ಬೆಳಗಾವಿ- ಸಮೀಪದ ಕಾಕತಿ ಪೋಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆಯಾದ ಕುರಿತು ಪ್ರಕರಣ ದಾಖಲಾಗಿದೆ. ಬೆಲ್ಲದ ಬಾಗೇವಾಡಿ ಗ್ರಾಮದ 27 ವರ್ಷದ ಪ್ರೀತಿ ಗೌತಮ ಪದಪ್ಪಗೋಳ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಯುವತಿಯ ಪಾಲಕರು ಕಾಕತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರೀತಿ ಗೌತಮ ಪದಪ್ಪಗೋಳ ಭೂತರಾಮನಹಟ್ಟಿ ಗ್ರಾಮದಲ್ಲಿರುವ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು,ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವದಾಗಿ ಪಾಲಕರಿಗೆ ಹೇಳಿ ಬಂದಿದ್ದ ಯುವತಿ,ಸಂಜೆ ಪಾಲಕರಿಗೆ ಫೋನ್ ಮಾಡಿ ನಾನು …
Read More »ಬೆಳಗಾವಿಯಲ್ಲಿ ಈ ಹಿಂದೆ ಯಾವಾಗ ಲೋಕಸಭೆ ಉಪ ಚುನಾವಣೆ ನಡೆದಿತ್ತು ಗೊತ್ತಾ…..???
ಬೆಳಗಾವಿ-ಎಪ್ರೀಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು ಈ ಹಿಂದೆಯೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು ಈಗ ನಡೆಯಲಿರುವ ಉಪ ಚುನಾವಣೆ ಎರಡನೇಯ ಉಪ ಚುನಾವಣೆಯಾಗಿದೆ. 1962 ರಲ್ಲಿ ಬಿ.ಎನ್ ದಾತಾರ್ ಅವರು ಕೇಂದ್ರದ ಸಚಿವ ಸಂಪುಟದಲ್ಲಿ ಹೋಮ್ ಅಫೇಯರ್ಸ್ ಡೆಪ್ಯೂಟಿ ಮಿನಿಸ್ಟರ್ ಆಗಿದ್ದರು.1962 ರಲ್ಲಿ ಅವರ ಅಕಾಲಿಕ ನಿಧನದಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 1963 ರಲ್ಲಿ ಉಪ ನಡೆದಿತ್ತು. ಬಿ.ಎನ್ ದಾತಾರ …
Read More »ಕಿಡ್ನ್ಯಾಪ್ ಕೇಸ್ ದಾಖಲಾಗಿದೆ,ತನಿಖೆಗೆ ತಂಡ ರಚಿಸಲಾಗಿದೆ
ಬೆಳಗಾವಿ- ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿದ್ದ ಯುವತಿ ತಂದೆ ತನ್ನ ಮಗಳನ್ನು ಬೆಂಗಳೂರಿನಲ್ಲಿ ಯಾರೋ ಅಪರಿಚಿತರು ಅಪಹರಣ ಮಾಡಿ, ಕಿರುಕುಳ ನೀಡುತ್ತಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ.ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಡಿಸಿಪಿ ವಿಕ್ರಂ ಅಮಟೆ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಯುವತಿ ತಂದೆ ನಿನ್ನೆ ಎಂಪಿಎಂಸಿ ಠಾಣೆಗೆ ಬಂದು, ತಮ್ಮ ಮಗಳನ್ನು …
Read More »ನಿಂಬೆಹಣ್ಣು ಹಿಡಿದು ನಾಮಪತ್ರ ಸಲ್ಲಿಸಿದ ಚುನಮರಿ…!!!
ಗೋಕಾಕ: ನಿಂಬೆಹಣ್ಣು ಎಂದರೆ, ಹೆಚ್.ಡಿ.ರೇವಣ್ಣ, ರೇವಣ್ಣ ಎಂದರೆ ನಿಂಬೆಹಣ್ಣು ಎನ್ನುವ ಮಾತು ರಾಜ್ಯದಲ್ಲಿ ಜನಜನಿತವಾಗಿದೆ. ರೇವಣ್ಣ ತಮ್ಮ ಕೈಯಲ್ಲಿ, ಜೇಬಿನಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುವುದು ಸಹಜ. ಆದರೆ ಇಲ್ಲೊಬ್ಬ ನಗರಸಭೆ ಉಪಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ನಿಂಬೆಹಣ್ಣು ಕೈಯಲ್ಲಿ ಹಿಡಿದು ನಾಮಪತ್ರ ಸಲ್ಲಿಸಿ, ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಾಜಿ ನಗರಸಭೆ ಸದಸ್ಯ ಗಿರೀಶ ಖೋತ ಅವರ ಅಕಾಲಿಕ ನಿಧನದಿಂದ ತೆರವಾದ ನಗರಸಭೆ ವಾರ್ಡ ನಂ13 ರ ಉಪಚುನಾವಣೆಗೆ ಸ್ಪರ್ಧಿಸಲು ನಾಮಪತ್ರ …
Read More »ಬೆಳಗಾವಿ, ಉಪಚುನಾವಣೆ ಘೋಷಣೆ. ಆಕಾಂಕ್ಷಿಗಳಲ್ಲಿ ಹೆಚ್ವಿದ ಎನರ್ಜಿ…..!!!
ಬೆಳಗಾವಿ- ಅಂತು ಇಂತೂ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು ಬಿಜೆಪಿ,ಮತ್ತು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಗೂಡು ಬಿಟ್ಟು ಹೊರಬಂದಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಶುರುವಾಗಿವೆ. ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ,ಡಾ. ರವಿ ಪಾಟೀಲ,ಕಿರಣ ಜಾಧವ,ಮಹಾಂತೇಶ ಕವಟಗಿಮಠ,ಡಾ.ಸೋನವಾಲ್ಕರ್, ಎಂ.ಬಿ ಝಿರಲಿ,ಉಜ್ವಲಾ ಬಡವನ್ನಾಚೆ,ಬೈಲಹೊಂಗಲ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಸೇರಿದಂತೆ ಅಗಣಿತ ಆಕಾಂಕ್ಷಿಗಳು ಇದ್ದಾರೆ. ಬಿಜೆಪಿಯ ಯುವ ಕಾರ್ಯಕರ್ತರ ವಲಯದಲ್ಲಿ,ರಾಜೀವ ಟೀಪಣ್ಣವರ,ವಿರೇಶ ಕಿವಡಸಣ್ಣವರ,ರುದ್ರಣ್ಣಾ ಚಂದರಗಿ …
Read More »ಲೋಕಸಭಾ ಉಪ ಚುನಾವಣೆ ಘೋಷಣೆ: ನೀತಿಸಂಹಿತೆ ಜಾರಿ
ಬೆಳಗಾವಿ,- ಲೋಕಸಭಾ ಉಪಚುನಾವಣೆ ಮಂಗಳವಾರ(ಮಾ.16) ಘೋಷಣೆಯಾಗಿರುವುದರಿಂದ ನೀತಿಸಂಹಿತೆ ತಕ್ಷಣವೇ ಜಾರಿಗೆ ಬಂದಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ (ಮಾ.16) ಸಂಜೆ ನಡೆದ ತುರ್ತು ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರೀತಿಯ ತಂಡಗಳನ್ನು ರಚಿಸಲಾಗಿದ್ದು, ತರಬೇತಿ ಕೂಡ ನೀಡಲಾಗಿರುತ್ತದೆ. ಇದೀಗ ಉಪ ಚುನಾವಣೆ …
Read More »ಮಕ್ಕಳ ದತ್ತು ಕೇಂದ್ರಕ್ಕೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ…
ಬೆಳಗಾವಿ, : ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಮಕ್ಕಳ ದತ್ತು ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಂಗಳವಾರ (ಮಾ.16) ಭೇಡಿ ನೀಡಿದರು. ಸಂಸ್ಥೆಯಲ್ಲಿರುವ ನಿರ್ಗತಿಕ ಮಕ್ಕಳ ಕುಟೀರ(ಹೆಣ್ಣು ಮತ್ತು ಗಂಡು),ಅನಾಥಾಶ್ರಮ, ಸ್ವದೇಶಿ ಮತು ವಿದೇಶಿ ದತ್ತು ಕೇಂದ್ರ ಹೀಗೆ ನಾಲ್ಕು ಮಕ್ಕಳ ಪಾಲನಾ ಸಂಸ್ಥೆಗಳನ್ನು ನಡೆಸುತ್ತಿದ್ದು, ಸದರಿ ಸಂಸ್ಥೆಗೆ ಜಿಲ್ಲಾಧಿಕಾರಿಗಳು ಭೇಡಿ ನೀಡಿ ಸಂಸ್ಥೆಯಲ್ಲಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಒಂದು ಸಮಾಜಮುಖಿಯಾಗಿ …
Read More »ಬೆಳಗಾವಿ ಉಪ ಚುನಾವಣೆಯ ದಿನಾಂಕ ಘೋಷಣೆ..
ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು,ಎಪ್ರೀಲ್ 17 ರಂದು ಮತದಾನ ನಡೆಯಲಿದೆ. ಇವತ್ತು ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಮಾರ್ಚ್ 23 ರಂದು ಚುನಾವಣೆಯ ಅಧಿಸೂಚನೆ ಹೊರಡಲಿದ್ದು, ನಾಮಪತ್ರ ಸಲ್ಲಿಸಲು ಮಾರ್ಚ್ 30 ಕೊನೆಯ ದಿನಾಂಕವಾಗಿದೆ. ಎಪ್ರೀಲ್ 17 ರಂದು ಮತದಾನ ನಡೆಯಲಿದ್ದು ಮೇ 2 ರಂದು ಮತ ಏಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
Read More »ಬೆಳಗಾವಿ ಡಿಸಿಪಿ ಕೈ ಸೇರಿದ 50 ಸೆಕೆಂಡಿನ ಅಸಲಿ ಸಿಡಿ.,,.!!!
ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಎಂಈಎಸ್ ಮುಖಂಡ ಶುಭಂ ಸಾಳುಂಕೆ ಅವರು ಕನ್ನಡಿಗರ ವಿರುದ್ಧ ಮಾಡಿರುವ ಪ್ರಚೋದನಕಾರಿ ಭಾಷಣದ ಅಸಲಿ ಸಿಡಿ ಯನ್ನು ಕರವೇ ಕಾರ್ಯಕರ್ತರು ಡಿಸಿಪಿ ವಿಕ್ರಂ ಅಮಟೆ ಅವರಿಗೆ ಹಸ್ತಾಂತರ ಮಾಡಿ ಶುಭಂ ಸಾಳುಂಕೆ ವಿರುದ್ಧ ದೂರು ನೀಡಿದ್ದಾರೆ. ಬೆಳಗಾವಿ ಗಡಿಯಲ್ಲಿ ಎಂಇಎಸ್ ಮುಖಂಡ ಶುಭಂ ಸಿಳಕೆ ಯಿಂದ ಕನ್ನಡಿಗರಿಗೆ ಧಮ್ಕಿ ಹಾಕಿದ ಪ್ರಕರಣ ಈಗ ಬೆಳಗಾವಿಯ ವಿವಿಧ ಪೋಲೀಸ್ ಠಾಣೆಗಳ ಮೆಟ್ಟಲೇರಿದ್ದು,ಎಂಇಎಸ್ ಮುಖಂಡ ಶುಭಂ ಸಿಳಕೆ ವಿರುದ್ಧ …
Read More »ಕೆಂಪು, ಹಳದಿ ಬಾವುಟ ಹಾಕಿಕೊಂಡು ಓಡಾಡಿದ್ರೆ ಅಟ್ಟಾಡಿಸಿ ಹೊಡೀತಾನಂತೆ…!!
ಬೆಳಗಾವಿ-ಕೆಂಪು, ಹಳದಿ ಬಾವುಟ ಹಾಕಿಕೊಂಡು ಓಡಾಡಿದ್ರೆ ಅಟ್ಟಾಡಿಸಿ ಹೊಡಿತೀವಿ ಎಂದು ಬೆಳಗಾವಿ ನೆಲದಲ್ಲಿ ನಿಂತು ಎಂಇಎಸ್ ಮುಖಂಡನೊಬ್ಬ ಧಮ್ಕಿ ಹಾಕಿದ್ದಾನೆ. ಎಂಇಎಸ್ ಯುವ ಘಟಕದ ಮುಖಂಡ ಶುಭಂ ಸಾಳುಂಕೆ ಕನ್ನಡಿಗರಿಗೆ ಬಹಿರಂಗವಾಗಿ ಧಮಕಿ ಹಾಕಿ ಗಡಿನಾಡಿನಲ್ಲಿ ಪುಂಡಾಟಿಕೆ ಪ್ರದರ್ಶಿಸಿದ್ದಾನೆ. ಬೆಳಗಾವಿಯಲ್ಲಿ ಎಂಇಎಸ ಶಿವಸೇನೆ ಎರಡು ಒಂದಾಗಿವೆ.ಹಳದಿ ಕೆಂಪು ಬಣ್ಣದ ಶಾಲು ಧರಿಸಿದವರನ್ನ ಸಿಕ್ಕ ಸಿಕ್ಕಲ್ಲಿ ನಾವು ಹೊಡ್ತಿವಿ.ನಮ್ಮ ಶಾಂತಿಯುತ ಹೋರಾಟವನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ.ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು.ಇಲ್ಲವಾದಲ್ಲಿ …
Read More »