ಬೆಳಗಾವಿ- ಮಾಜಿ ಸಚಿವ,ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಆಗಿದೆ,ಅವರಿಗೆ ಕೊರೊನಾ ಬಂದಿದೆ ಎಂದು,ಬೆಳಗಾವಿಯಲ್ಲಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ.. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಹುಷಾರಾಗಿ ಚುನಾವಣಾ ಪ್ರಚಾರಕ್ಕೆ ಬರೋದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ,ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದಾರೆ,ಇನ್ನೆರಡು ದಿನಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರ್ತಾರೆ, ಕೇವಲ ಚುನಾವಣಾ ಪ್ರಚಾರ ಕುರಿತು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿದ್ದೇನೆ.ರಮೇಶ್, ಬಾಲಚಂದ್ರ ಜೊತೆ ನಿನ್ನೆ ಫೋನ್‌ನಲ್ಲಿ ಮಾತನಾಡಿದ್ದೇನೆ ಎಂದು ಸಚಿವ …
Read More »ಅಂದು ಹಸಿರು ಶಾಲು,ಇಂದು ಕೇಸರಿ ರೂಮಾಲು,ಸತೀಶ್ ಜಾರಕಿಹೊಳಿ,ಕಮಾಲು…!!
ಬೆಳಗಾವಿ-ಹಸಿರು ಶಾಲು ಹಾಕಿಕೊಂಡು ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ ಈಗ ಕೇಸರಿ ಪೇಟಾ ಧರಸಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಅತ್ಯಂತ ವ್ಯೆವಸ್ಥಿತವಾಗಿ ಚುನಾವಣಾ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬೈಲಹೊಂಗಲ,ಸವದತ್ತಿ ಕ್ಷೇತ್ರದಲ್ಲಿ ಸಂಚಾರ ಮಾಡಿರುವ ಸತೀಶ್ ಜಾರಕಿಹೊಳಿ ಇವತ್ತು ಬೆಳಗಾವಿ ನಗರದಲ್ಲಿ ದಿನವಿಡೀ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆತಲಿದ್ದು ಬೆಳಗಾವಿ …
Read More »ಸುರೇಶ್ ಅಂಗಡಿ ಅವರ ನೆನಪಾಯಿತು…ನೋವು ಕರಗಿ ಕಣ್ಣೀರಾಯಿತು…!!!
ಬೆಳಗಾವಿ-ಮನಸ್ಸಿನಲ್ಲಿ ಸಹಿಸಲಾಗದ ನೋವು,ಕಣ್ಣೀರಾಗಿ ಕರಗಿದರೂ ಅದನ್ನೆಲ್ಲ ಸಹಿಸಿ ರಾಜಕೀಯ ಕ್ಷೇತ್ರ ಹೊಸದಾದರೂ ದಿ.ಸುರೇಶ ಅಂಗಡಿಯವರ ಪತ್ನಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ವಾರದಲ್ಲೇ ಜನಸಾಮಾನ್ಯರ ಜೊತೆ ಬೆರೆತು ಮತಯಾಚಿಸುತ್ತಿದ್ದಾರೆ ಮಂಗಲಾ ಅಂಗಡಿ ಅವರಿಗೆ ರಾಜಕೀಯ ಕ್ಷೇತ್ರ ಹೊಸದು,ಆದರೂ ಮಂಗಲಾ ಅಂಗಡಿ,ಅತ್ಯಂತ ವಿನಯದಿಂದಲೇ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಮಂಗಲಾ ಅಂಗಡಿ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ತಕ್ಷಣ,ವಿಘ್ನೇಶ್ವರನ ಆಶಿರ್ವಾದ ಪಡೆದು ಚುನಾವಣಾ …
Read More »ಯತ್ನಾಳಗೆ ನಾಲಾಯಕ್ ಎಂದ ನಿರಾಣಿ….
ಬೆಳಗಾವಿ- ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸಚಿವ ಮುರುಗೇಶ ನಿರಾಣಿ ಕಿಡಿಕಾರಿದ್ದು ಬಿಜಾಪೂರದ ನಾಲಾಯಕ್ ಎಂದು ಯತ್ನಾಳ ಅವರ ಹೆಸರು ಹೇಳದೇ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿರುವದಕ್ಕೆ ಕಿಡಿಕಾರಿದ ಮುರುಗೇಶ ನಿರಾಣಿ,ಯತ್ನಾಳ ಬಹಳ ಹಿರಿಯರು, ಎಲ್ಲಾ ಮೂಲಗಳಿಂದ ಎನೇನೋ ಸಿಗ್ತಿದೆ.ನಮ್ಮ ಪಕ್ಷದಲ್ಲಿದ್ದುಕೊಂಡು ನಮ್ಮ ಪಕ್ಷದವರನ್ನ ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ.ಟೀಕೆ ಮಾಡುವುದಿತ್ತು ಅಂದ್ರೇ ಇವತ್ತು …
Read More »ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಚಾಯ್ ಪೇ ಚರ್ಚಾ…..
ಬೆಳಗಾವಿ-ಸಚಿವ ಜಗದೀಶ್ ಶೆಟ್ಟರ್ ಅವರು ಇವತ್ತು ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಮತಬೇಟೆ ಶುರು ಮಾಡಿದ್ದು ಬೆಳಗಾವಿಯ ಹನುಮಾನ ನಗರದಲ್ಲಿ ಅವರು ಚಾಯ್ ಪೇ ಚರ್ಚಾ ಮೂಲಕ ಕ್ಯಾಂಪೇನ್ ಆರಂಭಿಸಿದರು ಶಾಸಕ ಅನೀಲ ಬೆನಕೆ,ಅಭ್ಯರ್ಥಿ ಮಂಗಲಾ ಅಂಗಡಿ ಮತ್ತು ಇನ್ನಿತರ ಕಾರ್ಯಕರ್ತರ ಪಡೆಯೊಂದಿಗೆ ಚಾಯ್ ಪೇ ಚರ್ಚಾ ದಲ್ಲಿ ಭಾಗವಹಿಸಿದ ಸಚಿವ ಜಗದೀಶ್ ಶೆಟ್ಟರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಕುರಿತು ಚರ್ಚೆ ಮಾಡಿದರು. ಸುರೇಶ್ ಅಂಗಡಿ ಅವರು ಸರಳ …
Read More »ಬೆಳಗಾವಿಯಲ್ಲಿ ಸಿಐಡಿ ಪೋಲೀಸರಿಂದ ಅಪ್ಪ,ಮಗನ ಬಂಧನ…
ಬೆಳಗಾವಿ- ಕೋಟ್ಯಾಂತರ ರೂ ವಂಚನೆ ಪ್ರಕರಣಕ್ಕೆ ಸಮಂಧಿಸಿದಂತೆ ಸಿಐಡಿ ಪೋಲೀಸರು,ತಂದೆ,ಮತ್ತು ಮಗ,ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬೆಳಗಾವಿಯ ಎಪಿಎಂಸಿ ಪೋಲೀಸ್ ಠಾಣೆಯಲ್ಲಿ ಕೋಟ್ಯಾಂತರ ರೂ ವಂಚಿಸಿದ ಆರೋಪದ ಮೇಲೆ ಆಝಂ ನಗರದ ನಿವಾಸಿಗಳಾದ ತಂದೆ ಮತ್ತು ಮಗನ ಮೇಲೆ ಪ್ರಕರಣ ದಾಖಲಾಗಿತ್ತು, ಪ್ರಕರಣದ ವಿಚಾರಣೆ ನಡೆಸಿರು ಸಿಐಡಿ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಟ್ಟಡ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಆಝಂ ನಗರದ ತಂದೆ ಮಹ್ಮದ ಅಬ್ಬಾಸ್ ಹುಸೇನ್ …
Read More »ಶ್ರದ್ಧೆ ಮತ್ತು ಸ್ಪೂರ್ತಿಯೇ ಬಿಜೆಪಿಗೆ ಮಂಗಲ….!!!!
ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಚುನಾವಣಾ ಪ್ರಚಾರ ಮಾಡುತ್ತಿರುವದು. ಬೆಳಗಾವಿ-ಬಿಜೆಪಿ ಶಿಸ್ತಿನ ಪಕ್ಷ ಇಲ್ಲಿ ಶ್ರದ್ಧೆ,ನಿಷ್ಠೆ ಸ್ಪೂರ್ತಿಯಿಂದ ಪಕ್ಷ ಸೇವೆ ಮಾಡಿದ್ರೆ ಎನೆಲ್ಲಾ ಅವಕಾಶ ಸಿಗಬಹುದು ಅನ್ನೋದಕ್ಕೆ ದಿ.ಸುರೇಶ್ ಅಂಗಡಿಯವರ ಇಬ್ಬರು ಪುತ್ರಿಯರಾದ ಶ್ರದ್ಧಾ,ಮತ್ತು ಸ್ಪೂರ್ತಿ ಸಾಕ್ಷಿಯಾಗುತ್ತಿದ್ದಾರೆ. ಬೆಳಗಾವಿ ಉಪ ಚುನಾವಣೆಯ ಕಣದಲ್ಲಿ ಧುಮುಕಿರುವ ಇಬ್ಬರು ಪುತ್ರಿಯರಾದ ಶ್ರದ್ಧಾ ಮತ್ತು ಸ್ಪೂರ್ತಿ ಇಬ್ಬರೂ ತಾಯಿ ಮಂಗಲಾ ಅಂಗಡಿಯವರ ಗೆಲುವಿಗಾಗಿ ಸುಡು ಬಿಸಲಲ್ಲೂ ಪ್ರಚಾರ ನಡೆಸುವ ಮೂಲಕ …
Read More »ಹೊಸ ಕೋವೀಡ್ ರೂಲ್… ಬೈ ಇಲೆಕ್ಷನ್ ಕೂಲ್ ಕೂಲ್….!!!
ಬೆಳಗಾವಿ- ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರೆದ ಹಿನ್ನಲೆಯಲ್ಲಿ ಹೊಸ ಕೋವೀಡ್ ನಿಯಮಾವಳಿಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಹೊಸ ನಿಯಮಗಳು ಬೆಳಗಾವಿ ಉಪ ಚುನಾವಣೆಯ ಪ್ರಚಾರ ರ್ಯಾಲಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಸರ್ಕಾರದ ಹೊಸ ಮಾರ್ಗಸೂಚಿಯಂತೆ,ರ್ಯಾಲಿ,ಧರಣಿ ಮಾಡುಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ,ಬೆಳಗಾವಿ ಜಿಲ್ಲೆಯಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಪ್ರಚಾರ ಸಭೆ,ಪ್ರಚಾರಕ್ಕಾಗಿ ನಡೆಯುವ ರ್ಯಾಲಿಗಳಿಗೂ ಹೊಡೆತ ಬೀಳುವದು ಗ್ಯಾರಂಟಿ ಸರ್ಕಾರದ ಹೊಸ ಮಾರ್ಗಸೂಚಿ ಬೆಳಗಾವಿ ಜಿಲ್ಲಾಧಿಕಾರಿಗಳ ಕೈ ಸೇರಿದ …
Read More »ಸಿಎಂ ಯಡಿಯೂರಪ್ಪನವರಿಗೆ ಈಗ ಡಬಲ್ ಟ್ರಬಲ್…!!!!
ಬೆಳಗಾವಿ- ಈಶ್ವರಪ್ಪನವರು ಬಿಜೆಪಿ ವರಿಷ್ಠರಿಗೆ ಬರೆದಿರುವ ಲವ್ ಲೆಟರ್,ಶಾಸಕ ಬಸನಗೌಡ ಪಾಟೀಲ ಯತ್ನಾಳರ ನಿರಂತರ ವಾಗ್ದಾಳಿ ಗಮನಿಸಿದರೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲು ಮಾಡುವ,ಅದಲ್ ಬದಲ್ ಕೈಂಚಿ ಕದಲ್ ನಡೆಯುತ್ತಿದೆಯಾ…? ಎನ್ನುವ ಅನುಮಾನ ಈಗ ಶುರುವಾಗಿದೆ.. ಮೇ 2 ರ ನಂತರ ಬಿಜೆಪಿ ನಾಯಕತ್ವ ಬದಲಾವಣೆ ಆಗುತ್ತದೆ ಇದರಲ್ಲಿ ಸಂಶಯವೇ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ ಬೆನ್ನಲ್ಲಿಯೇ ಈಶ್ವರಪ್ಪನವರು ಬಿಜೆಪಿ ಹೈಕಮಾಂಡ್ ಗೆ …
Read More »ಸಿಎಂ ಯಡಿಯೂರಪ್ಪ ಪರವಾಗಿ ಬೆಳಗಾವಿಯಲ್ಲಿ ಭರ್ಜರಿ ಬ್ಯಾಟಿಂಗ್…
ಬೆಳಗಾವಿ-ರಾಜ್ಯದ ಇಬ್ಬರು ಪ್ರಭಾವಿ ಸಚಿವರು ,ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರ ನಡೆಯ ಬಗ್ಗೆ ಅಸಮಾಧಾನ ವ್ಯೆಕ್ತ ಪಡಿಸಿದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ,ಸಚಿವ ಜಗದೀಶ್ ಶೆಟ್ಟರ್ ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರು ಈಶ್ವರಪ್ಪ ಅವರ ನಡೆಯ ಬಗ್ಗೆ ಬೆಳಗಾವಿಯಲ್ಲಿ ಅಸಮಾಧಾನ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ,ಸಿಎಂ ಬಿಎಸ್‌ವೈ ವಿರುದ್ಧ ರಾಜ್ಯಪಾಲರಿಗೆ ಕೆ.ಎಸ್.ಈಶ್ವರಪ್ಪ ದೂರು ವಿಚಾರ.ಈಶ್ವರಪ್ಪ ಹಿರಿಯ …
Read More »