ಬೆಳಗಾವಿ-ಕಳೆದ ಮೂರು ತಿಂಗಳಿನಿಂದ ಬೆಳಗಾವಿ ಜಿಲ್ಲೆಯ ಜನತೆಗೆ ಕಾಡುತ್ತಿರುವ ಕೊರೋನಾ ಮಹಾಮಾರಿಯ ಕಾಟ ಈಗ ಬೆಳಗಾವಿ ಜಿಲ್ಲಾ ಆಸ್ಪತ್ರೆಗೂ ವಕ್ಕರಿಸಿದೆ,OPD ಯಲ್ಲಿ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ 23 ವರ್ಷದ ಡಾಕ್ಟರ್ ಗೂ ಸೊಂಕು ತಗಲಿರುವ ಕಾರಣ ಬೆಳಗಾವಿ ಜಿಲ್ಲಾ ಆಸ್ಪತ್ರೆಯ OPD ವಿಭಾಗವನ್ನೇ ಸೀಲ್ ಡೌನ್ ಮಾಡಲಾಗಿದೆ. ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಓಪಿಡಿ ಮತ್ತು ಕೋವಿಡ್ ವಾರ್ಡ್ ಒಂದೇ ಕಟ್ಟಡದಲ್ಲಿ ಇರುವದರಿಂದ ಓಪಿಡಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲು …
Read More »ಕುಡಚಿ- ಬಾಗಲಕೋಟೆ, ರೈಲುಮಾರ್ಗ,ಭೂಮಿ ಕೊಟ್ಟರೆ ಶೀಘ್ರದಲ್ಲೇ ಕಾಮಗಾರಿ
ಬೆಳಗಾವಿ, – ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಿದರೆ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವುದು ರೈಲ್ವೆ ಇಲಾಖೆಯ ಪ್ರಥಮ ಆದ್ಯತೆಯಾಗಿದೆ ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು. ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜು.11) ನಡೆದ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡರೆ …
Read More »ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಹಿರೇಮಠ ಆದೇಶ
ಕೋವಿಡ್-೧೯: ಬಿಮ್ಸ್ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಹಿರೇಮಠ ಆದೇಶ ಬೆಳಗಾವಿ, ಜು.10(ಕರ್ನಾಟಕ ವಾರ್ತೆ): ಕೋವಿಡ್-19 ಆಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ, ನರ್ಸಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್-19 (ಕರೋನಾ ವೈರಾಣು ಕಾಯಿಲೆ-2019) ಹರಡದಂತೆ ಹಾಗೂ ಸಾರ್ವಜನಿಕರ ಆರೋಗ್ಯಕಾಪಾಡುವ ಹಿತದೃಷ್ಟಿಯಿಂದ ಕೋವಿಡ್-19 ಆಸ್ಪತ್ರೆಗೆ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ. ನಿಗದಿತ ಕೋವಿಡ್-೧೯ ಆಸ್ಪತ್ರೆ …
Read More »ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ 15 ಸೊಂಕಿತರ ಪತ್ತೆ 465 ಕ್ಕೇರಿದ ಸೊಂಕಿತರ ಸಂಖ್ಯೆ
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ 15 ಕೊರೋನಾ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 465 ಕ್ಕೇರಿದೆ. ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 15 ಜನ ಸೊಂಕಿತರಲ್ಲಿ ಬೆಳಗಾವಿ ನಗರದ ಹಿಂದವಾಡಿ1,ಖಾಸಬಾಗ,1, ಯಲ್ಲೇಬೈಲ ಗ್ರಾಮದಲ್ಲಿ 1,ಬಸವನ ಕುಡಚಿ 1,ಬೆಳಗಾವಿ ನಗರ 1 ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ತಾಲ್ಲೂಕಿನಲ್ಲಿ ಒಟ್ಟು 6 ಜನ ಸೊಂಕಿತರು ಪತ್ತೆಯಾಗಿದ್ದಾರೆ ಬೈಲಹೊಂಗಲ ತಾಲ್ಲೂಕಿನ ಮಲ್ಲಾಪೂರ ಗ್ರಾಮದಲ್ಲಿ 2 ಸೊಂಕಿತರು ಹುಕ್ಕೇರಿಯಲ್ಲಿ 1 ಸೊಂಕಿತರು …
Read More »ಕಳಸಾ ಬಂಡೂರಿ ನಾಲಾ ಯೋಜನೆಗೆ ಮರುಜೀವ,ಹೊಸ ಪ್ರಸ್ತಾವನೆ ಸಲ್ಲಿಸಲು ಕೇಂದ್ರದ ಸೂಚನೆ
ಹಠಮಾಡಿ,ಜಯ ಸಾಧಿಸಿದ ಸಾಹುಕಾರ್ ಬೆಳಗಾವಿ- ಕೋವೀಡ್ ಸಂಕಷ್ಟದ ನಡುವೆಯೂ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕರ್ನಾಟಕದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಜೀವದ ಹಂಗು ತೊರೆದು ಕೊರೋನಾ ಭೀತಿಯನ್ನು ಲೆಕ್ಕಿಸದೇ ಓಡಾಡುತ್ತಿದ್ದು ಅವರ ಅವಿರತ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಿದೆ ಕಳಸಾ ಬಂಡೂರಿ ನಾಲಾ ಪ್ರಥಮ ಹಂತದ ಯೋಜನೆಗೆ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯಲು ಹೊಸ ಪ್ರಸ್ತಾವಣೆ ಸಲ್ಲಿಸುವಂತೆ ಇಲಾಖೆ ರಾಜ್ಯ ಸಂಪನ್ಮೂಲ ಇಲಾಖೆಗೆ …
Read More »ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಗೆ ಇಂದು ಇಬ್ಬರು ಮಹಿಳೆಯರ ಬಲಿ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮೃತ್ಯು ಕಾಂಡ ಮುಂದುವರೆದಿದೆ ಈ ಮಹಾಮಾರಿಗೆ ಇಂದು ಶುಕ್ರವಾರ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ ಮಹಾಮಾರಿ ಕೊರೋನಾ ಚೆಲ್ಲಾಟದಿಂದ ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 9 ಬಲಿಯಾದಂತಾಗಿದೆ. ಹುಕ್ಕೇರಿ ತಾಲ್ಲೂಕಿನ ಒಬ್ಬ ಮಹಿಳೆ,ಅಥಣಿ ತಾಲ್ಲೂಕಿನ ಇನ್ನೊಬ್ಬ ಮಹಿಳೆ ಮೃತಪಟ್ಟಿದ್ದು ಇಬ್ಬರಿಗೂ ಸೊಂಕು ದೃಡವಾಗಿತ್ತು ಎಂದು ತಿಳಿದು ಬಂದಿದ್ದು,ಈ ಕುರಿತು ಜಿಲ್ಲಾಡಳಿತ ಅಧಿಕೃತವಾಗಿ ಮಾಹಿತಿ ನೀಡಬೇಕಾಗಿದೆ
Read More »ಮಹಾ ಮಾನವತಾವಾದಿಯ ‘ಮಹಾನಾಯಕ’ ಧಾರಾವಾಹಿಗೆ ಜನ ಮನ್ನಣೆ
ಸಂವಿಧಾನ ಶಿಲ್ಪಿ, ಭಾರತ ರತ್ನ, ಮಹಾಮಾನವತಾವಾದಿ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ ಅವರ ಜೀವನ ಸಾಧನೆಯೇ ಒಂದು ದೊಡ್ಡಪವಾಡ. ಒಬ್ಬ ಅಗಮ್ಯೆ ಸಾಭಿಮಾನಿ ಜನಪರ ಹೋರಾಟಗಾರನಾದಾಗ ಅದರಲ್ಲೂ ಸಾವಿರಾರು ವರ್ಷಗಳಿಂದ ತುಳತಕ್ಕೆ ಒಳಗಾದ ದಲಿತ ಸಮುದಾಯದ ಬದುಕಿನ ಹಕ್ಕಿಗಾಗಿ ಜೀವಿಸಿದ ಅಂಬೇಡ್ಕರ ಅವರದು ಅನುಕ್ಷಣ ಹೋರಾಟವೇ ಆಗಿದೆ. ಭಾರತದಲ್ಲಿ ದಲಿತ ಸಮುದಾಯದ ಹಕ್ಕಿಗಾಗಿ ಹೋರಾಟ ನಡೆಸುವುದು ಕೇವಲ ಬೆಂಕಿಕೆಂಡದ ಮೇಲೆ ನಡೆಯುವುದಲ್ಲ, ಉರಿಯ ಕೆನ್ನಾಲೆಯೊಳಗೆ ಹಾಯ್ದಂತೆ. ಹೀಗಿದ್ದೂ ಅಂಬೇಡ್ಕರ ಅವರು ತಾವು …
Read More »ಕಾಲು ಜಾರಿ ಬಾವಿಗೆ ಬಿದ್ದು ವ್ಯೆಕ್ತಿಯ ಸಾವು
ಬೆಳಗಾವಿ- ಬಾವಿಯಲ್ಲಿದ್ದ ನೀರಿನ ಮೋಟರ್ ಆನ್ ಮಾಡಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯೆಕ್ತಿಯೊಬ್ಬ ಸಾವನ್ನೊಪ್ಪಿದ ಘಟನೆ ಬೆಳಗಾವಿ ಸಮೀಪದ ಪೀರನವಾಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಹುನಶ್ಯಾನಟ್ಟಿ ಗ್ರಾಮದ 35 ವರ್ಷದ ಇಂದ್ರಜೀತ ಪಾವಸೆ ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದಾನೆ.ಈತ ಇಂದು ಬೆಳಿಗ್ಗೆ ಪೀರನವಾಡಿಯ ಹೊಲದಲ್ಲಿನ ಮನೆಯ ಹಿತ್ತಲಲ್ಲಿದ್ದ ಬಾವಿಯ ಮೋಟರ್ ಆನ್ ಮಾಡಲು ಹೋದಾಗ ಕಾಲು ಜಾರಿ ಬಾವಿಗೆ ಬಿದ್ದಾಗ, ಮನೆಯಲ್ಲಿದ್ದ ಇವನ ತಾಯಿ ಮತ್ತು ಮಡದಿ …
Read More »ಬೆಳಗಾವಿ ಜಿಲ್ಲೆಯಲ್ಲಿ ನಿಲ್ಲದ ಕೊರೋನಾ ಕಾಟ ಇಂದು ಗುರುವಾರ ಮತ್ತೆ 9 ಸೊಂಕಿತರ ಪತ್ತೆ
ಬೆಳಗಾವಿ- ಜಿಲ್ಲೆಯಲ್ಲಿ ಕೊರೋನಾ ಸಂಕಟ ಇವತ್ತು ಗುರುವಾರವೂ ಮುಂದುವರೆದಿದೆ ಇಂದಿನ ರಾಜ್ಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 9 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಸೊಂಕಿತರ ಸಂಖ್ಯೆ 450 ಕ್ಕೇರಿದ್ದು ಈ 450 ,ಸೊಂಕಿತರಲ್ಲಿ 342 ಸೊಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು 101 ಜನರಲ್ಲಿ ಮಾತ್ರ ಸೊಂಕು ಸಕ್ರೀಯವಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 7 ಜನ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಸೊಂಕು ವ್ಯಾಪಕವಾಗಿ ಹರಡುತ್ತಿರುವ …
Read More »ಪ್ರಮಾಣ ಮಾಡಲು ಕೊಲ್ಹಾಪೂರಕ್ಕೆ ಹೋಗ್ತಾರೋ,ಎಲ್ಲಿ ಹೋಗ್ತಾರೋ ನೀವೇ ಕೇಳಿ
ಬೆಳಗಾವಿ- ಶಾಸಕಿ ಹೆಬ್ಬಾಳ್ಕರ್ – ಸಚಿವ ರಮೇಶ ಜಾರಕಿಹೊಳಿ ನಡುವೆ ನಡೆಯುತ್ತಿರುವ ಕುಕ್ಕರ್ ವಾರ್ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ,ಶಾಸಕ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕುಕ್ಕರ್ ಬಂದ್ ಮಾಡೋದು.. ಚಾಲು ಮಾಡೋದು.. ಎಲ್ಲಾ ನಿಮ್ಮ ಕಡೆನೇ ಇದೆ,ಇಬ್ಬರನ್ನೂ ಕರೆದುಕೊಂಡು ಹೋಗಿ ಹೋಗಿ ಆಣೆ ಮಾಡಿಸಿ, ಸಂವಾದ ಮಾಡ್ಸಿ.. ಯಾರು ಸುಳ್ಳು ಹೇಳ್ತಾರೋ ನೋಡಬೇಕಲ್ಲ, ಎಲ್ಲಿ ಆಣೆ ಪ್ರಮಾಣ ಮಾಡಲು …
Read More »