ಬೆಳಗಾವಿ-ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬಹುದು ಎನ್ನುವದು,ತರ್ಕಕ್ಕೆ ನಿಲಕದ್ದು,ಇದನ್ನು ಊಹೆ ಮಾಡಲು ಕೂಡಾ ಸಾಧ್ಯವಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇದೆ,ಈ ಚರ್ಚೆಯಲ್ಲಿ ದಿನಕ್ಕೊಂದು ಹೆಸರು ತೇಲಿ ಬರುತ್ತಲೇ ಇದೆ,ಆದ್ರೆ ಇತ್ತೀಚಿಗೆ ಈ ಪಟ್ಟಿಯಲ್ಲಿ ಮೊತ್ತೊಂದು ಹೆಸರು ಸೇರ್ಪಡೆಯಾಗಿದೆ. ಸದನದ ಒಳಗೆ ,ಹೊರಗೆ,ಸಿಎಂ ವಿರುದ್ಧ ದಿನಕ್ಕೊಂದು ಬಾಂಬ್ ಸಿಡಿಸಿ ರಾಜ್ಯದ ಗಮನ …
Read More »ಪೋಲೀಸ್ ವೇರಿಪಿಕೇಶನ್ ಬೆಳಗಾವಿಯಲ್ಲಿ ರಿಕಾರ್ಡ್….!!!
ಬೆಳಗಾವಿ-ಮಟಕಾ,ಗಾಂಜಾ,ಜೂಜಾಟದಿಂದ ಬೆಳಗಾವಿ ನಗರವನ್ನು ಮುಕ್ತ ಮಾಡುವತ್ತ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಸದೃಡ ಸಮಾಜ ನಿರ್ಮಾಣ ಮಾಡುತ್ತಿರುವ ಬೆಳಗಾವಿ ನಗರ ಪೋಲೀಸರು ಈಗ ಸದ್ದಲ್ಲದೇ ಮತ್ತೊಂದು ಜನಸ್ನೇಹಿ ಕಾರ್ಯವನ್ನು ಮಾಡುತ್ತಿದ್ದಾರೆ. ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕಿದ್ರೆ ಮೊದಲು ಪಾಸ್ ಪೋರ್ಟ್ ನಲ್ಲಿ ಡಾಕ್ಯುಮೆಂಟ್ ವೇರಿಪಿಕೇಶನ್ ಆದ ಬಳಿಕ,ದಾಖಲೆಗಳು ಪೋಲೀಸ್ ಇನ್ ಕ್ವಾರಿಗೆ ಬರುತ್ತವೆ. ಪಾಸ್ ಪೋರ್ಟ್ ಪೋಲೀಸ್ ಇನ್ ಕ್ವಾರಿಗೆ ಬಂದರೆ ಅರ್ಜಿ ಹಾಕಿದವರು ತಿಂಗಳು ಗಟ್ಟಲೆ ಪೋಲೀಸ್ ಠಾಣೆಗೆ …
Read More »ಬೆಳಗಾವಿಯಲ್ಲಿ 75 ಕಿ.ಮೀ. ಸೈಕಲ್ ರ್ಯಾಲಿ
ಬೆಳಗಾವಿ,): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಶುಕ್ರವಾರ(ಮಾ.12) ಬೆಳಿಗ್ಗೆ 6.45 ಗಂಟೆಗೆ ಚನ್ನಮ್ಮನ ಕಿತ್ತೂರಿನಿಂದ ಸೈಕಲ್ ರ್ಯಾಲಿ ನಡೆಯಲಿದೆ. ಈ ರ್ಯಾಲಿಯು ಬೆಳಿಗ್ಗೆ 8.15 ಗಂಟೆಗೆ ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ. ಕಿತ್ತೂರು ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಸ್ಮಾರಕದವರೆಗೆ ರ್ಯಾಲಿ ನಡೆಯಲಿದೆ. ಕಿತ್ತೂರಿನಿಂದ ನಂದಗಡವರೆಗಿನ 75 ಕಿ.ಮೀ. ಸೈಕಲ್ …
Read More »ಶಿವಸ್ಮರಣೆ, ಶಿವಭಜನೆ,ಇಂದು ಶಿವರಾತ್ರಿ ಜಾಗರಣೆ…
ಬೆಳಗಾವಿ-ಇಂದು ಮಹಾ ಶಿವರಾತ್ರಿ,ಶಿಸ್ಮರಣೆಯಯ ಜೊತೆಗೆ ಕುಂದಾನಗರಿ ಬೆಳಗಾವಿ ಇವತ್ತು ಸಂಪೂರ್ಣವಾಗಿ ಶಿವಮಯವಾಗಿದೆ. ಬೆಳಗಾವಿ ನಗರದ ಶಿವಾಲಯಗಳಿಗೆ ಶಿಭಕ್ತರ ದಂಡೇ ಹರಿದು ಬರುತ್ತಿದೆ.ಇಂದು ಬೆಳಿಗ್ಗೆಯಿಂದಲೇ ಭಕ್ತರು ಶಿವಾಲಯಗಳ ಎದುರು ದರ್ಶನಕ್ಕಾಗಿ ಸರದಿಯಲ್ಲಿ ನಿಂತಿರುವ ದೃಶ್ಯ ಬೆಳಗಾವಿಯಲ್ಲಿ ಸಾಮಾನ್ಯವಾಗಿತ್ತು. ಮಹಾ ಶಿವರಾತ್ರಿಯ ಈ ದಿನ ಭಕ್ತರು ಶಿವನ ಧ್ಯಾನದಲ್ಲಿ ಇರುವ ಜೊತೆಗೆ ಉಪವಾಸ ಆಚರಿಸಿ ಮಹಾ ಶಿವರಾತ್ರಿಯನ್ಮು ಅರ್ಥಪೂರ್ಣಗೊಳಿಸಿದರು. ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಇಂದು ಬೆಳಿಗ್ಗೆಯಿಂದಲೇ …
Read More »ಸಾಂಬ್ರಾ ಏರ್ ಪೋರ್ಟ್ ನಲ್ಲಿ ನಾ..ಒಲ್ಲೇ…ನೀ ಒಲ್ಲೇ…!!!
ಬೆಳಗಾವಿ- ಬಜೆಟ್ ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಇವತ್ತು ನಾಯಕರ ದಂಡು ಆಗಮಿಸಿತು,ಏನಾದ್ರು ಬಿಸಿಬಿಸಿ ಸುದ್ಧಿ ಸಿಗಬಹುದು ಎಂದು ಮಾದ್ಯಮ ಪ್ರತಿನಿಧಿಗಳು ಮೈಕ್ ಹಿಡಿದು ನಿಂತರೆ ಅಲ್ಲಿ ನಡೆದಿದ್ದು ನಾ…ಒಲ್ಲೇ….ನೀ..ಒಲ್ಲೆ… ಮಾದ್ಯಮಗಳ ಲೋಗೋ ನೋಡಿದ್ರೆ ಸಾಕು ರಾಜಕಾರಣಿ ಗಳು ಮಾತನಾಡಲು ನಾ.ಮುಂದೆ ನೀ ಮುಂದೆ ಅಂತಾರೆ ಆದ್ರೆ ಇವತ್ತು ಸಾಂಬ್ರಾ ಏರ್ ಪೋರ್ಟ್ ನಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಸಂಗ ಎದುರಾಯಿತು.ಶ್ರೀಮಂತ ಪಾಟೀಲ ಅವರನ್ನು ಹೊರತು ಪಡಿಸಿದರೆ …
Read More »ಮಹಾಶಿವರಾತ್ರಿಯ ದಿನವೇ ಅಗಲಿದ ಮಹಾ ತಾಯಿ
ಬೆಳಗಾವಿ: ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಚ. ಅಂಗಡಿ (92) ಗುರುವಾರ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಸ್ವಗ್ರಾಮವಾದ ಬೆಳಗಾವಿ ತಾಲೂಕಿನ ಕೆ ಕೆ ಕೊಪ್ಪ ಗ್ರಾಮದಲ್ಲಿ ಇಂದು ಸಂಜೆ ನಡೆಯಲಿದೆ. ಸೋಮವ್ವ ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಐವರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವಿದೆ
Read More »ಬೆಳಗಾವಿಯ ನಕಲಿ ED ಖಿಲಾಡಿ,ಸಪಳೆ,ಸಪಡ್ಲೇ….!!
ಬೆಳಗಾವಿ-ಬೆಳಗಾವಿ ನಗರದ ವಿವಿಧ ಬ್ಯಾಂಕುಗಳಿಗೆ ನಕಲಿ ED ನೋಟೀಸ್ ಕಳಿಸಿ,ಇನ್ಸುರೆನ್ಸ್ ಪಾಲಿಸಿಗಳ ಪ್ರಿಮಿಯಂ ಹಣ ತನ್ನ ಖಾತೆಗೆ ಜಮಾ ಮಾಡಿಸಿ,ಪಾಲಿಸಿದಾರರಿಗೆ ನಕಲಿ ರಸಿದಿ ನೀಡಿ ,ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ ಖತರ್ನಾಕ್ ವಂಚಕನನ್ನು ಪತ್ತೆ ಮಾಡಿ,ಬೇಡಿ ಹಾಕುವಲ್ಲಿ ಬೆಳಗಾವಿಯ ಸೈಬರ್ ಪೋಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಬೆಳಗಾವಿ ನಗರದ ಕೆಲವು ಬ್ಯಾಂಕುಗಳಿಗೆ ನಕಲಿ ED ನೋಟೀಸ್ ಬಂದಿರುವ ಬಗ್ಗೆ ಬೆಳಗಾವಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು …
Read More »ಫೇಕ್ ಸಿಡಿ ಅಂತಾ ವರದಿ ಬಂದ್ರೆ ರಮೇಶ್ ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ.- ಅಶೋಕ ಪೂಜಾರಿ
ಬೆಳಗಾವಿ-ಸಚಿವ ರಮೇಶ್ ಜಾರಕಿಹೊಳಿ ಅವರು ಲೈಂಗಿಕ ಹಗರಣದಲ್ಲಿ ಸಿಲುಕಿದ್ದು ಕೂಡಲೇ ಸಿಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ,ಈ ಸಿಡಿ ನಿಜವಾಗಿಯೂ ಫೇಕ್ ಅಂತಾ ವರದಿ ಬಂದ್ರೆ ರಮೇಶ್ ಜಾರಕಿಹೊಳಿ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಿಡಿ ನಕಲಿ ಆಗಿದ್ರೆ ಯಾರೂ ಅದಕ್ಕೆ ಬಲಿಪಶು ಆಗುವದು ಬೇಡ ,ರಾಜಕಾರಣ ಬೇರೆ ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವರ …
Read More »ಮಟಕಾ ಅಡ್ಡೆ ಮೇಲೆ ರೇಡ್ ಇಬ್ಬರು ಅರೆಸ್ಟ್..
ಬೆಳಗಾವಿ- ಮಟಕಾ ದಂಧೆಯ ವಿರುದ್ದ ಬೆಳಗಾವಿ ಪೋಲೀಸರ ಕಾರ್ಯಾಚರಣೆ ಮುಂದುವರೆದಿದ್ದು,ಇವತ್ತು ಹಿರೇಬಾಗೇವಾಡಿಯ ಮಟಕಾ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೋಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಿರೇಬಾಗೇವಾಡಿ ಗ್ರಾಮದ ಬಸ್ ಸ್ಟ್ಯಾಂಡ್ ಬಳಿ ಮಟಕಾ ದಂಧೆ ನಡೆಸುತ್ತಿದ್ದ ಶಾರೂಕ್ ಮುಸ್ತಾಕ ಅತ್ತಾರ್ (24) ಮತ್ತು ಮಹ್ಮದಲಿ ಗೌಸಸಾಬ್ ಸನದಿ (36) ಎಂಬಾತರನ್ನು ಬಂಧಿಸಿ 7560 ರೂಗಳನ್ನು ವಶಕ್ಕೆ ಪಡೆದಿದ್ದು, ಬುಕ್ಕಿ ಶೆಹಬಾಜ್ ತಿಗಡಿ ಎಂಬಾತ ಪರಾರಿಯಾಗಿದ್ದಾನೆ. ಎಂದು ಪೋಲೀಸ್ ಪ್ರಕಟಣೆಯಲ್ಲಿ …
Read More »ಕಸ ಸಂಗ್ರಹಣೆಗೆ ಬೆಳಗಾವಿಗೆ ಬಂದಿವೆ, 35 ಹೊಸ, ಅಟೋ ಟಿಪ್ಪರ್..
ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ವ್ಯವಸ್ಥಿತವಾಗಿ ಕಸ ಸಂಗ್ರಹ ಮಾಡಲು,ಬೆಳಗಾವಿ ಮಹಾನಗರ ಪಾಲಿಕೆ ಸುಧಾರಿತ ಅಟೋ ಟಿಪ್ಪರ್ ಗಳನ್ನು ಖರೀಧಿ ಮಾಡಿದೆ. 14 ನೇಯ ಹಣಕಾಸು ಯೋಜನೆಯ,2.75 ಕೋಟಿ ರೂ ಅನುದಾನದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ 35 ಟಿಪ್ಪರ್ ಗಳನ್ನು ಖರೀಧಿ ಮಾಡಿದ್ದು 35 ಟಿಪ್ಪರ್ ಗಳು ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ಪಾರ್ಕ್ ಆಗಿವೆ. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಅವರು ಬೆಳಗಾವಿ ಮಹಾನಗರದಲ್ಲಿ ವ್ಯೆವಸ್ಥಿತವಾದ ಕಸ ಸಂಗ್ರಹಕ್ಕೆ …
Read More »