Breaking News

LOCAL NEWS

50 ಕೋಟಿ ಘೋಷಣೆ ಆಗಿದೆ,ಆರ್ಡರ್ ಆಗಿಲ್ಲ- ನಿಂಬಾಳ್ಕರ್

ಬೆಳಗಾವಿ- ಜಾತಿಗಳನ್ನು ಮೀರಿಸಿ ಚುನಾವಣೆಗಳು ನಡೆಯಬೇಕು,ಸರ್ಕಾರ ಜಾತಿಗಳನ್ನು ಆಧರಿಸಿ ಚುನಾವಣೆ ಮಾಡುತ್ತಿದೆ.ಜಾತಿಗೊಂದು ಪ್ರಾಧಿಕಾರ ರಚನೆ ಮಾಡುತ್ತಿದೆ.ಮರಾಠಾ ಪ್ರಾಧಿಕಾರಕ್ಕೆ 50 ಕೋಟಿ ಕೊಡ್ತೇವಿ ಅಂತಾ ಸರ್ಕಾರ ಕೇವಲ ಘೋಷಣೆ ಮಾಡಿದೆ,ಇನ್ನೂ ಆರ್ಡರ್ ಆಗಿಲ್ಲ ಇದೊಂದು ಚುನಾವಣೆಗಾಗಿ ಮಾಡಿದ ಗಿಮಿಕ್ ಎಂದು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಆರೋಪಿಸಿದ್ದಾರೆ. ಧಾರವಾಡದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ 50 ಕೋಟಿ ಘೋಷಣೆ ಮಾಡಿದೆ,ಆದ್ರೆ ಈ ಕುರಿತು ಇನ್ನುವರೆಗೆ ಸರ್ಕಾರ …

Read More »

ಬೆಳಗಾವಿ ಪೋಲೀಸ್ ಆಯುಕ್ತರ ಕಚೇರಿ ಕಟ್ಟಡಕ್ಕೆ ಶುಭ ಮಂಗಳ…

ಬೆಳಗಾವಿ- ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೋಮವಾರ ರಾತ್ರಿ 10 ಗಂಟೆಗೆ ಬೆಳಗಾವಿಗೆ ಆಗಮಿಸಿ ಬೆಳಗಾವಿಯಲ್ಲೇ ಮೊಕ್ಕಾಂ ಮಾಡಲಿದ್ದಾರೆ ಸೋಮವಾರ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಿ,ಮಂಗಳವಾರ ಬೆಳಿಗ್ಗೆ ಬೆಳಗಾವಿ ನಗರದಲ್ಲಿ ನಗರ ಪೋಲೀಸ್ ಆಯುಕ್ತರ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ‌. ಬೆಳಗಾವಿಯ RLS ಕಾಲೇಜಿನ ಹಿಂಬದಿಯಲ್ಲಿ ಪೋಲೀಸ್ ಲೈನ್ ನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರೂ ಸಹ,ಸ್ಥಳ ನಿಗದಿ ಮಾಡುವಲ್ಲಿ …

Read More »

ಬೆಳಗಾವಿಯಲ್ಲಿ ಎರಡು ಕಡೆ ಸಿಐಡಿ ಅಧಿಕಾರಿಗಳ ದಾಳಿ

ಬೆಳಗಾವಿ- ಬೆಳಗಾವಿ ನಗರದಲ್ಲಿ ಎರಡು ಕಡೆ ದಾಳಿ ನಡೆಸಿರುವ ಸಿಐಡಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ಎರಡು ಬೈಕ್ ಗಳನ್ನು ವಶಕ್ಕೆ ಪಡೆದು ಅಪಾರ ಪ್ರಮಾಣದ ಗಾಂಜಾ ಜಪ್ತು ಮಾಡಿದ್ದಾರೆ. ಸಿಐಡಿ ಬೆಳಗಾವಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ .ಎಸ್.ಕೆ.ಕುರಗೊಡಿ, ರವರಿಗೆ ಬಂದ ಮಾಹಿತಿ ಮೇರೆಗೆ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣಾ ಸರಹದ್ದಿನ ಅಯೋಧ್ಯ ನಗರದಲ್ಲಿರುವ ಯು.ಕೆ.27 ಹೋಟೆಲ್ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆಕೀಬ್ ಜಾವೀದ್ ದುನಿಯಾರ್ ತಂದೆ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ ಆರಂಭ

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಸಾಂಬ್ರಾ ಜಿಪಂ ಸದಸ್ಯ ಬೆಳಗಾವಿ- ಸಾಂಬ್ರಾ ಜಿಪಂ ಕ್ಷೇತ್ರದ ಜಿಪಂ ಸದಸ್ಯ,ಸತೀಶ್ ಜಾರಕಿಹೊಳಿ ಅವರ ಬೆಂಬಲಿಗ ಕೃಷ್ಣಾ ಅನಿಗೋಳಕರ ಇಂದು ಜಿಪಂ ಸದಸ್ಯ ಸ್ಥಾನಕ್ಕೆ ಜೊತೆಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲವಾರು ಜನ ನಾಯಕರು ಸೇರಿ ನಾವು,ಕಾಂಗ್ರೆಸ್ ಪಕ್ಷವನ್ನು ಬಿಟ್ಟು,ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುವ ತೀರ್ಮಾಣ ಕೈಗೊಂಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ …

Read More »

ಕಳಸಾ ಬಂಡೂರಿ ನಾಳೆ ಬೆಳಗಾವಿಯಲ್ಲಿ ಮಹತ್ವದ ಸಭೆ…

ಬೆಳಗಾವಿ- ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ನಿರಂತರ ಪ್ರಯತ್ನ ನಡೆಸಿದ್ದು ಆದಷ್ಟು ಬೇಗನೆ ಈ ಯೋಜನೆಯ ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದು ನಾಳೆ ಸೋಮವಾರ ಈ ಯೋಜನೆಯ ಕುರಿತು ಮಹತ್ವದ ಸಭೆ ನಡೆಸಲಿದ್ದಾರೆ. ಕಳಸಾ ಬಂಡೂರ ಮತ್ತು ಗಟ್ಟಿ ಬಸವಣ್ಣ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಮತ್ತು ಇತರೆ ನೀರಾವರಿ ಯೋಜನೆಗಳಿಗೆ ಅರಣ್ಯ ಇಲಾಖೆಯ ತೀರುವಳಿ ಪಡೆಯುವ ಕುರಿತು ಉನ್ನತ ಮಟ್ಟದ ಸಭೆ ಜಲಸಂಪನ್ಮೂಲ …

Read More »

ಬೆಳಗಾವಿಯ ತಾಪಮಾನ ಇಂದು A/C ಗಿಂತಲೂ ಕೋಲ್ಡ್

ಕೂಲರ್ ಬೆಳಗಾವಿಯ ವೆದರ್….!!!! ಬೆಳಗಾವಿ- ನಿವಾರ್ ಚಂಡಮಾರುತದ ಎಫೆಕ್ಟ್ ಇಂದು ಬೆಳಗಾವಿಯ ವಾತಾವರಣವನ್ನೇ ಬದಲಿಸಿತ್ತು,ಬೆಳಿಗ್ಗೆಯಿಂದಲೇ ಶೀತಗಾಳಿ ಬೀಸುವ ಜೊತೆಗೆ ದಿನವಿಡೀ ಮಂಜಿನ ಮುಸುಕಿನಲ್ಲಿ ಕುಂದಾನಗರಿ ಮುಚ್ಚಿ ಹೋಗಿತ್ತು ನಿವಾರ್ ಚಂಡಮಾರುತ ಬೆಳಗಾವಿಯ ಬಿಸಿಲು ಢಮಾರ್ ಮಾಡಿತ್ತು ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಸೂರ್ಯನ ದರ್ಶನ ಆಗಲಿಲ್ಲ, ಮೋಡ ಕವಿದ ವಾತಾವರಣದಿಂದ ಬೆಳಗಾವಿ ಹೊರಗಡೆ ಬರಲು ಸಾದ್ಯ ವಾಗಲೇ ಇಲ್ಲ. ಬೆಳಗಾವಿ ನಗರದಲ್ಲಿ ಇಂದು ಕಾಶ್ಮೀರ್ ಕೋಲ್ಡ್ ಅನುಭವ ಆಯಿತು,ಇಂದಿನ ತಾಪಮಾನ ಇಂದು …

Read More »

ಬೆಳಗಾವಿಯಲ್ಲಿ ಬೈಕ್ ಗೆ ಬಸ್ ಡಿಕ್ಕಿ ಸ್ಥಳದಲ್ಲೇ ವಿದ್ಯಾರ್ಥಿ ಸಾವು

ಬೆಳಗಾವಿ- ಬೆಳಗಾವಿ ನಗರದ ಭಾಗ್ಯ ನಗರದ ಬಳಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬೆಳಗಾವಿಯ ಖ್ಯಾತ ಚಾರ್ಟೆಡ್ ಅಕೌಂಟಂಟ್ ಮನೋಜ ಹುಯಿಲಗೋಳ ಅವರ ಪುತ್ರ 18 ವರ್ಷದ ತನಯ ಈ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.ಈತ ಮನೋಜ ಅವರ ಏಕೈಕ ಪುತ್ರನಾಗಿದ್ದ ಎಂದು ತಿಳಿದು ಬಂದಿದೆ ಟ್ರಾಫಿಕ್ ಸೌತ್ ನಲ್ಲಿ ಪ್ರಕರಣ ದಾಣಖಲಾಗಿದೆ. ತನಯ ಬೈಕ್ ಮೇಲೆ ಹೊರಟಿರುವಾಗ ಬಸ್ ಡಿಕ್ಕಿ …

Read More »

ಬೆಳಗಾವಿಯಲ್ಲಿ ನಾವು ಮುಸ್ಲೀಂ ರಿಗೆ ಟಿಕೆಟ್ ಕೊಡುವದಿಲ್ಲ- ಈಶ್ವರಪ್ಪ

ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಾವು ಬೇಕಾದ್ರೆ ಶಂಕರಾಚಾರ್ಯ ಶಿಷ್ಯರಿಗೆ, ಚೆನ್ನಮ್ಮಳ ಶಿಷ್ಯ ಇಲ್ಲವೇ ರಾಯಣ್ಣನ ಶಿಷ್ಯರಿಗೆ ಟಿಕೆಟ್ ನೀಡುತ್ತೇವೆ. ಆದರೆ ಮುಸ್ಲಿಂ ಸಮಾಜಕ್ಕೆ ಬೆಳಗಾವಿಯಲ್ಲಿ ನಾವು ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದರು. ಕುರುಬ ಸಮಾಜದ ಯಾವೊಬ್ಬ ಸಂಸದ ಇಲ್ಲ ಎಂಬ ಪ್ರಶ್ನೆಗೆ ಕಾಂಗ್ರೆಸಿನವರು ಎಷ್ಟೋ ಜನರಿಗೆ …

Read More »

ರಮೇಶ್ ಜಾರಕಿಹೊಳಿ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆದಿದ್ದರಿಂದಲೇ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ.

ಬೆಳಗಾವಿ- ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆದಿದ್ದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ಅವರು ಅವರನ್ನು ನಂಬಿದವರಿಗೆ ಮಂತ್ರಿ ಸ್ಥಾನ ಕೊಡಿಸಲು ಲಾಭಿ ಮಾಡುವದರಲ್ಲಿ ತಪ್ಪಿಲ್ಲ.ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನಡೆಸಲು ಅವರು ಪ್ರಯತ್ನ ಮಾಡುವದರಲ್ಲಿ ತಪ್ಪಿಲ್ಲ,ಕೆಲವು ಶಾಸಕರು ಬಿಜೆಪಿಗೆ ಬಂದು ಸರ್ಕಾರ ರಚನೆಗೆ ತ್ಯಾಗ …

Read More »

ಸಿಎಂ ರಾಜಕೀಯ ಕಾರ್ಯದರ್ಶಿ,ಸಂತೋಷ ಆತ್ಮಹತ್ಯೆಗೆ ಯತ್ನ

ಬೆಂಗಳೂರು- ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ. ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ನಡೆದಿದೆ ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು,ಅವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ನಿದ್ದೆ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥರಾಗಿರುವ ಅವರನ್ನು ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎನ್ ಆರ್ ಸಂತೋಷ ಆತ್ಮಹತ್ಯೆಗೆ ಯತ್ನಿಸಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ರಾಮಯ್ಯ …

Read More »