ಬೆಳಗಾವಿ-ರಾಜ್ಯದ ಎರಡನೇಯ ರಾಜಧಾನಿ ಎಂದೇ ಕರೆಯಲ್ಪಡುವ, ಬೆಳಗಾವಿ ನಗರದ ಪೋಲೀಸ್ ಕಮಿಷ್ನರ್ ಆಗಿ ಡಾ ಕೆ ತ್ಯಾಗರಾಜನ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಿನ್ನೆ ಸಂಜೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ ಅವರು ಇಂದು ಅಧಿಕಾರ ಸ್ವೀಕರಿಸಿದರು.ಬೆಳಗಾವಿಯ ಪೋಲೀಸ್ ಕಮಿಷ್ನರ್ ಆಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ ಲೋಕೇಶ್ ಕುಮಾರ ಅವರು ಡಾ.ಕೆ ತ್ಯಾಗರಾಜನ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು
Read More »ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 8 ಜನ ಸೊಂಕಿತರ ಪತ್ತೆ
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕರ್ಮಕಾಂಡ ಮುಂದುವರೆದಿದೆ,ಜಿಲ್ಲೆಯ ಜನ ಸಂಡೇ ಮೂಡ್ ನಲ್ಲಿ ಇರುವಾಗಲೇ ಈ ಮಹಾಮಾರಿ ಹೊಡೀ ಒಂಬತ್ತ್ ಎಂದಿದೆ,ಯಾಕಂದ್ರೆ ಇವತ್ತು ಒಂದೇ ದಿನ 8 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಭಾನುವಾರದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದ್ದು,ಈ ಬುಲೀಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 8 ಜನರಿಗೆ ಸೊಂಕು ಇರುವದು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲೀಟೀನ್ ಪ್ರಕಾರ 326 ಕ್ಕೇರಿದಂತಾಗಿದೆ. ಇಂದು ಪತ್ತೆಯಾದ 9 …
Read More »ಗೋಕಾಕಿನಲ್ಲಿ ಅಭಿವೃದ್ಧಿಯ ಪರ್ವ….!
*ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ.* ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜ್ಯದ ಜಲಸಂಪನ್ಮೂಲ ಸಚಿವ *ರಮೇಶ್ ಜಾರಕಿಹೊಳಿ* ಯವರು ಗೋಕಾಕ್‌ನ ಜನತಾ ಫ್ಲಾಟ್ ನಲ್ಲಿ ನಿರ್ಮಿಸಿರುವ *ಅಲೆಮಾರಿಗಳಿಗಾಗಿ ನಿರ್ಮಿಸಿರುವ ವಸತಿ ನಿಲಯ* ಗಳನ್ನು ಇಂದು ಉದ್ಘಾಟಿಸಿದರು. ಗೋಕಾಕ್ ನಗರದ *ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ* ನೆರವೇರಿಸಿದ ಸಚಿವರು ಅಂಗವಿಕಲರಿಗೆ *ತ್ರಿಚಕ್ರ ವಾಹನ* ಗಳನ್ನು ವಿತರಿಸಿದರು ಮಾರ್ಕಂಡೆಯ ನಗರದಲ್ಲಿ *13/11 …
Read More »ಪ್ರತಿಜ್ಞಾವಿಧಿ ಕಾರ್ಯಕ್ರಮ ದೇಶದಲ್ಲೇ ಹೊಸ ಇತಿಹಾಸ ಸೃಷ್ಠಿಸಲಿದೆ-ಹೆಬ್ಬಾಳಕರ
ಬೆಳಗಾವಿ- ಜುಲೈ 2 ರಂದು ಬೆಂಗಳೂರಿನಲ್ಲಿ ನಡೆಯುವ,ಕೆಪಿಸಿಸಿ ಅದ್ಯಕ್ಷರು ಮತ್ತು,ಕಾರ್ಯಾದ್ಯಕ್ಷರುಗಳ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡುವದರ ಜೊತೆಗೆ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ,ಡಿಜಿಟಲ್ ಮಿಡಿಯಾ ಮೂಲಕ ಪ್ರಸಾರವಾಗುವ ಈ ಕಾರ್ಯಕ್ರಮ ದೇಶದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ನಾನು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷೆಯಾಗಿರುವಾಗ,ಬಹಳಷ್ಟು ಹೋರಾಟ ಮಾಡಿ,ಜಾಗೆಯನ್ನು ಖರೀಧಿಸಿ,ಬಹಳಷ್ಟು …
Read More »ಹೆತ್ತ ಮಗನ ಎದೆಗೆ ಕೊಡಲಿ ಕೊಚ್ಚಿ ಕೊಂದ ಪಾಪಿ ತಂದೆ
ಬೆಳಗಾವಿ- ಅತೀ ಕ್ಷುಲ್ಲಕ ಕಾರಣಕ್ಕಾಗಿ ತಂದೆಯೊಬ್ಬ ಹೆತ್ತಗನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ತಾಲ್ಲೂಕಿನಲ್ಲಿ ನಡೆದಿದೆ.ದನಕ್ಕೆ ಮೇವು ಹಾಕುವ ವಿಚಾರದಲ್ಲಿ ತಂದೆ ಮತ್ತು ಮಗನ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಹೆತ್ತ ಮಗನ ಎದೆಗೆ ಕೊಡಲಿ ಏಟು ನೀಡಿ ಮಗನನ್ನೇ ಕೊಂದ ಪಾಪಿ ತಂದೆ,ಈಗ ಪರಾರಿಯಾಗಿದ್ದಾನೆ.ಗೋ ಕಾಕ ತಾಲ್ಲೂಕಿನ ಮೇಲ್ಮನಹಟ್ಟಿಯಲ್ಲಿ ಯಮನಪ್ಪ (41) ಹತ್ಯೆಯಾದ ದುರ್ದೈವಿ ಹತ್ಯೆಗೈದ ತಂದೆ ಬಾಳಪ್ಪ ಗುತ್ತಿಗೆ ಪರಾರಿಯಾಗಿದ್ದಾನೆ. ಕೊಡಲಿಯಿಂದ ಮಗನ ಎದೆಗೆ …
Read More »ಬೆಳಗಾವಿ ಜಿಲ್ಲೆಗೆ ತಪ್ಪದ ಮಹಾಮಾರಿ ಕೊರೋನಾ ಕಾಟ…..!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಕಾಟ ತಪ್ಪುತ್ತಿಲ್ಲ,ಪ್ರತಿ ದಿನ ಈ ಹೆಮ್ಮಾರಿ ಜಿಲ್ಲೆಯಲ್ಲಿ ಚೆಲ್ಲಾಟ ಮುಂದುವರೆಸಿದೆ.ಶನಿವಾರ ಸಂಜೆ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ ಮತ್ತೋರ್ವ ಯುವತಿಗೆ ಕೊರೊನಾ ಸೊಂಕು ಇರುವದು ದೃಢವಾಗಿದೆ. ಸಿಂಗಾರಗೊಪ್ಪ ಗ್ರಾಮದ 22 ವರ್ಷದ ಯುವತಿಗೆ ಕೊರೊನಾ ಸೋಂಕು ತಗಲಿದ. ಮಹಾರಾಷ್ಟ್ರ ಟ್ರಾವೆಲ್ ಹಿಸ್ಟರಿ ಹೊಂದಿರುವ ಯುವತಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಗ್ರಾಮದವಳಾಗಿದ್ದಾಳೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ …
Read More »ಅತ್ಯಾಚಾರ ಪ್ರಕರಣ, ಬೆಳಗಾವಿಯ ಪೋಲೀಸ್ ಪೇದೆ ಬಂಧನ…
ಬೆಳಗಾವಿ- ಅತ್ಯಾಚಾರ ಪ್ರಕರಣವೊಂದಕ್ಕೆ ಸಮಂಧಿಸಿದಂತೆ ಬೆಳಗಾವಿಯ ಪೋಲೀಸ್ ಪೇದೆಯೊಬ್ಬನನ್ನು ಬಂಧಿಸಲಾಗಿದೆ. ಬೆಳಗಾವಿಯ ಮಹಿಳಾ ಪೋಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಲೀಸ್ ಪೇದೆ ಇಮ್ರಾನ್ ಖಾನ್,ಅಬ್ದುಲ್ ಮುನಾಫ್ ಘೋರಿ ಎಂಬಾತನನ್ನು ಬಂಧಿಸಲಾಗಿದೆ. ಪೋಲೀಸ್ ಪೇದೆ,ಇಮ್ರಾನ್ ಖಾನ್ ಘೋರಿ ಇತನು ಸಿಟಿ ರಿಸರ್ವ ಪೋಲೀಸ್ ಪೇದೆ ಎಂದು ತಿಳಿದು ಬಂದಿದೆ.
Read More »ಶೀಘ್ರದಲ್ಲೇ ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಪುನರ್ರಚನೆ-ಸತೀಶ್ ಜಾರಕಿಹೊಳಿ
ಬೆಳಗಾವಿ- ರಾಜ್ಯದಲ್ಲಿ ಕೆಲವು ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಅವಧಿ ಮುಗಿದಿದೆ.ಪ್ರತಿಜ್ಞಾವಿಧಿ ಕಾರ್ಯಕ್ರಮ ಮುಗಿದ ಬಳಿಕ,ಅವಧಿ ಮುಗಿದ ಬಳಿಕ ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಪುನರ್ರಚನೆ ಮಾಡುತ್ತೇವೆ,ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲೂ ಕ್ರೆಡಿಟ್ ವಾರ್ ಇದ್ದೇ ಇರುತ್ತೆ, ಇದು ಸಾಮಾನ್ಯ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಪಿಸಿಸಿ ನೂತನ ಕಚೇರಿ ಪೂಜಾ ಕಾರ್ಯಕ್ರಮಕ್ಕೆ …
Read More »ನಾನು ಒಮ್ಮೆ ಹಿಡಿದ ಟ್ರ್ಯಾಕ್ ನ್ನು ಯಾರು ಬಂದರೂ ಬಿಡುವದಿಲ್ಲ- ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ- ಬೆಳಗಾವಿ ಎಪಿಎಂಸಿ ವ್ಯಾಪಾರಿಗಳ ಸಂಘಟನೆ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸತ್ಕರಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ,ನನ್ನ ಅಧಿಕಾರದ ಅವಧಿ ಇನ್ನೂ ಮೂರು ವರ್ಷವಿದೆ,ಈ ಅವಧಿಯಲ್ಲಿ ನಾನು ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎನ್ನುವದನ್ನು ನೀವೇ ನೋಡಿ,ನಾನು ಹಿಡಿದ ಟ್ರ್ಯಾಕ್ ಯಾರು ಬಂದರೂ ಬಿಡುವದಿಲ್ಲ,ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಈಗಿನ ಎಪಿಎಂಸಿ ಸಚಿವರು …
Read More »ಪ್ಲೇ ಗ್ರೌಂಡ್ ನಲ್ಲಿ ಪಾಲಿಟಿಕ್ಸ್ ಆಟ…ಕ್ರೀಡೆಗೆ ಕಾಟ……!!
ಬೆಳಗಾವಿ- ಬೆಳಗಾವಿಯ ಹೃದಯಭಾಗದಲ್ಲಿರುವ ಸರ್ದಾರ್ ಮೈದಾನ ಕೇವಲ ಕ್ರೀಡಾ ಚಟುವಟಿಕೆಗೆ ಮಾತ್ರ ಬಳಕೆ ಆಗಬೇಕು ಎಂದು ನಿಯಮ ಮಾಡಿದ ಬೆಳಗಾವಿ ಮಹಾನಗರ ಪಾಲಿಕೆ ತಾನು ಮಾಡಿದ ನಿಯಮವನ್ನು ತಾನೇ ಗಾಳಿಗೆ ತೂರುತ್ತಿದೆ. ಬೆಳಗಾವಿಯ ಸರ್ದಾರ್ ಮೈದಾನ,ಶಿಕ್ಷಣ ಇಲಾಖೆಯ ಆಸ್ತಿ,ಈ ಮೈದಾನವವನ್ನು ಪಾಲಿಕೆಯ ವಿಶೇಷ ಅನುದಾನದಲ್ಲಿ ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿ,ಅಭಿವೃದ್ಧಿ ಪಡಿಸಿದೆ. ಮೈದಾನದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಿದೆ,ಈ ಸಂಕೀರ್ಣ ಈಗ ಕ್ರೀಡಾ ಚಟುವಟಿಕೆಗೆ ಬಳಕೆಯಾಗದೇ,ರಾಜಕೀಯ ಚಟುವಟಿಕೆಗಳ ಪಾಲಾಗಲಿದೆ. ಸರ್ದಾರ್ …
Read More »