ ಸಂಧರ್ಭದಲ್ಲಿ ಈ ವಿಜಯಶಾಲಿಗೆ ಮೋಬೈಲ್ ಕಾಲ್ ಬರುತ್ತೆ,ತಕ್ಷಣ ವಿಜಯೋತ್ಸವ ನಿಲ್ಲಿಸಿ,ಆತ ಹೋಗಿದ್ದಾದರೂ ಎಲ್ಲಿ.? ಆತ ಮಾಡಿರುವ ಕಾರ್ಯದ ಬಗ್ಗೆ ಕೇಳಿದ್ರೆ,ಕಣ್ಣೀರು ಕಪಾಳಕ್ಕೆ ಬರುವದರಲ್ಲಿ,ಸಂದೇಹವೇ ಇಲ್ಲ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ 7 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆದ್ದ, ಗಣಾಚಾರಿ ಗಲ್ಲಿಯ ಶಂಕರ ಪಾಟೀಲ. ಮಾಜಿ ಮಹಾಪೌರ ವಿಜಯ ಮೋರೆ ಅವರ …
Read More »ನಾಳೆ ಬೆಳಿಗ್ಗೆ ಸುಮಾರು, 10 ಗಂಟೆಗೆ ಪಾಲಿಕೆ ಫಲಿತಾಂಶ ಕ್ಲಿಯರ್….!!!!
ಬೆಳಗಾವಿ- ಕಳೆದ ಮೂರು ವಾರಗಳಿಂದ ಪಕ್ಷದ ಟಿಕೆಟ್ ಗಾಗಿ ಗುದ್ದಾಡಿ,ನಂತರ ಒಂದು ವಾರ ವಾರ್ಡುಗಳಲ್ಲಿ ಸುತ್ತಾಡಿ,ಮತದಾರರನ್ನು ಓಲೈಸಿ ತಮ್ಮ ಅಸ್ತಿತ್ವಕ್ಕಾಗಿ ಶ್ರಮಿಸಿದ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ಸೋಮವಾರ ಪ್ರಕಟವಾಗಲಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತದಾನ ಶುಕ್ರವಾರ ಮುಗಿದಿದೆ.ನಾಳೆ ಸೋಮವಾರ ಫಲಿತಾಂಶ ಪ್ರಕಟವಾಗಲಿದೆ. ಬೆಳಗಾವಿಯ ಬಿ.ಕೆ ಮಾಡೆಲ್ ಹೈಸ್ಕೂಲಿನಲ್ಲಿ ಮತ ಎಣಿಕೆ ಕೇಂದ್ರ ತೆರೆಯಲಾಗಿದೆ.ತ್ವರಿತ ಗತಿಯ ಮತ ಏಣಿಕೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು,ನಾಳೆ ಸೋಮವಾರ ಸುಮಾರು ಹತ್ತು …
Read More »ಆರೋಪದಲ್ಲಿ ಸತ್ಯಾಂಶ ಇಲ್ಲ,-ಮಲ್ಲಮ್ಮನ ಬೆಳವಡಿ ,ಪಿಡಿಓ ಸ್ಪಷ್ಟನೆ
ಬೆಳಗಾವಿ-ಬೆಳವಡಿ ಗ್ರಾಮದ ಗ್ರಾಮಲೆಕ್ಕಾಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವದಾಗಿ ಕೆಲವು ಮಾದ್ಯಮಗಳಲ್ಲಿ ಪ್ರಕಟವಾಗಿದ್ದು ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಬೆಳವಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸ್ಪಷ್ಟೀಕರಣ ನೀಡಿದ್ದಾರೆ. ಈ ಕುರಿತು ಪತ್ರಿಕಾ ಸ್ಪಷ್ಟನೆ ಹೊರಡಿಸಿರುವ ಅವರುಇಂದು ಸೆಪ್ಟೆಂಬರ್ 3 ರಂದು ಕೆಲವು ಮಾದ್ಯಮಗಳಲ್ಲಿ ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹ ಎನ್ನುವ ಶಿರ್ಷಿಕೆಯಲ್ಲಿ ಸುದ್ಧಿ ಪ್ರಕಟವಾಗಿದ್ದು ಇದರಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು …
Read More »ಮಹಾನಗರ ಪಾಲಿಕೆ ಚುನಾವಣೆಗೆ ಬೆಳಗಾವಿ ಸಜ್ಜು
ಬೆಳಗಾವಿ-ನಾಳೆ ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮತದಾನ,ಬೆಳ್ಳಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಮತದಾನಕ್ಕೆ ಬೆಳಗಾವಿ ಮಹಾನಗರ ಸಜ್ಜಾಗಿದೆ. ಒಟ್ಟು 58 ವಾರ್ಡ್ ಗಳಿಗೆ ನಡೆಯಲಿರುವ ಮತದಾನ. 58 ವಾರ್ಡ್‌ಗಳಿಗೆ ಒಟ್ಟು 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ- 55, ಕಾಂಗ್ರೆಸ್ – 45, ಎಂಇಎಸ್- 21, ಜೆಡಿಎಸ್-11, ಆಮ್ ಆದ್ಮಿ – 27, MIM- 7, ಉತ್ತಮ ಪ್ರಜಾಕೀಯ -1 SDPI- 1, ಪಕ್ಷೇತರರು- 217 …
Read More »ಬೆಳಗಾವಿ ಮಹಾನಗರ ಪಾಲಿಕೆಗೆ ಹೊಸ ಆಯುಕ್ತರ ನೇಮಕ..
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಗೆ ಕೊನೆಗೂ ಸರ್ಕಾರ ಹೊಸ ಆಯುಕ್ತರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಾಗಿ ಈ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದ ರುದ್ರೇಶ್ ಘಾಳಿ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಿಸಲಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ರುದ್ರೇಶ್ ಘಾಳಿ ಅವರು ಪಶು ವೈದ್ಯಕೀಯ ಪದವಿ ಪಡೆದು ನಂತರ ಕೆಎಎಸ್ ತೇರ್ಗಡೆಯಾದ ಅವರು ಬೀದರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಬೆಳಗಾವಿ …
Read More »ಮರಾಠಿ + ಮುಸ್ಲೀಂ M+M ಎಂಈಎಸ್ ಹೊಸ ಷಡ್ಯಂತ್ರ….
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳು ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಎದುರಿಸುತ್ತಿರುವ ಕಾರಣ,ಸಂಪೂರ್ಣವಾಗಿ ಕಂಗಾಲಾಗಿರುವ ಎಂಈಎಸ್ ನಾಯಕರು ಈಗ ಎಂ ಪ್ಲಸ್ ಎಂ ಅಂದ್ರೆ ಮರಾಠಿ ಪ್ಲಸ್ ಮುಸ್ಲೀಂ ಎನ್ನುವ ಹೊಸ ನಾಟಕ ಶುರು ಮಾಡಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನಂ 6 ನಗರದ ಫೋರ್ಟ್ ರಸ್ತೆ ಅರಳಿಕಟ್ಟಿ ದೇಶಪಾಂಡೆ ಗಲ್ಲಿ ( ಮಾಳಿ ಗಲ್ಲಿ) ಕಲೇಗಾರ ಗಲ್ಲಿ ಸೇರಿದಂತೆ …
Read More »ತಾಕತ್ತಿದ್ದರೆ, ಎಂಈಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ- ಕರವೇ ಸವಾಲು…
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾಡಿನ ಪರವಾಗಿರುವ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ, ಎಲ್ಲ ಮರಾಠಿ ಭಾಷಿಕ ಅಭ್ಯರ್ಥಿಗಳು ಎಂಈಎಸ್ ಅಭ್ಯರ್ಥಿಗಳು ಎಂದು ಹೇಳುವ ಮೂಲಕ ಎಂಈಎಸ್ ನಾಯಕರು ಮರಾಠಿ ಭಾಷಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ತಾಕತ್ತಿದ್ದರೆ ಎಂಈಎಸ್ ನಾಯಕರು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡುವಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸವಾಲು ಹಾಕಿದ್ದಾರೆ. ಬೆಳಗಾವಿ ಮಹಾನಗರದಲ್ಲಿ ಬಹಳಷ್ಟು ಮರಾಠಿ ಭಾಷಿಕ ನಾಯಕರು ಚುನಾವಣೆಗೆ ಸ್ಪರ್ದೆ …
Read More »