Breaking News

LOCAL NEWS

ಬೆಳಗಾವಿಯ ಸಬ್ ರೆಜಿಸ್ಟರ್: ಕಚೇರಿ ಸೀಲ್ ಡೌನ್

ಬೆಳಗಾವಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ವಾಗುತ್ತಿದ್ದ ವಿವಾಹ‌‌ ನೋಂದಣಿ ಕಚೇರಿ ( ಸಬ್ ರಿಜಿಸ್ಟರ್ ) ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ‌ ಸೋಮವಾರ ಕೊರೋನಾ ಸೋಂಕು ದೃಢಪಟ್ಟಿದ್ದು ಪಾಲಿಕೆಯಿಂದ ಕಚೇರಿ ಸುತ್ತಲು ಸೀಲ್ ಡೌನ್ ಮಾಡಲಾಗಿದೆ. ಕೊರೋನಾ ಮಹಾಮಾರಿ ಬೆಳಗಾವಿಯಲ್ಲಿ ತನ್ನ ಕದಂಬ ಬಾಹು ಬಾಚುತ್ತಿರುವುದು ಸಾರ್ವಜನಿಕರಿಗೆ ಚಿಂತೆಗೆ ಇಡು ಮಾಡಿದೆ. ಅಲ್ಲದೆ ನಿತ್ಯ ನೂರಕ್ಕೂ ಅಧಿಕ‌ ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಜನರು …

Read More »

ಬೆಳಗಾವಿಯ ICMR ಲ್ಯಾಬ್ ಬಂದ್

ಬೆಳಗಾವಿ-ಬೆಳಗಾವಿಯ ಐಸಿಎಂಆರ್ ಲ್ಯಾಬ್‌ಗೂ ಕೊರೋನಾ ಕಾಟ ತಗಲಿದ್ದು ,ICMR ಲ್ಯಾಬ್‌ನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡ್ತಿದ್ದ ಮೂವರಿಗೆ ಸೋಂಕು ತಗಲಿದ ಪರಿಣಾಮ ಲ್ಯಾಬ್ ಬಂದ್ ಮಾಡಲಾಗಿದೆ. ಕಳೆದ ರಾತ್ರಿ ಮೂವರು ಮಹಿಳೆಯರು ಕೋವಿಡ್ ಕೇರ್ ಸೆ‌ಂಟರ್‌ಗೆ ಶಿಫ್ಟ್ ಆಗಿದ್ದಾರೆ. ರೋಗದ ಗುಣಲಕ್ಷಣ ಇರದ ಹಿನ್ನೆಲೆ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಗಿದೆ. ಬೆಳಗಾವಿಯ ಸುಭಾಷ್ ನಗರದಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಅವರನ್ನು ಶಿಪ್ಟ್ ಮಾಡಲಾಗಿದೆ. *ಕ್ಯಾಂಟೀನ್‌ನಲ್ಲಿ ಊಟ, ಉಪಹಾರ ಸೇವಿಸಿದವರಿಗೆ …

Read More »

ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’ ಅಭಿಯಾನ- ಸತೀಶ್ ಜಾರಕಿಹೊಳಿ

ಬೆಳಗಾವಿ- ಬೆಳಗಾವಿಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಹೆಚ್ಚಳವಾಗುತ್ತಿದೆ. ಬೆಳಗಾವಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕಿತ್ತೋ ಅಷ್ಟು ಸರ್ಕಾರ ಕೊಟ್ಟಿಲ್ಲ,ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’ ಅಭಿಯಾನ ಆರಂಭಿಸಬೇಕು,ಎಂದು ಸರ್ಕಾರದ ವಿರುದ್ಧ ಸತೀಶ್ ಜಾರಕಿಹೊಳಿ‌ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆಗ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌, ಮಂತ್ರಿಗಳು ಎಷ್ಟು ಸಭೆ ನಡೆಸಬೇಕಾಗಿತ್ತೋ ಅಷ್ಟು ಮಾಡಿಲ್ಲ, ಜನರಿಗೆ ಸ್ಪಂದಿಸಿಲ್ಲ, ಬಹಳಷ್ಟು ಮಂತ್ರಿಗಳು ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ, ತಮ್ಮ ಕ್ಷೇತ್ರಕ್ಕೂ ಬಂದಿಲ್ಲ, ತಮ್ಮ ಜಿಲ್ಲೆಗೂ ಬಂದಿಲ್ಲ, …

Read More »

ರಾಜು ಸೇಠ ಅವರ ಕಾರ್ಯ ನಿಜವಾಗಿಯೂ ಗ್ರೇಟ್….!

ಬೆಳಗಾವಿ- ಕೊರೋನಾಗೆ ಬೆಳಗಾವಿ ನಗರ ತತ್ತರಿಸಿ ಹೋಗಿದೆ,ಜನ ಚಿಕಿತ್ಸೆಗಾಗಿ ಅಲೆದಾಡುತ್ತಿದ್ದಾರೆ,ಬಿಪಿ,ಶುಗರ್ ಕಾಯಿಲೆಯಿಂದ ಬಳಲುತ್ತಿರುವವರ ಆರೋಗ್ಯ ಏರುಪೇರು ಆದಾಗ ಅಂತಹ ರೋಗಿಗಳಿಗೆ ತುರ್ತಾಗಿ ಚಿಕಿತ್ಸೆ ಸಿಗುತ್ತಿಲ್ಲ,ವಿಶೇಷವಾಗಿ ಉಸಿರಾಟದ ತೊಂದರೆಯಿಂದ ಬಹಳಷ್ಟು ಜನ ಮೃತಪಟ್ಟಿದ್ದನ್ನು ತೀರಾ ಹತ್ತಿರದಿಂದ ಗಮನಿಸಿರುವ ರಾಜು ಸೇಠ ವಿಶೇಷವಾದ ಸೌಲಭ್ಯವನ್ನು ಒದಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಳಗಾವಿಯ ಅಂಜುಮನ್ ಹಾಲ್ ನಲ್ಲಿ 110 ಆಕ್ಸಿಜನ್ ಸಿಲಿಂಡರ್ ಗಳ ವ್ಯೆವಸ್ಥೆ ಮಾಡಿರುವ ಅವರು ವೈದ್ಯಕೀಯ ತಂಡದೊಂದಿಗೆ ಜನರ ಮನೆ ಬಾಗಿಲಿಗೆ …

Read More »

ಸೀಲ್ ಡೌನ್ ಬ್ಯಾರಿಕೇಡ್ ಮೇಲೆ ಗೆಟ್ ವೆಲ್ ಸೂನ್…..!

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಈಗ ಸರ್ವವ್ಯಾಪಿಯಾಗಿದೆ.ಒಂದು ಏರಿಯಾ ಸೀಲ್ ಡೌನ್ ಮಾಡಿದ್ದನ್ನು ನೋಡಿ ಬೇಸರ ಪಡುವವರ ಸಂಖ್ಯೆ ಜಾಸ್ತಿ ಭಾಗ್ಯನಗರದ ಎಂಟನೇಯ ಕ್ರಾಸಿನಲ್ಲಿ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಈ ಏರಿಯಾ ಸೀಲ್ ಡೌನ್ ಮಾಡಲಾಗಿದೆ.ಇಂದು ಬೆಳಿಗ್ಗೆ ಇಲ್ಲಿಯ ಬ್ಯಾರಿಕೇಡ್ ಮೇಲೆ ನೇತಾಡುತ್ತಿರುವ ಫಲಕ ಮಾನವೀಯತೆಯ ಸಂದೇಶ ನೀಡುತ್ತಿದೆ. ಯಾರೋ ಪುಣ್ಯಾತ್ಮನೊಬ್ಬ ಬ್ಯಾರಿಕೇಡ್ ಮೇಲೆ ಗೆಟ್ ವೆಲ್ ಸೂನ್ ಎಂಬ ಬೋರ್ಡ್ ಹಾಕಿ ಸೊಂಕಿತರು ಬೇಗ ಗುಣಮುಖರಾಗಲಿ ಕಗ್ಗಂಟಾದ ದಾರಿ …

Read More »

ಸಮಾಜ ಉಪ್ಪಾರ…ಅಧಿಕಾರ ಕೊಡಿಸಬೇಕಂತೆ ಸಾಹುಕಾರ್….!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನಲ್ಲಿ ಉಪ್ಪಾರ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅರಬಾಂವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಸಮಾಜದ ಮುಖಂಡರು ಬಾಲಚಂದ್ರ ಜಾರಕೊಹೊಳಿ ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಬೆಂಬಲಿಸುತ್ತಾ ಬಂದಿದ್ದು ಉಪ್ಪಾರ ಸಮಾಜದ ನಾಯಕರನ್ನು ನಿಗಮಮಂಡಳಿಗೆ ನೇಮಕ ಮಾಡಬೇಕೆಂದು ಉಪ್ಪಾರ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಮೂಡಲಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಪ್ಪಾರ ಸಮಾಜದ ಯುವ ಮುಖಂಡ,ಚನ್ನಪ್ಪಾ ವಗ್ಗಣ್ಣವರ,ಉಪ್ಪಾರ ಸಮಾಜದ ಮುಖಂಡರನ್ನು ಕೇವಲ ಜಿಪಂ.ತಾಪಂ ಗೆ ಸೀಮೀತಗೊಳಿಸಬಾರದು ಬೆಳಗಾವಿ ಜಿಲ್ಲೆಯಲ್ಲಿಯೇ ಉಪ್ಪಾರ …

Read More »

ಆಗಿದ್ದು ಹನಿಟ್ರ್ಯಾಪ್….ಕೇಳಿದ್ದು 10 ಲಕ್ಷ ಕೊನೆಗೆ ಫೈನಲ್ ಆಗಿದ್ದು ಹಿಂಡಲಗಾ….!

ಬೆಳಗಾವಿ- ಹನಿ ಟ್ರ್ಯಾಪ್ ಮೂಲಕ ಜಮಖಂಡಿಯ ವ್ಯೆಕ್ತಿಯೊಬ್ಬನಿಗೆ,ನಿನ್ನ ಅಡಿಯೋ ವಿಡಿಯೋ ತೋರಿಸುತ್ತೇವೆ ಎಂದು ಬೆದರಿಸಿ ಹತ್ತು ಲಕ್ಷ ರೂಗಳನ್ನು ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಐವರು ಪಂಚರಂಗಿಗಳು ಬೆಳಗಾವಿ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಜಮಖಂಡಿಯ ವ್ಯೆಕ್ತಿಯೊಬ್ಬನ ಜೊತೆ ಸ್ನೇಹ ಬೆಳಿಸಿ ಈತನ ಅಡಿಯೋ ವಿಡಿಯೋ ರಿಕಾರ್ಡ್ ಮಾಡಿ,ಹತ್ತು ಲಕ್ಷ ರೂ ಕೊಡದಿದ್ದರೆ ,ಅಡಿಯೋ ವಿಡಿಯೋ ಎರಡನ್ನೂ ಯೂಟ್ಯುಬ್ ಚಾನೆಲ್ಲನಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಸಿದ ಗೌರಿ,ಮಂಜುಳಾ,ಸಂಗೀತಾ ಜೊತೆ ಸದಾಶಿವ ಮತ್ತು …

Read More »

ವಾಕಿಂಗ್……ಟಾಕಿಂಗ್…..ಇವತ್ತಿನ ಬಿಗ್ ಬ್ರೇಕಿಂಗ್…..!

ಬೆಳಗಾವಿ-ಸವದಿ ಮುಖ್ಯಮಂತ್ರಿ ಆಗ್ತಾರೆ.ಉಮೇಶ್ ಕತ್ತಿ ಮಂತ್ರಿಯಾಗ್ತಾರೆ.ಶಶಿಕಲಾ ಜೊಲ್ಲೆ ದೆಹಲಿಗೆ ಹೋಗಿದ್ದಾರೆ.ಎನ್ನುವ ಸುದ್ಧಿಗಳು ಬೆಳಗಾವಿ ಜಿಲ್ಲೆಯಲ್ಲಿ ಹರದಾಡುತ್ತಿರುವ ಬೆನ್ನಲ್ಲಿಯೇ, ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ತಮ್ಮ ಕ್ಷೇತ್ರದಲ್ಲಿ ಅರ್ಥಪೂರ್ಣವಾದ ಜನಜಾಗೃತಿ ಅಭಿಯಾನ ನಡೆಸಿದ್ದಾರೆ. ಇಂದು ಸಂಜೆ ಹೊತ್ತಿಗೆ ಮನೆಯಿಂದ ವಾಕಿಂಗ್ ಗಾಗಿ ಹೊರಟ ಅಂಜಲಿತಾಯಿ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು,ಭೇಟಿಯಾಗಿ ಕೊರೋನಾ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು,ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಕಡ್ಡಾಯವಾಗಿ ಮಾಸ್ಕ ಧರಿಸಬೇಕು.ಪದೇ ಪದೇ ಸೋಪಿನಿಂದ ಕೈ ತೊಳೆದುಕೊಳ್ಳಬೇಕು,ಮನೆಯಲ್ಲಿ ಎಲ್ಲರೂ …

Read More »

ಸರ್ಕಾರದ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಿಸಲು ಅವಕಾಶ

ಬೆಳಗಾವಿ,-ಕೋವಿಡ್-೧೯ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಣೆ ಮಾಡಬೇಕು. ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಮ್.ಜಿ. ಹಿರೇಮಠ ಅವರು ತಿಳಿಸಿದ್ದಾರೆ. ಅಗಸ್ಟ್ ೧ ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಹಾಗೂ ಕಾನೂನು‌ ಸುವ್ಯವಸ್ಥೆ ಕಾಪಾಡುವ ನಿಮಿತ್ತ ಬುಧವಾರ (ಜು.೨೯) ಜಿಲ್ಲಾಧಿಕಾರಿಗಳ ಕಷೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ …

Read More »

ಬೆಳಗಾವಿ ಜಿಲ್ಲಾ ಪಂಚಾಯತಿ CEO ರಾಜೇಂದ್ರ ಕೆ.ವಿ ವರ್ಗಾವಣೆ

ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕೆ.ವಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜೇಂದ್ರ ಕೆ.ವಿ.ಅವರನ್ನು ಮಂಗಳೂರು ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದ್ದು.ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ದರ್ಶನ್ ಹೆಚ್.ವಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜೇಂದ್ರ ಕೆ.ವಿ ಅವರು ಕೋವೀಡ್ ಸಂಧರ್ಭದಲ್ಲಿ ಪ್ರಚಾರದ ಹಂಗಿಲ್ಲದೇ ಹಗಲು ರಾತ್ರಿ ಶ್ರಮಿಸಿದ್ದರು.ಈ ಹಿಂದೆ ಪ್ರವಾಹದ ಸಂಧರ್ಭದಲ್ಲಿ ರಾಜೇಂದ್ರ ಕೆ.ವಿ ಅವರು ಸಲ್ಲಿಸಿದ …

Read More »