Breaking News

LOCAL NEWS

ಸಂಡೇ ಮಾರ್ನಿಂಗ್ ಬೆಳಗಾವಿಗೆ ಬಿಗ್ ರಿಲೀಫ್…..!!!

ಬೆಳಗಾವಿ- ದಿನಬೆಳಗಾದ್ರೆ ಎದೆಯಲ್ಲಿ ಢವ ಢವ…ಹೆಲ್ತ ಬುಲಿಟೀನ್ ನಲ್ಲಿ ಇವತ್ತೆಷ್ಟು ಪಾಸಿಟೀವ್ ಪ್ರಕರಣಗಳು ಬರುತ್ತವೆಯೋ ಎನ್ನುವ ಆತಂಕ ಆದ್ರೆ ಇಂದು ಸಂಡೇ ಬೆಳಗಾವಿ ಪಾಲಿಗೆ ಸ್ವಲ್ಪ ರಿಲೀಫ್ ಯಾಕಂದ್ರೆ ಬೆಳಗಾವಿಯ ಯಾವುದೇ ಹೊಸ ಪ್ರಕರಣಗಳು ಇಂದು ಬೆಳಕಿಗೆ ಬಂದಿಲ್ಲ. ರಾಜ್ಯದಲ್ಲಿ ಮೈಸೂರು ಜಿಲ್ಲೆಯ ನಾಲ್ಕು ಪಾಸಿಟೀವ್ ಪ್ರಕರಣಗಳು ಮಾತ್ರ ಬುಲಿಟಿನ್ ನಲ್ಲಿವೆ. ಬೆಳಗಾವಿಯಲ್ಲಿ ನಿನ್ನೆಯಷ್ಟೆ ಬೆಳಗುಂದಿಯ ಪಾಸಿಟೀವ್ ಪ್ರಕರಣವನ್ನು ಬೆಳಗಾವಿಯ ನಮ್ಮ ಹೆಮ್ಮೆಯ ವೈದರು ನೆಗೆಟೀವ್ ಮಾಡುವಲ್ಲಿ ಯಶಸ್ವಿಯಾಗಿ ಬೆಳಗಾವಿ …

Read More »

ಬೆಳಗಾವಿಯಲ್ಲಿ ಔಷಧಿ ಅಂಗಡಿಗೆ ಬೆಂಕಿ,ಲಕ್ಷಾಂತರ ರೂ ಹಾನಿ

ಬೆಳಗಾವಿ- ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ಧಾಣದ ಎದರಿನಲ್ಲಿರುವ ಔಷಧಿ ಅಂಗಡಿಗೆ ಆಕಸ್ಮಿಕ ವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಯ ಔಷಧಿಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ನಿನ್ನೆ ಮದ್ಯರಾತ್ರಿ ಶ್ರೀರಾಮ ಮೆಡಿಕಲ್ಸ ಎಂಬ ಔಷಧಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದಾಗ ಅಗ್ನಿ ಶಾಮಕ ದಳ ಬೆಂಕಿಯನ್ನು ನಿಯಂತ್ರಿಸುವಷ್ಟರಲ್ಲಿ ಔಷಧಿಗಳು ಬೆಂಕಿಗಾಹುತಿ ಯಾಗಿವೆ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆದಿದೆ.

Read More »

ಗಲ್ಲಿ… ಗಲ್ಲಿ..ಸುತ್ತಾಡುತ್ತಿರುವ ಕಿರಣ,ಹಳ್ಳಿ ಹಳ್ಳಿ ಅಲೆದಾಡುತ್ತಿರುವ ಅಶೋಕ…..!!!!

ಗಲ್ಲಿ… ಗಲ್ಲಿ..ಸುತ್ತಾಡುತ್ತಿರುವ ಕಿರಣ,ಹಳ್ಳಿ ಹಳ್ಳಿ ಅಲೆದಾಡುತ್ತಿರುವ ಅಶೋಕ…..!!!! ಬೆಳಗಾವಿ- ಲಾಕ್ ಡೌನ್ ಸಂಧರ್ಭದಲ್ಲಿ ಅನೇಕ ಜನ ಯಾವುದೇ ಪ್ರಚಾರದ ಗಿಲ್ಲದೇ ಬಡವರ,ಅಸಹಾಯಕರ ನೆರವಿಗೆ ನಿಂತಿದ್ದಾರೆ.ಕನ್ನಡ ಕ್ರಿಯಾ ಸಮೀತಿಯ ಅಧ್ಯಕ್ಷ ಅಶೋಕ ಚಂದರಗಿ ದಿನನಿತ್ಯ ನಗರದ ಅಕ್ಕ ಪಕ್ಕದಲ್ಲಿರುವ ಹಳ್ಳಿಗಳಿಗೆ ದಿನನಿತ್ಯ ಸುತ್ತಾಡಿ ಆಹಾರ ಸಾಮುಗ್ರಿಗಳು ಯಾರಿಗೆ ಮುಟ್ಟಿಲ್ಲವೋ ಅಂತವರನ್ನು ಹುಡುಕಿ ಹುಡುಕಿ ಆಹಾರ ಸಾಮುಗ್ರಿಗಳ ಕಿಟ್ ಹಂಚುತ್ತಿದ್ದಾರೆ ಬಿಜೆಪಿಯ ಯುವ ನಾಯಕ ಕಿರಣ ಜಾಧವ ಅವರು ಬೆಳಗಾವಿ ನಗರದ ವಿವಿಧ …

Read More »

ಚಪ್ಪಾಳೆ ತಟ್ಟಿ ಬೀಳ್ಕೊಟ್ಟ ವೈದ್ಯರು

ಕೋವಿಡ್-೧೯ ಸೋಂಕಿತ ವ್ಯಕ್ತಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಏ.೧೮(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಬೆಳಗುಂದಿ ಗ್ರಾಮದ ೭೦ ವರ್ಷದ ವ್ಯಕ್ತಿ(ಪಿ-೧೨೬)ಯನ್ನು ಶನಿವಾರ (ಏ.೧೮) ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. …

Read More »

ಬೆಳಗುಂದಿಯ ಕೊರೋನಾ ಪಾಸಿಟೀವ್ ಈಗ ನೆಗೆಟೀವ್

ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ದಿನಾಂಕ ೧೮-೪-೨೦೨೦ ರಂದು ನಡೆಸಿದ ಪತ್ರಿಕಾಗೋಷ್ಠಿ ಪ್ರಮುಖಾಂಶಗಳು.. * ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣದ ವ್ಯಕ್ತಿ ಗುಣಮುಖರಾಗಿದ್ದು, ಇದೀಗ ಮರು ಪರೀಕ್ಷೆ ವರದಿ ನೆಗೆಟಿವ್ ಬಂದಿರುತ್ತದೆ. * ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣ ಪಿ-೧೨೬ ಈಗ ಗುಣಮುಖರಾಗಿದ್ದು, ಮರು ಪರೀಕ್ಷೆ ಬಳಿಕವೂ ವರದಿ ನೆಗೆಟಿವ್ ಬಂದಿರುತ್ತದೆ. * ಹಿರೇಬಾಗೇವಾಡಿ ಹಾಗೂ ಕುಡಚಿಯಲ್ಲಿ …

Read More »

ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಗಣಾಚಾರಿ ಪಾರ್ಥಿವ ಶರೀರಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಅಂತಿಮ ನಮನ

ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಗಣಾಚಾರಿ ಪಾರ್ಥಿವ ಶರೀರಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಅಂತಿಮ ನಮನ ಬೆಳಗಾವಿ, ಕೊರೋನಾ ಸೊಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯ ಪಿ‌ಎಸ್ಐ ಮನೋಹರ ಗಣಾಚಾರಿ ಅವರ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶ್ರದ್ಧಾಂಜಲಿ …

Read More »

ಹಿರೇಬಾಗೇವಾಡಿಯ ಮತ್ತೋರ್ವನ ರಿಪೋರ್ಟ ಪಾಸಿಟೀವ್ 42 ಕ್ಕೇರಿದ ಸೊಂಕಿತರ ಸಂಖ್ಯೆ…..

ಹಿರೇಬಾಗೇವಾಡಿಯ ಮತ್ತೋರ್ವನ ರಿಪೋರ್ಟ ಪಾಸಿಟೀವ್ 42 ಕ್ಕೇರಿದ ಸೊಂಕಿತರ ಸಂಖ್ಯೆ….. ಬೆಳಗಾವಿ – ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಹಿರೇಬಾಗೇವಾಡಿಯ ಮತ್ತೋರ್ವ ಸೊಂಕಿತನಿಗೆ ಕೊರೋನಾ ಪಾಸಿಟೀವ್ ಇರುವದು ದೃಡವಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 42 ಕ್ಕೇರಿದೆ

Read More »

ಲಾಕ್ ಡೌನ್ ಸಂಕಟ..ಬೆಳಗಾವಿಯ ಶಹಾಪೂರ ಪ್ರದೇಶದಲ್ಲಿ ರಸ್ತೆಯಲ್ಲೇ ಹೆರಿಗೆ….

ಬೆಳಗಾವಿ- ಬೆಳಗಾವಿಯ ಶಹಾಪೂರ ಪ್ರದೇಶದ ಮಾಹಿ ಆಸ್ಪತ್ರೆ ಬಳಿ ಮಹಿಳೆಯಬ್ಬಳ ರಸ್ತೆಯಲ್ಲೇ ಹೆರಿಗೆ ಆದ ಘಟನೆ ನಡೆದಿದೆ. ಮಹಿಳೆಯನ್ನು ಹೆರಿಗೆಗಾಗಿ ಮಕ್ಕಳ ಆಸ್ಪತ್ರೆಗೆ ತರಲಾಗಿತ್ತು ಆದರೆ ಈ ಆಸ್ಪತ್ರೆ ಬಂದ್ ಆಗಿತ್ತು ಅದಕ್ಕೆ ಈ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಹೋಗುವ ಸಂಧರ್ಭದಲ್ಲಿ ಮಹಿಳೆಯ ಹೆರಿಗೆ ರಸ್ತೆಯಲ್ಲೇ ಆಗಿದೆ . ವಡಗಾವಿ ಮೂಲದ ಈ ಮಹಿಳೆಯನ್ನು ಲಾಕ್ ಡೌನ್ ಸಂಧರ್ಭದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವ ಹಿನ್ನಲೆಯಲ್ಲಿ …

Read More »

ಲಾಕ್ ಡೌನ್ ಬಂದೋಬಸ್ತಿಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು

ಬೆಳಗಿನ ಜಾವ ಮನೆಯಿಂದ ಠಾಣೆಗೆ ಬರುತ್ತಿದ್ದ ಬೆಳಗಾವಿಯ ಪಿ ಎಸ್ ಐ ಸಾವು …. ಬೆಳಗಾವಿ- ಬೆಳಗಿನ ಜಾವ ಮನೆಯಿಂದ ಕರ್ತವ್ಯ ನಿಭಾಯಿಸಲು ಠಾಣೆಗೆ ಬರುತ್ತಿದ್ದ ಬೆಳಗಾವಿಯ ಖಡೇಬಝಾರ್ ಠಾಣೆಯ ಪಿ ಎಸ್ ಐ ಗಣಾಚಾರಿ ಬೈಕ್ ಸ್ಕೀಡ್ ಆಗಿ ಬಿದ್ದು ಸ್ಥಳದಲ್ಲೇ ಸಾವನ್ನೊಪ್ಪಿದ್ದಾರೆ. ಬೆಳಗಾವಿ ಮಹಾನಗರದಲ್ಲಿ ಲಾಕ್ ಡೌನ್ ಬಿಗಿಗೊಳಿಸಲು ಬೆಳಗಿನ ಜಾವದಿಂದಲೇ ಬೆಳಗಾವಿ ಪೋಲೀಸರು ಲಾಕ್ ಡೌನ್ ಬಿಗಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು ಯಳ್ಳೂರ ರಸ್ತೆಯ ನಿವಾಸಿಯಾಗಿದ್ದ ಖಡೇಬಝಾರ್ …

Read More »

ಇನ್ನೂ ನಾಲ್ಕು ದಿನ ಬೆಳಗಾವಿಯ ರವಿವಾರ ಪೇಠೆ ಬಂದ್

  ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಇಂದು ಐದು ಕೊರೋನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬೆಳಗಾವಿಯ ರವಿವಾರಪೇಠೆಯನ್ನು ಸಂಪೂರ್ಣವಾಗಿ ಬಂದ್ ಮಾಡಲು ನಗರ ಪೋಲೀಸ್ ಇಲಾಖೆ ನಿರ್ಧರಿಸಿದೆ . ಬೆಳಗಾವಿಯ ಕ್ಯಾಂಪ್ ಪ್ರದೇಶದ ಮೂವರಿಗೆ,ಮಾಳ ಮಾರುತಿ ಠಾಣೆ ವ್ಯಾಪ್ತಿಯ ಓರ್ವನಿಗೆ ,ಮತ್ತು ಎಪಿ ಎಂ ಸಿ ಠಾಣೆ ವ್ಯಾಪ್ತಿಯ ಏರ್ವನಿಗೆ ಸೊಂಕು ದೃಡವಾದ ಹಿನ್ನಲೆಯಲ್ಲಿ ನಗರ ಪೋಲೀಸ್ ಇಲಾಖೆ ಗಂಭೀರವಾಗಿದ್ದು ನಾಳೆಯಿಂದ ಬೆಳಗಾವಿ ನಗರದಲ್ಲಿ ಖಡಕ್ ಲಾಕ್ …

Read More »