ಬೆಳಗಾವಿ- ಬೆಳಗಾವಿ ನಗರದ ಶಹಾಪೂರ ಪ್ರದೇಶದ ಆಚಾರಿಗಲ್ಲಿಯಲ್ಲಿ ವಯಸ್ಕರ ಅಕ್ಕ ಮತ್ತು ತಮ್ಮ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನದ ಹಿಂದೆ ಆಚಾರಿಗಲ್ಲಿಯ ಮನೆಯಲ್ಲಿ ಅಕ್ಕ ಮತ್ತು ತಮ್ಮ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ಮನೆಯಿಂದ ದುರ್ವಾಸನೆ ಬಂದು,ಪ್ರಕರಣ ಇವತ್ತು ಬೆಳಕಿಗೆ ಬಂದಿದೆ. 61 ವರ್ಷ ವಯಸ್ಸಿನ ಯದುಕುಲೇಶ ನಾಯಿಕ,70 ವರ್ಷದ ಪಂಕಜಾ ರಾಮಚಂದ್ರ ನಾಯಿಕ,ಆತ್ಯಹತ್ಯೆ ಮಾಡಿಕೊಂಡಿದ್ದು,ಇಬ್ಬರೂ ಅವಿವಾಹಿತರಾಗಿದ್ದರು,ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ …
Read More »ಬೆಳಗಾವಿ ಮಾರ್ಕೆಟ್ ಎಸಿಪಿಯಾಗಿ ಸದಾಶಿವ ಕಟ್ಟೀಮನಿ ಅಧಿಕಾರ ಸ್ವೀಕಾರ
ಬೆಳಗಾವಿ- ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮಣಿ ಅವರ ವರ್ಗಾವಣೆಯಾಗಿದ್ದು ಅವರ ವರ್ಗಾವಣೆಯಿಂದ ತೆರುವಾದ ಸ್ಥಾನಕ್ಕೆ ಮಾರ್ಕೆಟ್ ಎಸಿಪಿಯಾಗಿ ಸದಾಶಿವ ಕಟ್ಟೀಮನಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇಂದು ನಾರಾಯಣ ಭರಮಣಿ ಅವರು ಸದಾಶಿವ ಕಟ್ಟೀಮನಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು ನಾರಾಯಣ ಭರಮಣಿ ಅವರನ್ನು ಸರ್ಕಾರ ಖಾನಾಪೂರ ತರಬೇತಿ ಶಾಲೆಗೆ ವರ್ಗಾವಣೆ ಮಾಡಿದೆ. ಮಾರ್ಕೆಟ್ ಎಸಿಪಿಯಾಗಿ ನಾರಾಯಣ ಭರಮಣಿ ಅವರು ಬೆಳಗಾವಿ ಮಹಾನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡುವಲ್ಲಿ ಪ್ರಮುಖ …
Read More »ಪೀರನವಾಡಿಯ ಜಂಕ್ಷನ್ ಈಗ ಛತ್ರಪತಿ ಶಿವಾಜಿ ಮಹಾರಾಜ್ ಸರ್ಕಲ್……!
ಬೆಳಗಾವಿ- ಜಿಲ್ಲಾಡಳಿದ ರಾಜಿ ಸಂಧಾನದ ಒಪ್ಪಂದದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಇಂದು ಪೀರನವಾಡಿ ಜಂಕ್ಷನ್ ನಲ್ಲಿ ಛತ್ರಪತಿ ಶಿವಾಜಿ ಸರ್ಕಲ್ ಎಂದು ಕನ್ನಡ,ಮರಾಠಿ ಎರಡೂ ಭಾಷೆಯಲ್ಲಿರುವ ಫಲಕವನ್ನು ಅನಾವರಣಗೊಳಿಸಿದರು. ಇಂದು ಬೆಳಿಗ್ಗೆಯೇ ಜಮಾಯಿಸಿದ ನೂರಾರು ಶಿವಾಜಿ ಅಭಿಮಾನಿಗಳು,ಪಟಾಕಿ ಸಿಡಿಸಿ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಹಾಗೂ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಫಲಕವನ್ನು ಅನಾವರಣ ಮಾಡಿದ್ರು ಪೀರನವಾಡಿ ನಾಕಾ ಬಳಿ ‘ಶಿವಾಜಿ ಚೌಕ್’ ಅಂತಾ ನಾಮಫಲಕ ಅನಾವರಣ ಮಾಡಲಾಯಿತು,9 X …
Read More »ಪೀರಣವಾಡಿ ಜಂಕ್ಷನ್ ನಲ್ಲಿ ನಾಳೆ ಮತ್ತೊಂದು ಫಂಕ್ಷನ್…..!!!
ಬೆಳಗಾವಿ- ಬೆಳಗಾವಿಯ ಪೀರನವಾಡಿಯಲ್ಲಿ ಮೂರ್ತಿ ವಿವಾದ ಸುಖಾಂತ್ಯಗೊಂಡಿದೆ.ರಾಜಿ ಸಂಧಾನದ ಸಭೆಯಲ್ಲಿ ನಿರ್ಧಾರವಾದಂತೆ,ಈ ಸರ್ಕಲ್ ಛತ್ರಪತಿ ಶಿವಾಜಿ ಮಹಾರಾಜ್ ಸರ್ಕಲ್ ಎಂದು ನಾಮ ಫಲಕ ಅಳವಡಿಸಲು ಶಿವಭಕ್ತರು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಬೆಳಗಾವಿಯ ಎಲ್ಲ ಶಿವಾಜಿ ಅಭಿಮಾನಿಗಳು ನಾಳೆ ನಡೆಯುವ ಫಲಕ ಅನಾವರಣ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಎನ್ನುವ ಸಂದೇಶಗಳು,ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪೀರನವಾಡಿ ಜಂಕ್ಷನ್ ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾನೆಯಾದ ಬಳಿಕ ADGP ಅಮರ ಕುಮಾರ್ …
Read More »ಗೋಕಾಕ್ ಟೈಗರ್ ಗ್ಯಾಂಗ್,ಹಲ್ ಚಲ್ ನೋಡಿದ್ರೆ ಗಾಬರಿ….!
ಗೋಕಾಕ: ಬೆಳಗಾವಿ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಳೆದ ನಾಲ್ಕು ತಿಂಗಳ ಹಿಂದೆ ನಡೆದಿದ್ದ ದಲಿತ ಯುವಕನ ಕೊಲೆ ಪ್ರಕರಣದ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿ ಆರೋಪಿಗಳ ಮನೆಗಳ ಮೇಲೆ ಸರ್ಚ್ ವಾರಂಟ್ ಜೊತೆಗೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಮಾರಕಾಸ್ತ್ರ, ಮಾದಕ ವಸ್ತು ಸೇರಿದಂತೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ …
Read More »ಗೂಡ್ಸ್ ಕ್ಯಾರಿಯರ್ ನಲ್ಲಿ ಲಿಕ್ಕರ್ ಕ್ಯಾರಿ,ಇವರನ್ನು ಬೇಟೆಯಾಡಿದ ಇಲಾಖೆ ಅಬಕಾರಿ….
ಬೆಳಗಾವಿ- ಲಕ್ಷಾಂತರ ರೂ ಮೌಲ್ಯದ ಮದ್ಯವನ್ನು ಗೋವಾದಿಂದ ಔರಂಗಾಬಾದ್ ಗೆ ಸಾಗಿಸುತ್ತಿದ್ದ ಗೂಡ್ಸ್ ಕ್ಯಾರಿಯರ್ ವಾಹನವನ್ನು ಕಣಕುಂಬಿ ಚೆಕ್ ಪೋಸ್ಟ್ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುಮಾರು ಐದುವರೆ ಲಕ್ಷ ರೂ ಮೌಲ್ಯದ ಗೋವಾದ ಮದ್ಯವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೋವಾದಿಂದ ಬೆಳಗಾವಿ ಮಾರ್ಗವಾಗಿ ಗೋವಾ ಮದ್ಯ ಮಹಾರಾಷ್ಟ್ರದ ಔರಂಗಾಬಾದ್ ನಗರಕ್ಕೆ ಸಾಗಿಸುತ್ತಿರುವಾಗ ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ.
Read More »ಬೆಳಗಾವಿಯಲ್ಲಿ ಭಕ್ತಿಯಿಂದ ವಿಘ್ನೇಶ್ವರನಿಗೆ ವಿದಾಯ…
ಬೆಳಗಾವಿ- ಬೆಳಗಾವಿ ಬೆಳಗಾವಿಯಲ್ಲಿ ಯಾವ ರೀತಿ ಗಣೇಶ ಉತ್ಸವ ಯಾವ ರೀತಿ ನಡೆಯುತ್ತದೆಯೋ ದೇಶದ ಯಾವ ಭಾಗದಲ್ಲೂ ಆ ರೀತಿ ಉತ್ಸವ ನಡೆಯೋದಿಲ್ಲ ಯಾಕಂದ್ರೆ ಮಹಾರಾಷ್ಟ್ರದ ಪಕ್ಕದಲ್ಲಿರುವ ಬೆಳಗಾವಿ ಮಹಾನಗರದಲ್ಲಿ ಅತ್ಯಂತ ಅದ್ದೂರಿಯಾಗಿ ಉತ್ಸವ ಆಚರಿಸುತ್ತಾರೆ ಅದು ಮಹಾರಾಷ್ಟ್ರದ ಜನರಿಗೂ ಗೊತ್ತು ಇಲ್ಲಿಯ ಗಣೇಶ ವಿಸರ್ಜನೆ ಅಹೋರಾತ್ರಿ 40 ಗಂಟೆಗಳಗಳ ಕಾಲ ನಡೆಯುತ್ತದೆ. ಪ್ರತಿ ವರ್ಷ ಯಾವ ಸಮಯಕ್ಕೆ ಗಣೇಶ ವಿಸರ್ಜನೆ ಆರಂಭ ವಾಗುತ್ತಿತ್ತೋ ಈ ವರ್ಷ ಆ ಸಮಯಕ್ಕೆ …
Read More »ಇಂದು ನಾರಾಯಣಗೌಡ್ರು ಬೆಳಗಾವಿಗೆ,ಪೀರಣವಾಡಿಗೆ
ಬೆಳಗಾವಿ-ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಣಗೌಡ್ರು ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ 1-00 ಗಂಟೆಗೆ ಬೆಳಗಾವಿಗೆ ಆಗಮಿಸಲಿರುವ ಅವರು, ಪೀರನವಾಡಿಯ ಛತ್ರಪತಿ ಶಿವಾಜಿ ಮಹಾರಾಜ,ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಿದ್ದಾರೆ. ಮದ್ಯಾಹ್ನ 1-00 ಗಂಟೆಗೆ ಬೆಳಗಾವಿಗೆ ಆಗಮಿಸುವ ಅವರು ಮದ್ಯಾಹ್ನ 2-00 ಗಂಟೆಗೆ ಪೀರನವಾಡಿಯಲ್ಲಿ ಇಬ್ಬರೂ ಮಹಾಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಈ ಸಂಧರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು,ಕನ್ನಡದ …
Read More »ಬೆಳಗಾವಿಯ ಶಂಕರ ಗೌಡರಿಗೆ ಮತ್ತೆ ಭಂಪರ್ ಲಾಟ್ರಿ….!
ಬೆಳಗಾವಿ-:ಬೆಳಗಾವಿ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲರು ಬಿಜೆಪಿ ಸರ್ಕಾರದಲ್ಲಿ ಲಾಟ್ರಿ ಮೇಲೆ ಲಾಟ್ರಿ ಹೊಡೆಯುತ್ತಲೇ ಬಂದಿದ್ದು,ಇವರಿಗೆ ಸರ್ಕಾರ ಉನ್ನತ ಹುದ್ದೆ ನೀಡಿ ಇಂದು ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಬೆಳಗಾವಿಯ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲರನ್ನು ಸರ್ಕಾರ ಇಂದು ಕ್ಯಾಬಿನೇಟ್ ದರ್ಜೆಯ ಸ್ಥಾನಮಾನದೊಂದಿಗೆ ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆದು ಇಂದು ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ …
Read More »ವಲಸಿಗರನ್ನು ಓಡಿಸುವ ಫೇಸ್ ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ- ವಲಸಿಗರನ್ನು ಓಡಿಸಿ ಕರ್ನಾಟಕವನ್ನು ಉಳಿಸಿ ಎಂಬ ತಲೆಬರಹದ ಫೇಸ್ ಬುಕ್ ಪೇಜ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ಹಿನ್ನಲೆಯಲ್ಲಿ ಈ ಫೇಸ್ ಬುಕ್ ಪೇಜ್ ವಿರುದ್ದ ಬೆಳಗಾವಿಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಖಡೇಬಝಾರ್ ಪೋಲೀಸ್ ಠಾಣೆಯಲ್ಲಿ ವಲಸಿಗರನ್ನು ಓಡಿಸಿ ಎಂಬ ಪೇಜ್ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಕ್ಕೆ ಪ್ರಕರಣ ದಾಖಲಾಗಿದೆ ಈ ಫೇಸ್ ಬುಕ್ ಪೇಜ್ ವಿರುದ್ದ IPC ಸೆ,505 ,153A,505/2 …
Read More »