ಬೆಳಗಾವಿ:ಕೇಂದ್ರ ರೈಲ್ವೆ ಇಲಾಖೆ ಸಚಿವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆಗೆ ಉಪ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಆದರೆ ಬಿಜೆಪಿ ಪಾಳೆಯದಲ್ಲಿ ದಿನಕ್ಕೊಂದು ಹೆಸರು ಕೇಳಿ ಬರುತ್ತಿವೆ. ಇದೀಗ ಬೆಳಗಾವಿ ಬಿಜೆಪಿ ಟಿಕೆಟ್ ನಗರದ ಖ್ಯಾತ ವೈದ್ಯ ಹಾಗೂ ವಿಜಯಾ ಆರ್ಥೋ ಆಸ್ಪತ್ರೆ ಮುಖ್ಯಸ್ಥ ಡಾ. ರವಿ ಪಾಟೀಲ ಅವರಿಗೆ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಕಾವು …
Read More »ಮಗ್ಗಕ್ಕೆ ನೇಣು ಬಿಗಿದುಕೊಂಡು ನೇಕಾರನ ಆತ್ಮಹತ್ಯೆ..
ಬೆಳಗಾವಿ-ಕೊರೋನಾ ಮಹಾಮಾರಿ ಪ್ರಕೋಪದಿಂದ ಅದೆಷ್ಟು ಬದುಕುಗಳು ಬೀದಿಗೆ ಬಂದಿವೆ ಅನ್ನೋದು ಲೆಕ್ಕವೇ ಇಲ್ಲ ,ಬೆಳಗಾವಿಯ ನೇಕಾರನೊಬ್ಬ ಲಾಕ್ ಡೌನ್ ನಿಂದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿದ್ದಲಿಂಗೇಶ್ವರ ಗಂಗಪ್ಪ ಹೊರಕೇರಿ ವಯಸ್ಸು: 47 ವರ್ಷ ಸಾ: ತಗ್ಗಿನಗಲ್ಲ ವಡಗಾವಿ ಬೆಳಗಾವಿ ಈತನು ಮಗ್ಗದ ಹಿಂದಿನ ಸಲಾಕೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ್ಗದ ಕೆಲಸದ ಸಲುವಾಗಿ ಮತ್ತು ಮನೆಯ ಕೆಲಸದ ಸಲುವಾಗಿ ಬೆಳಗಾವಿ ಬಿಎಸ್‌ಎಸ್ ಮೈಕ್ರೋ ಪೈನಾನ್ಸ್ …
Read More »ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅಂತಾ ನಾವು ಹೇಳಕ್ಕಾಗಲ್ಲ…
ಬೆಳಗಾವಿ-ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅಂತಾ ನಾವು ಹೇಳಕ್ಕಾಗಲ್ಲ ಎಂದು ಬೆಳಗಾವಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವಕುಮಾರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 38,57,982 ಮತದಾರರು ಇದ್ದಾರೆ, 19,52,160 ಪುರುಷ, 19,00,822 ಮಹಿಳಾ ಮತದಾರರು ಇದ್ದಾರೆ, 19,836 ಸೇವಾ ಮತದಾರರು ಇದರಲ್ಲಿ 354 ಮಹಿಳಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡ ಅವರು,ಮತದಾರರ ಪಟ್ಟಿಯಲ್ಲಿ …
Read More »ಹಲಗಾ- ಮಚ್ಛೆ, ಬೈಪಾಸ್ ಕಾಮಗಾರಿ,ಅಡ್ಡ ಮಲಗಿದ ರೈತರು
ಬೆಳಗಾವಿ-ಬೆಳಗಾವಿ ನಗರದಲ್ಲಿ ವಾಹನ ದಟ್ಟನೆ ನಿಯಂತ್ರಿಸಲು,ಬೆಳಗಾವಿಯಿಂದ ಗೋವಾಕ್ಕೆ ಹೋಗಲು ಅನಕೂಲವಾಗಲೆಂದು,ಬೆಳಗಾವಿ ನಗರದ ಟ್ರಾಫಿಕ್ ಡೈವೋರ್ಟ್ ಮಾಡುವ ಉದ್ದೇಶಕ್ಕಾಗಿ ಹಲಗಾ-ಮಚ್ಛೆ ಬೈ ಪಾಸ್ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಗೆ ರೈತರು ತೀವ್ರ ವಿರೋಧ ವ್ಯೆಕ್ತ ಪಡಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಬಂದ ಜೆಸಿಬಿ ಎದುರು ರೈತರು ಮಲಗಿ ಪ್ರತಿಭಟನೆ ನಡೆಸುತ್ತಿದ್ದಾರೆ.ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ಬಳಿ ಪ್ರತಿಭಟನೆ ನಡೆಯುತ್ತಿದೆ. ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಇದ್ದರೂ ಕಾಮಗಾರಿ ನಡೆಸುತ್ತಿದ್ದೀರಿ ಎಂದು ರೈತರಯ ಆಕ್ರೋಶ ವ್ಯೆಕ್ತಪಡಿಸಿದ್ದು,ಸ್ಥಳದಲ್ಲಿ …
Read More »ಬೆಳಗಾವಿಯಲ್ಲಿ ನಟಿ ಕಂಗನಾ ವಿರುದ್ಧ ಕಂಪ್ಲೇಂಟ್….
ಬೆಳಗಾವಿ-ರೈತರನ್ನು ಉಗ್ರವಾದಿಗಳು ಎಂದು ನಟಿ ಕಂಗನಾ ರಣಾವತ್. ಹೇಳಿಕೆ ನೀಡಿದ್ದು, ಬೆಳಗಾವಿಯ ವಕೀಲರೊಬ್ಬರು,ಬಾಲಿವುಡ್ ನಟಿ ಕಂಗನಾ ರಣಾವತ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ನಟಿ ಕಂಗನಾ ವಿರುದ್ಧ,ವಕೀಲ ಹರ್ಷವರ್ಧನ ಪಾಟೀಲ್ ಪೋಲೀಸರಿಗೆ ದೂರು ನೀಡಿದ್ದಾರೆ.ಸದ್ಯ ಟಿಳಕವಾಡಿ ಪೊಲೀಸರು ದೂರು ಸ್ವೀಕರಿಸಿದ್ದು ನಟಿ ಕಂಗನಾ ವಿರುದ್ಧ ತಕ್ಷಣ FIR ದಾಖಲಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಸೆಕ್ಷನ್ 153, 154A, 503, 504, 505(1), 505(B), 505(C), …
Read More »ಮರಾಠಿ ವಿದ್ಯಾರ್ಥಿಗಳ ಜೊತೆ, ನಾಡಗೀತೆ ಹಾಡಿದ ಮಿನಿಸ್ಟರ್….!!
ಬೆಳಗಾವಿ- ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಬೆಳಗಾವಿಯ ಗಡಿಯಲ್ಲಿರುವ,ಮರಾಠಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ರು ಮೂರು ಸರ್ಕಾರಿ ಮರಾಠಿ ಶಾಲೆಗಳಿಗೆ ಭೇಟಿ ನೀಡಿದ ಮಿನಿಸ್ಟರ್ ಸುರೇಶ್ ಕುಮಾರ್ ,ಇದೇ ಮೊದಲ ಬಾರಿಗೆ ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.,ಜಾಂಬೋಟಿ, ನಂದಗಡ, …
Read More »ಇಸ್ಪೀಟ್ ಆಡುವಾಗ ಪೋಲೀಸ್ರು ಬಂದ್ರು ಅಂತಾ ನದಿಗೆ ಜಂಪ್ ಮಾಡಿದ ಇಬ್ಬರು ನಾಪತ್ತೆ…
ಬೆಳಗಾವಿ-ಪೊಲೀಸರಿಗೆ ಹೆದರಿ ನದಿ ಹಾರಿದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಹೊರ ವಲಯದ ಮಲಪ್ರಭಾ ನದಿಯಲ್ಲಿ ನಡೆದಿದೆ. ನಿನ್ನೆ ಸಂಜೆ ನದಿ ತಟದಲ್ಲಿ ಕೆಲವರು ಇಸ್ಪೀಟ್ ಆಡುತ್ತಿದ್ದರು, ಆಗ ಯಾರೋ ಪೊಲೀಸರ ಬಂದ್ರು ಅಂತಾ ಕೂಗಿದ್ದಾರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಆರು ಜನರು ನದಿಗೆ ಹಾರಿದ್ದಾರೆ ಈ ಆರು ಜನರಲ್ಲಿ ನಾಲ್ವರು ದಡ ಸೇರಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. ಆರು ಜನರಲ್ಲಿ ಮಂಜು ಬಂಡಿವಡ್ಡರ 30 ವಯಸ್ಸು, ಸಮೀರ …
Read More »ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ……!!!
ಬೆಳಗಾವಿ- ಶಿಕ್ಷಣ ಇಲಾಖೆಯ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಸೋಮವಾರ(ಫೆ.8) ಖಾನಾಪುರದಲ್ಲಿ ಶಾಲೆಗಳಿಗೆ ಭೇಟಿ ನೀಡಿ ಗಡಿಭಾಗದ ಶಾಲೆಗಳ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಲಿದ್ದಾರೆ. ಬಳಿಕ 12.30 ಗಂಟೆಗೆ ಬಿಇಓ ಕಚೇರಿಯಲ್ಲಿ ಗಡಿಭಾಗದ ಶಾಲೆಗಳ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ನಡೆಸಲಿದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗಡಿಭಾಗದ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಸಂತಸದ ಸಂಗತಿಯಾಗಿದೆ. ಗಡಿಭಾಗದ ಶಾಲೆಗಳ ಸುಧಾರಣೆ ಆಗಬೇಕು ಈ ಶಾಲೆಗಳಿಗೆ …
Read More »ಮೂರು ವರ್ಷದ ಹಿಂದಿನ ಲವ್….ಮ್ಯಾರೇಜ್… ಇವತ್ತು ಡ್ಯಾಮೇಜ್…!!!
ಬೆಳಗಾವಿ- ಮೂರು ವರ್ಷದ ಹಿಂದೆ ಲವ್ ಮಾಡಿ,ಮಂದಿರದಲ್ಲಿ ಮಾಂಗಲ್ಯ ಕಟ್ಟಿ ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಪ್ರಿಯಕರ ಈಶ್ವರ ಇಂದು ಜೈಲು ಪಾಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಈಶ್ವರ ಪಂಚನ್ನವರ ಎಂಬಾತ ಮೂರು ವರ್ಷದ ಹಿಂದೆ 14 ವರ್ಷದ ಅಪ್ರಾಪ್ತ ಬಾಲಕಿಯ ಜೊತೆಗೆ ಲವ್ ಮಾಡಿ ಕಾಕತಿಯ ಸಿದ್ದೇಶ್ವರ ಮಂದಿರದಲ್ಲಿ ಮದುವೆ ಮಾಡಿಕೊಂಡಿದ್ದ ಅಂದು ಮದುವೆಯಾಗಿದ್ದ ಕಳೆದ ಮೂರು ವರ್ಷಗಳಿಂದ ಅಪ್ರಾಪ್ತ ಬಾಲಕಿಯ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದ ಈಶ್ವರನ …
Read More »ಬೆಳಗಾವಿ ಈಗ ಮಿನಿ ಗೋವಾ….ದೋಸ್ತೀ..ಮಸ್ತೀ…ಕುಸ್ತೀ.,.!!
ಬೆಳಗಾವಿ-ಫೇಸ್ ಬುಕ್ ,ವ್ಯಾಟ್ಸಪ್, ಮತ್ತು ಇನ್ಸಟಾಗ್ರಾಮಗಳಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಈ ಅಕೌಂಟ್ ನಲ್ಲಿ ಯುವತಿಯರ ಪೋಟೋ ಹಾಕಿ ಯುವಕರ ಜೊತೆ ಚಾರ್ಟಿಂಗ್ ಮಾಡಿ ವ್ಯೆವಸ್ಥಿತವಾಗಿ ಸೆಕ್ಸ್ ದಂಧೆ ಮಾಡುತ್ತಿದ್ದ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ. ನಿನ್ನೆ ಶನಿವಾರ ಬೆಳಗಾವಿಯ ಸೈಬರ್ ಕ್ರೈಂ ಬ್ರ್ಯಾಂಚಿನ ಇನೆಸ್ಪೆಕ್ಟರ್ ಗಡ್ಡೇಕರ ಅವರು ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿನ ಮಸ್ಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿ,ಮೂವರು ಯುವತಿಯರನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದರು. ಶನಿವಾರ …
Read More »